ಪ್ರಮುಖ ಟೆಕ್ ಬ್ರ್ಯಾಂಡ್ HP ಇದೀಗ ಭಾರತದಲ್ಲಿ HyperX Omen 15 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಲಾಂಚ್ ಮಾಡಿದೆ. ಸಂಸ್ಥೆಯು ಈ laptop ಅನ್ನು ಗೇಮ್ ಪ್ರಿಯರ ಮತ್ತು ಕಂಟೆಂಟ್ ಕ್ರಿಯೆಟ್ ಮಾಡುವವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಿದೆ. ದೀರ್ಘ ಸಮಯ ಬಳಕೆಯಲ್ಲಿಯೂ ಸ್ಥಿರ ಕಾರ್ಯಕ್ಷಮತೆ ನೀಡುವಂತೆ, ವೇಗದ ಪ್ರತಿಕ್ರಿಯೆ ಹಾಗೂ ಪರಿಣಾಮಕಾರಿ ತಾಪಮಾನ ನಿಯಂತ್ರಣಕ್ಕೆ ಗಮನ ನೀಡಲಾಗಿದೆ. ಈ ಹೊಸ HyperX Omen 15 ಲ್ಯಾಪ್‌ಟಾಪ್ Intel Core i7, RTXಗ್ರಾಫಿಕ್ಸ್, ಮತ್ತು AI ಟ್ಯೂನಿಂಗ್ ಅನ್ನು ಒಳಗೊಂಡಿದೆ. ಹಾಗಾದರೆ HP HyperX Omen 15 ಗೇಮಿಂಗ್ ಲ್ಯಾಪ್‌ಟಾಪ್ ಬೆಲೆ ಹಾಗೂ ಫೀಚರ್ಸ್ ಕುರಿತು ಮುಂದೆ ತಿಳಿಯೋಣ.
Also Read : ಭಾರೀ ಡಿಸ್ಕೌಂಟ್‌ನಲ್ಲಿ ದೈತ್ಯ Oppo Find X8 Pro ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಸಕಾಲ!
HP ಸಂಸ್ಥೆಯು ಭಾರತದ ಮಾರುಕಟ್ಟೆಗೆ ತನ್ನ ನೂತನ HyperX Omen 15 ಗೇಮಿಂಗ್ ಲ್ಯಾಪ್‌ಟಾಪ್ ಪರಿಚಯಿಸುವ ಮೂಲಕ ಗೇಮ್ ಪ್ರಿಯರಿಗೆ ಖುಷಿ ನೀಡಿದೆ. ಅಂದಹಾಗೆ ಭಾರತದಲ್ಲಿ HyperX Omen 15 ಗೇಮಿಂಗ್ ಲ್ಯಾಪ್‌ಟಾಪ್ ಬೆಲೆ 1,49,999 ರೂಗಳಿಂದ ರಿಂದ ಪ್ರಾರಂಭವಾಗುತ್ತದೆ. ಇನ್ನು ಆಸಕ್ತ ಗ್ರಾಹಕರು ಈ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು Flipkart ಇ ಕಾಮರ್ಸ್ ತಾಣದಲ್ಲಿ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಗೇಮಿಂಗ್ ಲ್ಯಾಪ್‌ಟಾಪ್ ಶ್ಯಾಡೋ ಬ್ಲಾಕ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಈ ಲ್ಯಾಪ್‌ಟಾಪ್ 15.3 ಇಂಚಿನ WQXGA IPS ಡಿಸ್ಪ್ಲೇಯನ್ನು ಹೊಂದಿದ್ದು 2,560×1,600 ಪಿಕ್ಸೆಲ್‌ಗಳ ರೆಸಲ್ಯೂಶನ್ ಜೊತೆಗೆ 180Hz ರಿಫ್ರೆಶ್ ದರ ಪಡೆದಿದೆ. ಅಲ್ಲದೇ ಇದು 91 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದ ಜೊತೆಗೆ 100 ಪ್ರತಿಶತ sRGB ಕಲರ್ ಕವರೇಜ್ ಹಾಗೂ ಆಂಟಿ-ಗ್ಲೇರ್ ಆಯ್ಕೆಗಳನ್ನು ಒಳಗೊಂಡಿದೆ. ಇದು 14 ನೇ ತಲೆಮಾರಿನ Intel Core i7 14650HX ಚಿಪ್‌ನೊಂದಿಗೆ 16 ಕೋರ್‌ಗಳು ಮತ್ತು 24 ಥ್ರೆಡ್‌ಗಳ ಪವರ್ ಪಡೆದಿದೆ. ಇನ್ನು ಇದರ ಗ್ರಾಫಿಕ್ಸ್ 8GB GDDR7 ಮೆಮೊರಿ ಜೊತೆಗೆ Nvidia GeForce RTX 5060 ಲ್ಯಾಪ್‌ಟಾಪ್ GPU ನಿರ್ವಹಿಸುತ್ತದೆ.
HP ಕಂಪನಿಯ ಈ ಹೊಸ ಲ್ಯಾಪ್‌ಟಾಪ್ ಒಟ್ಟಾರೇ 170W ಪ್ರೊಸೆಸರ್ ಪವರ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೇ ಇದು ಕಾರ್ಯಕ್ಷಮತೆ ಮತ್ತು ಥರ್ಮಲ್‌ಗಳನ್ನು ಕ್ರಿಯಾತ್ಮಕವಾಗಿ ನಿರ್ವಹಿಸಲು ಅನ್‌ಲೀಶ್ಡ್ ಮೋಡ್‌ನೊಂದಿಗೆ OMEN AI ಅನ್ನು ಬಳಕೆ ಮಾಡುತ್ತದೆ. ಹಾಗೆಯೇ ಇದು 24GB RAM ಮತ್ತು 1TB SSD ಆಯ್ಕೆ ಹೊಂದಿರುವ ಜೊತೆಗೆ ಸ್ಟೋರೇಜ್ ವಿಸ್ತರಣೆಗಾಗಿ dual M.2 ಬೆಂಬಲ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ 5.4, ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳು ಇವೆ.
ಅದೇ ರೀತಿ ಈ ಲ್ಯಾಪ್‌ಟಾಪ್ HDR ಸಪೋರ್ಟ್ ಮತ್ತು ಡ್ಯುಯಲ್ ರಿಯರ್ ಮೈಕ್ರೊಫೋನ್‌ಗಳ ಜೊತೆಗೆ 1080p ಫುಲ್ HD ವೆಬ್‌ಕ್ಯಾಮ್ ಅನ್ನು ಸಹ ಒದಗಿಸಿದೆ. ಹಾಗೆಯೇ HP ಯ ಈ ಗೇಮಿಂಗ್ ಲ್ಯಾಪ್‌ಟಾಪ್ 70Wh ಬ್ಯಾಟರಿ ಬ್ಯಾಕ್‌ಅಪ್ ಬೆಂಬಲಿತ ಆಗಿದೆ ಇದು 30 ನಿಮಿಷಗಳಲ್ಲಿ ಶೇ 50% ರಷ್ಟು ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೇ 280W ಪವರ್ ಅಡಾಪ್ಟರ್ ಆಯ್ಕೆಯನ್ನು ಪಡೆದಿದೆ.