ಮಕ್ಕಳಿಗಾಗಿ ಹೊಸ ಲ್ಯಾಪ್ಟಾಪ್ ಹುಡುಕುತ್ತಿದ್ದಿರಾ? 4GB RAM ಮತ್ತು ಲೇಟೆಸ್ಟ್ ಫೀಚರ್ಗಳ JioBook 11 ಕೈಗೆಟಕುವ ಬೆಲೆಗೆ ಲಭ್ಯ!

Updated on 31-Jan-2024
HIGHLIGHTS

ರಿಲಯನ್ಸ್ ಜಿಯೋ ತಮ್ಮ ಜನಪ್ರಿಯ JioBook 11 (2023) ಬಜೆಟ್ ಲ್ಯಾಪ್‌ಟಾಪ್ ಆಗಿದ್ದು ಅದು ಕೈಗೆಟಕುವ ಬೆಲೆ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ನೀಡುತ್ತದೆ.

ಈ ಲೇಟೆಸ್ಟ್ ಲ್ಯಾಪ್‌ಟಾಪ್ ಸ್ವತಃ ರಿಲಯನ್ಸ್ ಜಿಯೋದಿಂದ ತಯಾರಿಸಲ್ಪಟ್ಟಿದ್ದು ಇದು 11 ಇಂಚಿನ HD ಡಿಸ್ಪ್ಲೇ ಮತ್ತು ಸಮರ್ಥ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ.

ಭಾರತದ ಜನಪ್ರಿತೆ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತಮ್ಮ ಜನಪ್ರಿಯ ಜಿಯೋಬುಕ್ (JioBook 11 (2023) ಬಜೆಟ್ ಲ್ಯಾಪ್‌ಟಾಪ್ ಆಗಿದ್ದು ಅದು ಕೈಗೆಟಕುವ ಬೆಲೆ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ನೀಡುತ್ತದೆ. ಈ ಲೇಟೆಸ್ಟ್ ಲ್ಯಾಪ್‌ಟಾಪ್ ಸ್ವತಃ ರಿಲಯನ್ಸ್ ಜಿಯೋದಿಂದ ತಯಾರಿಸಲ್ಪಟ್ಟಿದ್ದು ಇದು 11 ಇಂಚಿನ HD ಡಿಸ್ಪ್ಲೇ ಮತ್ತು ಸಮರ್ಥ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಕೈಗೆಟುಕುವ ಕಂಪ್ಯೂಟಿಂಗ್ ಪರಿಹಾರವನ್ನು ಬಯಸುವ ವ್ಯಾಪಕ ಶ್ರೇಣಿಯ ಬಳಕೆದಾರರ ಪೂರೈಸುವ ಗುರಿಯನ್ನು ಹೊಂದಿದೆ. ಆದ್ದರಿಂದ ನೀವು ಬಜೆಟ್ ಲ್ಯಾಪ್‌ಟಾಪ್‌ಗಾಗಿ ಹುಡುಕಾಡುತ್ತಿದ್ದರೆ ಮಾರುಕಟ್ಟೆಯಲ್ಲಿದ್ದರೆ JioBook 11 (2023) ಲ್ಯಾಪ್‌ಟಾಪ್‌ನಲ್ಲಿ ಲೈವ್ ಆಗಿರುವ ಅದ್ಭುತ ಡೀಲ್ಗಳನೊಮ್ಮೆ ಪರಿಶೀಲಿಸಿ.

Also Read: FASTag KYC Deadline: ವಾಹನ ಬಳಕೆದಾರರೇ ನಿಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡಲು ಇಂದು ಕೊನೆದಿನ!

JioBook 11 (2023) ಅತ್ಯಾಕರ್ಷಕ ರಿಯಾಯಿತಿಗಳು

ಸಾಮಾನ್ಯವಾಗಿ ಈ JioBook 11 ಲ್ಯಾಪ್ಟಾಪ್ ಮೂಲ MRP ಬೆಲೆಯನ್ನು ನೋಡುವುದುದಾದರೆ 25000 ರೂಗಳಾಗಿವೆ ಆದರೆ ಜಿಯೋ ವೆಬ್‍ಸೈಟ್‍ನಲ್ಲಿ ಆಕರ್ಷಕ ರಿಯಾಯಿತಿ ದರವನ್ನು 14,699 ರುಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ನೀವು ಪೆಟಿಎಂ ಅಪ್ಲಿಕೇಶನ್ ಮೂಲಕ ಖರೀದಿಸಿದರೆ ಇದನ್ನು ಕೇವಲ 14,499 ರೂಗಳಿಗೆ ಖರೀದಿಸಬಹುದು. ಈ ಕೊಡುಗೆಯೊಂದಿಗೆ ಕ್ರೆಡಿಟ್ ಕಾರ್ಡ್ ಬಳಸಿ EMI ಸೌಲಭ್ಯವನ್ನು ಸಹ ಪಡೆಯಬಹುದು. ಆಸಕ್ತರು ಬೇಕಿದ್ದರೆ ಪ್ರತಿ ತಿಂಗಳಿಗೆ ₹924 ರೂಗಳನ್ನು ಯಾವುದೇ ವೆಚ್ಚದ EMI ಆಯ್ಕೆಗಳ ಹೆಚ್ಚುವರಿ ಪ್ರಯೋಜನದೊಂದಿಗೆ ಪಡೆಯಬಹುದು. ನಿಮ್ಮ ಸ್ಥಳದಲ್ಲಿ ಆಫರ್‌ನ ಲಭ್ಯತೆಯನ್ನು ಪರಿಶೀಲಿಸಲು ನಿಮ್ಮ ಪಿನ್ ಕೋಡ್ ಅನ್ನು ಸಹ ನೀವು ನಮೂದಿಸಬೇಕಾಗುತ್ತದೆ.

ಜಿಯೋಬುಕ್ 11 (2023) ವೈಶಿಷ್ಟ್ಯಗಳು

ಇದರ ವಿಶೇಷಣಗಳನ್ನು ನೋಡುವುದಾದರೆ JioBook ಲ್ಯಾಪ್‌ಟಾಪ್ ಲೈಟ್ ಬ್ಲೂ ಬಣ್ಣದ ಆಕರ್ಷಕ ಸಾಧನವಾಗಿದ್ದು ಅದು ಕಣ್ಣಿಗೆ ಹಿತವಾಗಿದೆ. ಇದು ಮ್ಯಾಟ್-ಫಿನಿಶ್ ಮತ್ತು ಅಲ್ಟ್ರಾ ಸ್ಲಿಮ್ ದೇಹದೊಂದಿಗೆ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಇದು ಕೇವಲ ಒಂದು ಕಿಲೋಗ್ರಾಂಗಿಂತ ಕಡಿಮೆ ತೂಕವನ್ನು ಹೊಂದಿದೆ. ಲ್ಯಾಪ್‌ಟಾಪ್ 11.6 ಇಂಚಿನ ಆಂಟಿ-ಗ್ಲೇರ್ HD ಸ್ಕ್ರೀನ್ ಮತ್ತು ಸ್ಟಿರಿಯೊ ಸ್ಪೀಕರ್ಗಳು, ಇನ್ಫಿನಿಟಿ ಕೀಬೋರ್ಡ್ ಹೊಂದಿದ್ದು Mediatek MT 8788 Octa Core 2.0Ghz ಆಕ್ಟಾ-ಕೋರ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಹೆಚ್ಚುವರಿಯಾಗಿ ಇದರಲ್ಲಿ 4GB LPDDR4 RAM ಮತ್ತು 64GB ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. 4G-LTE ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ, 75+ ಕೀಬೋರ್ಡ್ ಶಾರ್ಟ್‌ಕಟ್‌ಗಳು, ಟ್ರ್ಯಾಕ್‌ಪ್ಯಾಡ್ ಗೆಸ್ಚರ್‌ಗಳು, ವೈರ್‌ಲೆಸ್ ಪ್ರಿಂಟಿಂಗ್ ಮತ್ತು ಬಹುಕಾರ್ಯಕ ಪರದೆಯಂತಹ ವೈಶಿಷ್ಟ್ಯಗಳೊಂದಿಗೆ ಇದು ತನ್ನದೇ ಆದ JioOS ಹೊಂದಿದೆ. JioOS ಬಳಕೆದಾರ ಸ್ನೇಹಿ ಮತ್ತು ಪರಿಚಿತ ಇಂಟರ್ಫೇಸ್ ಅನ್ನು ಹೊಂದಿದೆ. ಈ ಜನಪ್ರಿಯ JioBook 11 (2023) ಬಜೆಟ್ ಲ್ಯಾಪ್‌ಟಾಪ್ ಸುಮಾರು 8 ಗಂಟೆಗಳ ಬ್ಯಾಟರಿ ಬಾಳಿಕೆ ಇದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :