ಶೀಘ್ರದಲ್ಲೇ ಬರಲಿದೆ Xiaomi Power Bank 5i ಪವರ್‌ ಬ್ಯಾಂಕ್‌! 20000mAh ಬ್ಯಾಟರಿ

HIGHLIGHTS

ಸದ್ಯದಲ್ಲೇ ಶಿಯೋಮಿಯಿಂದ ಹೊಸ ಪವರ್‌ ಬ್ಯಾಂಕ್ ಲಾಂಚ್

ಮುಂಬರುವ ಹೊಸ ಪವರ್‌ಬ್ಯಾಂಕ್‌ 20000mAh ಬ್ಯಾಟರಿ ಪಡೆದಿರಲಿದೆ

ಶಿಯೋಮಿ ಪವರ್ ಬ್ಯಾಂಕ್‌ 5i ಪವರ್‌ ಬ್ಯಾಂಕ್‌ನಲ್ಲಿ 67W ಫಾಸ್ಟ್ ಚಾರ್ಜಿಂಗ್ ಇರಲಿದೆ

ಶೀಘ್ರದಲ್ಲೇ ಬರಲಿದೆ Xiaomi Power Bank 5i ಪವರ್‌ ಬ್ಯಾಂಕ್‌! 20000mAh ಬ್ಯಾಟರಿ

ಜನಪ್ರಿಯ ಶಿಯೋಮಿ ತನ್ನ ಹೊಸ Xiaomi Power Bank 5i ಹೆಸರಿನ ಪವರ್‌ ಬ್ಯಾಂಕ್‌ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಪವರ್ ಬ್ಯಾಂಕ್‌ 20000mAh ಬ್ಯಾಟರಿ ಸಪೋರ್ಟ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಡಿಜಿಟಲ್ ಡಿಸ್‌ಪ್ಲೇ ಹಾಗೂ ಬಿಲ್ಟ್-ಇನ್ USB Type-C ಕೇಬಲ್. ಹಾಗಾದರೇ ಶಿಯೋಮಿ ಕಂಪನಿಯಿಂದ ಹೊಸದಾಗಿ ಬಿಡುಗಡೆ ಆಗಲಿರುವ ಪವರ್‌ ಬ್ಯಾಂಕ್‌ನ ಬೆಲೆ ಮತ್ತು ಲಭ್ಯತೆ ಕುರಿತ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

Digit.in Survey
✅ Thank you for completing the survey!

Also Read : ಸಖತ್ ಸ್ಟೈಲಿಶ್‌ ಲುಕ್‌ ಇರುವ Oppo K14x 5G ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

Xiaomi Power Bank 5i ಶೀಘ್ರದಲ್ಲೇ ಬಿಡುಗಡೆ

ಶಿಯೋಮಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಶಿಯೋಮಿ ಪವರ್ ಬ್ಯಾಂಕ್‌ 5i ಡಿವೈಸ್‌ 20000mAh ಸಪೋರ್ಟ್‌ ಜೊತೆಗೆ 67W ಚಾರ್ಜಿಂಗ್ ಅನ್ನು ಹೊಂದಿರಲಿದೆ. ಈ ಸಾಧನವನ್ನು ಇದೇ ಜುಲೈ 23 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಲಾಂಚ್‌ ಕುರಿತಾಗಿ ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಈಗಾಗಲೇ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಬಿಡುಗಡೆ ಬಳಿಕ ಈ ಪವರ್ ಬ್ಯಾಂಕ್ ಅಮೆಜಾನ್‌ ತಾಣದ ಮೂಲಕ ಖರೀದಿಗೆ ಲಭ್ಯವಾಗಲಿದೆ ಎಂಬುದು ದೃಢಪಟ್ಟಿದೆ. ಶಿಯೋಮಿ ತನ್ನ ಅಧಿಕೃತ ವೆಬ್‌ಸೈಟ್ ಹಾಗೂ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿಯೂ ಈ ಹೊಸ ಪವರ್ ಬ್ಯಾಂಕ್ ಅನ್ನು ಮಾರಾಟ ಮಾಡುವ ಸಾಧ್ಯತೆ ಇದೆ.

Xiaomi Power Bank 5i 20000mAh

ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಶಿಯೋಮಿ ಪವರ್ ಬ್ಯಾಂಕ್‌ 5i ಪವರ್ ಬ್ಯಾಂಕ್‌ನಲ್ಲಿ ಒಟ್ಟು ಮೂರು ಚಾರ್ಜಿಂಗ್ ಔಟ್‌ಪುಟ್‌ಗಳು ಲಭ್ಯ ಇರಲಿವೆ. ಇದರಲ್ಲಿ ಬಿಲ್ಟ್-ಇನ್ USB Type-C ಕೇಬಲ್, ಒಂದು USB Type-C ಪೋರ್ಟ್ ಹಾಗೂ ಒಂದು USB Type-A ಪೋರ್ಟ್ ಸೇರಿವೆ. ಇದರ ಮೂಲಕ ಒಂದೇ ಸಮಯದಲ್ಲಿ ಮೂರು ಡಿವೈಸ್‌ ಚಾರ್ಜ್ ಮಾಡಬಹುದಾಗಿದೆ. ಹಾಗೆಯೇ ವೈರ್‌ಲೆಸ್ ಇಯರ್‌ಬಡ್ಸ್, ಸ್ಮಾರ್ಟ್ ಬ್ಯಾಂಡ್‌ಗಳಿಗಾಗಿ Low Current ಚಾರ್ಜಿಂಗ್ ಮೋಡ್‌ ಅನ್ನು ಕೂಡ ನೀಡಲಾಗಿದೆ. USB Type-C ಪೋರ್ಟ್ ಬಳಸುವಾಗ ಈ ಮೋಡ್ ಸ್ವಯಂಚಾಲಿತವಾಗಿ ಸಕ್ರಿಯವಾಗುವ ಸೌಲಭ್ಯ ಇರಲಿದೆ.

ಈ ಪವರ್‌ ಬ್ಯಾಂಕ್‌ ಬಿಲ್ಟ್-ಇನ್ USB Type-C ಕೇಬಲ್ ಮತ್ತು USB Type-C ಪೋರ್ಟ್ ಎರಡೂ 65W ಇನ್‌ಪುಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಹಾಗೆಯೇ ಇದೇ ಕೇಬಲ್ ಮತ್ತು Type-C ಪೋರ್ಟ್ ಮೂಲಕ 67W ವರೆಗೆ ಫಾಸ್ಟ್ ಔಟ್‌ಪುಟ್ ಚಾರ್ಜಿಂಗ್ ಲಭ್ಯವಾಗಲಿದೆ. ಇನ್ನು USB Type-A ಪೋರ್ಟ್ ಮೂಲಕ ಚಾರ್ಜಿಂಗ್ ಪ್ರೋಟೋಕಾಲ್‌ಗೆ ಅನುಗುಣವಾಗಿ 12V/1.67A ವರೆಗೆ ಔಟ್‌ಪುಟ್ ನೀಡುವ ಬೆಂಬಲ ಇರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile