YouTube AI Tools
YouTube AI Tools: ಜಗತ್ತಿನ ಜನಪ್ರಿಯ ಮತ್ತು ಸಿಕ್ಕಾಪಟ್ಟೆ ಬಳಕೆಯಲ್ಲಿರುವ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ ಯುಟ್ಯೂಬ್ (YouTube) ತನ್ನ ‘ಮೇಡ್ ಆನ್ ಯೂಟ್ಯೂಬ್’ ಕಾರ್ಯಕ್ರಮದಲ್ಲಿ ಯೂಟ್ಯೂಬ್ ವಿವಿಧ ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಲಿತ ಫೀಚರ್ಗಳನ್ನು ಬಿಡುಗಡೆ ಮಾಡಿತು. ಇದನ್ನು ಯೂಟ್ಯೂಬ್ ಶಾರ್ಟ್ಸ್ ಕ್ರಿಯೇಟರ್ಗಳಿಗಾಗಿ ಮುಖ್ಯವಾಗಿ ಪರಿಚಯಿಸಿದ್ದು ಹೊಸ New Short Creation Tools ಸಹಾಯದಿಂದ ಹೊಸ ವೀಡಿಯೊಗಳ ಬ್ಯಾಕ್‌ಗ್ರೌಂಡ್ ಮತ್ತು ಕ್ಲಿಪ್‌ಗಳ ಸೌಂಡ್ ಉಚಿತವಾಗಿ ರಚಿಸಲು ಸಾಧ್ಯವಾಗುತ್ತದೆ. ಇದು ಕ್ರಿಯೇಟರ್ಗಳಿಗೆ ತಮ್ಮ ಪ್ರೇಕ್ಷಕರೊಂದಿಗೆ ಲೈವ್ ಚಾಟ್ ಮಾಡುವುದರೊಂದಿಗೆ 75 ಕ್ಕೂ ಹೆಚ್ಚು ಗೇಮ್ ಆಡಲು ಅನುಮತಿಸುತ್ತದೆ.
ಪ್ರಸ್ತುತ ಗೂಗಲ್ ಡೀಪ್‌ಮೈಂಡ್ ಜೊತೆ ಪಾಲುದಾರಿಕೆ ಹೊಂದಿರುವ ಯೂಟ್ಯೂಬ್ ವಿಯೋ 3 ವಿಡಿಯೋ ಜನರೇಷನ್ ಎಐ ಮಾದರಿಯ (YouTube AI Tools) ಕಸ್ಟಮ್ ಆವೃತ್ತಿಯನ್ನು ಯೂಟ್ಯೂಬ್ ಶಾರ್ಟ್ಸ್‌ನಲ್ಲಿ ಸಂಯೋಜಿಸಿದೆ ಎಂದು ಹೇಳಿಕೊಂಡಿದೆ. ಕ್ರಿಯೇಟರ್ಗಳು ಈಗ ಪ್ಲಾಟ್‌ಫಾರ್ಮ್‌ನಿಂದ ಧ್ವನಿಗಳೊಂದಿಗೆ ವೀಡಿಯೊ ಹಿನ್ನೆಲೆಗಳು ಮತ್ತು ಕ್ಲಿಪ್‌ಗಳನ್ನು ರಚಿಸಬಹುದು. ಈ ಟೂಲ್ “ಕಡಿಮೆ ಲೇಟೆನ್ಸಿ” ಯೊಂದಿಗೆ 480p ರೆಸಲ್ಯೂಶನ್ ವೀಡಿಯೊಗಳನ್ನು ಉಚಿತವಾಗಿ ರಚಿಸುತ್ತದೆ ಎಂದು ಹೇಳಲಾಗಿದೆ.
ಪ್ರಸ್ತುತ ಈ ಫೀಚರ್ ಅನ್ನು ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿರುವ ಕ್ರಿಯೇಟರ್ಗಳಿಗಾಗಿ ಬಿಡುಗಡೆಯಾಗಿದ್ದು ಈ ಹೊಸ ಯೂಟ್ಯೂಬ್ ಶಾರ್ಟ್ಸ್ ವೈಶಿಷ್ಟ್ಯವನ್ನು ರಚಿಸು ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಬಳಸಬಹುದು. ನಂತರ ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ “ಸ್ಪಾರ್ಕಲ್ ಐಕಾನ್” ಅನ್ನು ಕ್ಲಿಕ್ ಮಾಡಬಹುದು. ಹೊಸ AI ಟೂಲ್ ಶೀಘ್ರದಲ್ಲೇ ಭಾರತ ಸೇರಿ ಇತರ ಪ್ರದೇಶಗಳಲ್ಲಿ ಲಭ್ಯವಿರುತ್ತದೆ ಎಂದು ಯೂಟ್ಯೂಬ್ ತಿಳಿಸಿದೆ.
Also Read: Flipkart BBD Sale: ಪ್ರತಿದಿನ ಈ ಸಮಯ 50% ಡಿಸ್ಕೌಂಟ್ ಪಡೆಯುವ ಸುವರ್ಣಾವಕಾಶ ನೀಡುತ್ತಿರುವ ಫ್ಲಿಪ್ಕಾರ್ಟ್!
ಇದರ ಜೊತೆಗೆ YouTube Shorts ಕ್ರಿಯೇಟರ್ಗಳಿಗೆ ಶೀಘ್ರದಲ್ಲೇ ಸ್ಟಿಲ್ ಪೋಟ್ರೇಟ್ಗಳಿಂದ ವೀಡಿಯೊವನ್ನು ರಚಿಸಲು ತಮ್ಮ ವೀಡಿಯೊಗಳ ನೋಟವನ್ನು “ಪಾಪ್ ಆರ್ಟ್ ಅಥವಾ ಒರಿಗಮಿ” ಆಗಿ ಕಾಣುವಂತೆ ಪರಿವರ್ತಿಸಲು ಮತ್ತು ಹೊಸ Veo 3 AI ಮಾದರಿಯನ್ನು ಬಳಸಿಕೊಂಡು ಪಠ್ಯ ಪ್ರಾಂಪ್ಟ್‌ಗಳೊಂದಿಗೆ ಹೊಸ ಪಾತ್ರ, ಪ್ರಾಪ್ ಅಥವಾ ಎಫೆಕ್ಟ್ಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಮುಂಬರುವ ತಿಂಗಳುಗಳಲ್ಲಿ ವೈಶಿಷ್ಟ್ಯವನ್ನು ಪರಿಚಯಿಸಲು ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.
Google Veo 3 ಅನ್ನು YouTube ತನ್ನ ಪಾಡ್‌ಕ್ಯಾಸ್ಟ್ ವಿಭಾಗಕ್ಕೆ ಸಂಯೋಜಿಸುತ್ತಿದೆ. ಇದು ಪಾಡ್‌ಕ್ಯಾಸ್ಟರ್‌ಗಳು ಪೂರ್ಣ ಪಾಡ್‌ಕ್ಯಾಸ್ಟ್ ಸಂಚಿಕೆಗಳಿಂದ ವೀಡಿಯೊ ಕ್ಲಿಪ್‌ಗಳು ಮತ್ತು ಕಿರುಚಿತ್ರಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಪಾಡ್‌ಕ್ಯಾಸ್ಟ್‌ಗಾಗಿ ಸೃಷ್ಟಿಕರ್ತರು ವೀಡಿಯೊವನ್ನು ಶೂಟ್ ಮಾಡದಿದ್ದರೆ AI-ಚಾಲಿತ ಉಪಕರಣವು ಪಾಡ್‌ಕ್ಯಾಸ್ಟ್‌ನಿಂದ ಆಡಿಯೊ ಫೈಲ್‌ಗಳನ್ನು ಬಳಸಿಕೊಂಡು “ಕಸ್ಟಮೈಸ್ ಮಾಡಬಹುದಾದ” ವೀಡಿಯೊವನ್ನು ರಚಿಸುತ್ತದೆ.