ಜನಪ್ರಿಯ ಶಿಯೋಮಿ ತನ್ನ ಹೊಸ Xiaomi Power Bank 5i ಹೆಸರಿನ ಪವರ್ ಬ್ಯಾಂಕ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಪವರ್ ಬ್ಯಾಂಕ್ 20000mAh ಬ್ಯಾಟರಿ ಸಪೋರ್ಟ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಡಿಜಿಟಲ್ ಡಿಸ್‌ಪ್ಲೇ ಹಾಗೂ ಬಿಲ್ಟ್-ಇನ್ USB Type-C ಕೇಬಲ್. ಹಾಗಾದರೇ ಶಿಯೋಮಿ ಕಂಪನಿಯಿಂದ ಹೊಸದಾಗಿ ಬಿಡುಗಡೆ ಆಗಲಿರುವ ಪವರ್ ಬ್ಯಾಂಕ್‌ನ ಬೆಲೆ ಮತ್ತು ಲಭ್ಯತೆ ಕುರಿತ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.
Also Read : ಸಖತ್ ಸ್ಟೈಲಿಶ್ ಲುಕ್ ಇರುವ Oppo K14x 5G ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ಶಿಯೋಮಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಶಿಯೋಮಿ ಪವರ್ ಬ್ಯಾಂಕ್ 5i ಡಿವೈಸ್ 20000mAh ಸಪೋರ್ಟ್ ಜೊತೆಗೆ 67W ಚಾರ್ಜಿಂಗ್ ಅನ್ನು ಹೊಂದಿರಲಿದೆ. ಈ ಸಾಧನವನ್ನು ಇದೇ ಜುಲೈ 23 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಲಾಂಚ್ ಕುರಿತಾಗಿ ಅಮೆಜಾನ್ ಇ ಕಾಮರ್ಸ್‌ನಲ್ಲಿ ಈಗಾಗಲೇ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಬಿಡುಗಡೆ ಬಳಿಕ ಈ ಪವರ್ ಬ್ಯಾಂಕ್ ಅಮೆಜಾನ್ ತಾಣದ ಮೂಲಕ ಖರೀದಿಗೆ ಲಭ್ಯವಾಗಲಿದೆ ಎಂಬುದು ದೃಢಪಟ್ಟಿದೆ. ಶಿಯೋಮಿ ತನ್ನ ಅಧಿಕೃತ ವೆಬ್‌ಸೈಟ್ ಹಾಗೂ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿಯೂ ಈ ಹೊಸ ಪವರ್ ಬ್ಯಾಂಕ್ ಅನ್ನು ಮಾರಾಟ ಮಾಡುವ ಸಾಧ್ಯತೆ ಇದೆ.
ಶಿಯೋಮಿ ಪವರ್ ಬ್ಯಾಂಕ್ 5i ಪವರ್ ಬ್ಯಾಂಕ್‌ನಲ್ಲಿ ಒಟ್ಟು ಮೂರು ಚಾರ್ಜಿಂಗ್ ಔಟ್‌ಪುಟ್‌ಗಳು ಲಭ್ಯ ಇರಲಿವೆ. ಇದರಲ್ಲಿ ಬಿಲ್ಟ್-ಇನ್ USB Type-C ಕೇಬಲ್, ಒಂದು USB Type-C ಪೋರ್ಟ್ ಹಾಗೂ ಒಂದು USB Type-A ಪೋರ್ಟ್ ಸೇರಿವೆ. ಇದರ ಮೂಲಕ ಒಂದೇ ಸಮಯದಲ್ಲಿ ಮೂರು ಡಿವೈಸ್ ಚಾರ್ಜ್ ಮಾಡಬಹುದಾಗಿದೆ. ಹಾಗೆಯೇ ವೈರ್‌ಲೆಸ್ ಇಯರ್‌ಬಡ್ಸ್, ಸ್ಮಾರ್ಟ್ ಬ್ಯಾಂಡ್‌ಗಳಿಗಾಗಿ Low Current ಚಾರ್ಜಿಂಗ್ ಮೋಡ್ ಅನ್ನು ಕೂಡ ನೀಡಲಾಗಿದೆ. USB Type-C ಪೋರ್ಟ್ ಬಳಸುವಾಗ ಈ ಮೋಡ್ ಸ್ವಯಂಚಾಲಿತವಾಗಿ ಸಕ್ರಿಯವಾಗುವ ಸೌಲಭ್ಯ ಇರಲಿದೆ.
ಈ ಪವರ್ ಬ್ಯಾಂಕ್ ಬಿಲ್ಟ್-ಇನ್ USB Type-C ಕೇಬಲ್ ಮತ್ತು USB Type-C ಪೋರ್ಟ್ ಎರಡೂ 65W ಇನ್‌ಪುಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಹಾಗೆಯೇ ಇದೇ ಕೇಬಲ್ ಮತ್ತು Type-C ಪೋರ್ಟ್ ಮೂಲಕ 67W ವರೆಗೆ ಫಾಸ್ಟ್ ಔಟ್‌ಪುಟ್ ಚಾರ್ಜಿಂಗ್ ಲಭ್ಯವಾಗಲಿದೆ. ಇನ್ನು USB Type-A ಪೋರ್ಟ್ ಮೂಲಕ ಚಾರ್ಜಿಂಗ್ ಪ್ರೋಟೋಕಾಲ್‌ಗೆ ಅನುಗುಣವಾಗಿ 12V/1.67A ವರೆಗೆ ಔಟ್‌ಪುಟ್ ನೀಡುವ ಬೆಂಬಲ ಇರಲಿದೆ.