ಅಮೆಜಾನ್ ಸೇಲ್‌ನಲ್ಲಿ ಸುಮಾರು 25,000 ರೂಗಳಿಗೆ ಮಾರಾಟವಾಗುತ್ತಿರುವ ಜಬರ್ದಸ್ತ್ 5G Smartphones ಪಟ್ಟಿ ಇಲ್ಲಿದೆ!

Updated on 06-May-2025
HIGHLIGHTS

ಪ್ರಸ್ತುತ ಅಮೆಜಾನ್ ಸಮ್ಮರ್ ಮಾರಾಟದಲ್ಲಿ (Amazon Great Summer Sale 2025) ನಡೆಯುತ್ತಿದೆ.

ನಿಮ್ಮ ಬಜೆಟ್ ಸುಮಾರು 25,000 ರೂಗಳಿಗಿಂತ ಕಡಿಮೆಯಿದ್ದರೆ ಈ ವಿಶೇಷ ರಿಯಾಯಿತಿಯಲ್ಲಿ ಖರೀದಿಸಬಹುದು.

ನಿಮಗೆ Samsung, OnePlus, Moto, Nothing, Lava ಮತ್ತು Realme ಬ್ರಾಂಡ್ಗಳಿಂದ ಒಂದನ್ನು ಖರೀದಿಸಬಹುದು.

Best 5G Smartphones Under 25000: ನಿಮಗೊಂದು ಹೊಸ 5G ಅನ್ನು ಅಮೆಜಾನ್ ಸಮ್ಮರ್ ಮಾರಾಟದಲ್ಲಿ (Amazon Great Summer Sale 2025) ಖರೀದಿಸಲು ಯೋಚಿಸುತ್ತಿದ್ದರೆ ಅದರಲ್ಲೂ ನಿಮ್ಮ ಬಜೆಟ್ ಸುಮಾರು 25,000 ರೂಗಳಿಗಿಂತ ಕಡಿಮೆಯಿದ್ದರೆ ಈ ವಿಶೇಷ ರಿಯಾಯಿತಿಯಲ್ಲಿ ಅನೇಕ 5G ಸ್ಮಾರ್ಟ್‌ಫೋನ್‌ಗಳನ್ನು (Smartphones) ಸೇಲ್ ಮುಗಿಯುವ ಮುಂಚೆ ಆರ್ಡರ್ ಮಾಡಿ ಪಡೆಯಬಹುದು. ಅಲ್ಲದೆ ಈ ಪಟ್ಟಿಯಲ್ಲಿ ನಿಮಗೆ Samsung, OnePlus, Moto, Nothing, Lava ಮತ್ತು Realme ಬ್ರಾಂಡ್ಗಳಿಂದ ಆರ್ಡರ್ ಮಾಡಬಹುದಾದ ಸ್ಮಾರ್ಟ್‌ಫೋನ್‌ಗಳ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: Mock Drill 2025: ಆಕಸ್ಮಿಕವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೈರನ್ ಸೌಂಡ್ ಬಂದ್ರೆ ಭಯ ಪಡುವ ಅಗತ್ಯಯವಿಲ್ಲ!

Samsung Galaxy A34 5G Smartphone

ಅಮೆಜಾನ್ ಸಮ್ಮರ್ ಮಾರಾಟದಲ್ಲಿ (Amazon Great Summer Sale 2025) ಖರೀದಿಸಲು ಭಾರಿ ರಿಯಾಯಿತಿಯಿಂದಾಗಿ ಈ ಸ್ಯಾಮ್‌ಸಂಗ್ ಎ-ಸರಣಿಯ ಸ್ಮಾರ್ಟ್‌ಫೋನ್‌ನ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ₹19,999 ರೂಗಳಿಗೆ ಇಳಿಸಲಾಗಿದೆ. ಈ ಫೋನ್ ಹಿಂಭಾಗದಲ್ಲಿ 48MP ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಹೊಂದಿದೆ. ಇದು 6.6 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ.

Best 5G Smartphones Under 25000

OnePlus Nord CE4

ಅಮೆಜಾನ್ ಮಾರಾಟದಲ್ಲಿ ಈ ಒನ್‌ಪ್ಲಸ್ ಫೋನ್‌ನ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ₹21,998 ರೂಗಳಿಗೆ ಇಳಿಸಲಾಗಿದೆ. ಈ ಫೋನ್ Qualcomm Snapdragon 7 Gen 3 ಪ್ರೊಸೆಸರ್ ಅನ್ನು ಹೊಂದಿದೆ ಮತ್ತು ಇದರ ದೊಡ್ಡ 5500mAh ಬ್ಯಾಟರಿಯು 100W SuperVOOC ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

Motorola Edge 50 Fusion 5G

ಅಮೆಜಾನ್ ಮೂಲಕ ಮಾರಾಟಕ್ಕೆ ಲಭ್ಯವಿರುವ ಈ Motorola Edge 50 Fusion 5G ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮೊಟೊರೊಲಾ ಕರ್ವ್ಡ್ ಡಿಸ್ಪ್ಲೇ ಫೋನ್‌ನ ರೂಪಾಂತರವನ್ನು ₹20,070 ರೂಗೆ ಖರೀದಿಸಬಹುದು. ಈ ಫೋನ್ IP68 ರೇಟಿಂಗ್ ಹೊಂದಿದ್ದು ಸಿಲಿಕಾನ್ ಪಾಲಿಮರ್ ಬ್ಯಾಕ್ ಜೊತೆಗೆ 68W ಚಾರ್ಜಿಂಗ್ ಹೊಂದಿರುವ 5000mAh ಬ್ಯಾಟರಿಯನ್ನು ಹೊಂದಿದೆ.

Motorola Edge 50 Fusion 5G Smartphone

Honor 200 5G

ಅಮೆಜಾನ್ ಮೂಲಕ ಮಾರಾಟವಾಗುತ್ತಿರುವ ಈ ಪವರ್ಫುಲ್ Honor 200 5G ಫೋನ್ ಹಿಂಭಾಗದಲ್ಲಿ 50MP+50MP+12MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಪ್ರಸ್ತುತ ನೀವು ಸುಮಾರು ₹24,998 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಲಿಮಿಟೆಡ್ ಸಮಯಕ್ಕೆ ಭಾರಿ ರಿಯಾಯಿತಿ ಬೆಲೆಯಲ್ಲಿ ಆರ್ಡರ್ ಮಾಡಬಹುದು.

Nothing Phone 3a 5G

ಪಾರದರ್ಶಕ ಬ್ಯಾಕ್ ಪ್ಯಾನಲ್ ಹೊಂದಿರುವ ನಥಿಂಗ್ ಸ್ಮಾರ್ಟ್‌ಫೋನ್‌ನ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ₹22,999 ರೂ.ಗಳಿಗೆ ಇಳಿಸಲಾಗಿದೆ. ಈ ಫೋನ್ ಹಿಂಭಾಗದಲ್ಲಿ 50MP + 50MP + 8MP ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 120Hz ರಿಫ್ರೆಶ್ ದರ ಮತ್ತು ಗ್ಲಿಫ್ LED ಇಂಟರ್ಫೇಸ್‌ನೊಂದಿಗೆ ಬರುತ್ತದೆ.

ಇದನ್ನೂ ಓದಿ: ನಿಮ್ಮ Fridge ಕೂಲಿಂಗ್ ಮಾಡ್ತಿಲ್ವ? ಮೆಕ್ಯಾನಿಕ್ ಕರಿಸೋ ಮುಂಚೆ ನೀವೇ ಈ 5 ರೀತಿ ಚೆಕ್ ಮಾಡಿ ಹಣ, ಸಮಯ ಎರಡು ಉಳಿಸಿ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :