Acer Super ZX
Acer Super ZX in India: ಭಾರತದಲ್ಲಿ ಪ್ರತಿ ತಿಂಗಳು ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಲೇ ಇರುವುದು ನೀವು ಗಮನಿಸಿರಬಹುದು. ಈಗ ತೈವಾನ್ ಮೂಲದ ಏಸರ್ (Acer) ಅನೇಕ ವರ್ಷಗಳ ನಂತರ ಮತ್ತೆ ಸ್ಮಾರ್ಟ್ಫೋನ್ ವಲಯಕ್ಕೆ ಕಾಲಿಟ್ಟಿದ್ದು ತನ್ನ ಮುಂಬರಲಿರುವ Acer Super ZX ಸ್ಮಾರ್ಟ್ಫೋನ್ ಅನ್ನು ಇದೆ ತಿಂಗಳು ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿ ಈ Acer Super ZX ಸ್ಮಾರ್ಟ್ಫೋನ್ ಅನ್ನು 26ನೇ ಮೇ 2025 ರಂದು ಬಿಡುಗಡೆಗೊಳಿಸಲಿದೆ. ಇದೊಂದು ಎಂಟ್ರಿ ಲೆವೆಲ್ ಅಂದ್ರೆ ಈಗಾಗಲೇ ಬಿಡುಗಡೆಗೂ ಮುಂಚೆಯೇ ಸ್ಮಾರ್ಟ್ಫೋನ್ ಬೆಲೆ ಮತ್ತು ಫೀಚರ್ ಎಲ್ಲವನ್ನು ಈಗಾಗಲೇ ಪೋಸ್ಟ್ ಮಾಡಿದೆ.
ಮೊದಲಿಗೆ ಈ ಮುಂಬರಲಿರುವ Acer Super ZX ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆ ಮಾತನಾಡುವುದಾದರೆ ಈಗಾಗಲೇ ಮೇಲೆ ಹೇಳಿರುವಂತೆ ಕಂಪನಿ ಇದನ್ನು 26ನೇ ಮೇ 2025 ರಂದು ಸಂಜೆ 6:00 ಗಂಟೆಗೆ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಬಿಡುಗಡೆಗೊಳಿಸಲಿದ್ದು ಮುಂದಿನ ತಿಂಗಳು ಮಾರಾಟ ಮಾಡಬಹುದು.
ಇದರ ಬಗ್ಗೆ ಈಗಾಗಲೇ ಕಂಪನಿ ತನ್ನ ವೆಬ್‌ಸೈಟ್ ಮೂಲಕ ಮೈಕ್ರೋಸೈಟ್ ಪೇಜ್ ಸಹ ರಚಿಸಿ ಸ್ಮಾರ್ಟ್ಫೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಪ್ಡೇಟ್ ಮಾಡಿದೆ. ಈ ಸ್ಮಾರ್ಟ್ಫೋನ್ ಬೆಲೆಯನ್ನು ಸಹ ಈಗಾಗಲೇ ನೀಡಿದ್ದು ಸುಮಾರು ₹9,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ಫೋನ್ ಮಾದರಿಗಳ ಬಗ್ಗೆ ಪ್ರಸ್ತುತ ಇನ್ನೂ ಯಾವುದೇ ಮಾಹಿತಿಗಳಿಲ್ಲ.
ಇದನ್ನೂ ಓದಿ: ಗೂಗಲ್‌ನ ‘Try it On’ ಟೂಲ್ ಆನ್‌ಲೈನ್ ಶಾಪಿಂಗ್‌ನಲ್ಲಿ ಹೊಸ ಬಟ್ಟೆ ನಿಮ್ಮ ಮೇಲೆ ಹೇಗೆ ಕಾಣಿಸುತ್ತೆ ಅಂಥ ನೋಡಿ ಖರೀದಿಸಬಹುದು
Acer Super ZX ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ FHD ಡಿಸ್ಪ್ಲೇಯನ್ನು ಹೊಂದಲಿದೆ. ಅಲ್ಲದೆ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 64MP ಮೆಗಾಪಿಕ್ಸೆಲ್ ಸೋನಿ ಪ್ರೈಮರಿ ಕ್ಯಾಮೆರಾವನ್ನು ಮತ್ತೊಂದು 5MP ಅಲ್ಟ್ರಾ ವೈಡ್ ಲೆನ್ಸ್ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದರ ಕ್ರಮವಾಗಿ ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನಿರೀಕ್ಷಿಸಬಹುದು.
Acer Super ZX ಸ್ಮಾರ್ಟ್ಫೋನ್ MediaTek Dimensity 600 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು.