WWDC 2026: macOS 27 Golden Gate ಘೋಷಣೆ; ಸಿರಿ ಮತ್ತು AI ಆಯ್ಕೆಗಳಲ್ಲಿ ಮಹತ್ತರ ಬದಲಾವಣೆ

WWDC 2026: macOS 27 Golden Gate ಘೋಷಣೆ; ಸಿರಿ ಮತ್ತು AI ಆಯ್ಕೆಗಳಲ್ಲಿ ಮಹತ್ತರ ಬದಲಾವಣೆ

WWDC 2026: ಬಹುನಿರೀಕ್ಷಿತ ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆನ್ಸ ಕಾರ್ಯಕ್ರಮದಲ್ಲಿ ಟೆಕ್ ದೈತ್ಯ Apple ಸಂಸ್ಥೆಯು ತನ್ನ ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಅನಾವರಣ ಮಾಡಿದೆ. ಕಾರ್ಯಕ್ರಮದಲ್ಲಿ iOS 27, iPadOS 27, watchOS 27, tvOS 27 ಹಾಗೂ visionOS 27 ಜೊತೆಗೆ Mac ಕಂಪ್ಯೂಟರ್‌ಗಳಿಗಾಗಿ macOS 27 Golden Gate ಅನ್ನು ಕೂಡ ಪರಿಚಯಿಸಲಾಗಿದೆ. macOS Tahoe 26ಗೆ ಉತ್ತರಾಧಿಕಾರಿಯಾಗಿ ಬರುತ್ತಿರುವ ಈ ಹೊಸ ಆವೃತ್ತಿ, ಕೃತಕ ಬುದ್ಧಿಮತ್ತೆ (AI) ಆಧಾರಿತ ಫೀಚರ್ಸ್‌ಗಳು, ಅಪ್‌ಗ್ರೇಡ್‌ ಸಿರಿ, ಹೊಸ ವಿನ್ಯಾಸ ಬದಲಾವಣೆಗಳು ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಹಲವು ಅಪ್‌ಡೇಟ್‌ಗಳನ್ನು ಒಳಗೊಂಡಿದೆ. ವಿಶೇಷವಾಗಿ Apple Silicon ಪ್ರೊಸೆಸರ್ ಹೊಂದಿರುವ Mac‌ ಗಳಿಗೆ ಈ ಅಪ್‌ಡೇಟ್ ಹೆಚ್ಚು ಹೊಂದುವಂತೆ ರೂಪಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಜನಪ್ರಿಯ Vivo T5 Pro 5G ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ! ಆಕರ್ಷಕ ಫೀಚರ್ಸ್‌

WWDC 2026: macOS 27 Golden Gate

ಸಂಸ್ಥೆಯ ಹೊಸ macOS 27 Golden Gate ಒಂದು ಮಹತ್ವದ ಮೈಲಿಗಲ್ಲು ಸಹ ಹೌದು. ಏಕೆಂದರೆ ಇದು ಇಂಟೆಲ್ ಆಧಾರಿತ Mac ಕಂಪ್ಯೂಟರ್‌ಗಳನ್ನು ಬೆಂಬಲಿಸದ ಮೊದಲ ಪ್ರಮುಖ macOS ಆವೃತ್ತಿಯಾಗಿದೆ. ಆಪಲ್‌ ಈಗಾಗಲೇ macOS Tahoe 26 ಇಂಟೆಲ್ ಮ್ಯಾಕ್‌ಗಳಿಗೆ ದೊರೆಯುವ ಕೊನೆಯ ದೊಡ್ಡ ಫೀಚರ್ ಅಪ್‌ಡೇಟ್ ಎಂದು ತಿಳಿಸಿತ್ತು. ಮುಂದಿನ ಮೂರು ವರ್ಷಗಳವರೆಗೆ ಭದ್ರತಾ ಅಪ್‌ಡೇಟ್‌ಗಳು ಲಭ್ಯವಿದ್ದರೂ ಹೊಸ ಫೀಚರ್ಸ್‌ಗಳು ಮತ್ತು AI ಸಾಮರ್ಥ್ಯಗಳು ಆಪಲ್‌ Silicon ಆಧಾರಿತ Mac‌ಗಳಿಗೆ ಮಾತ್ರ ಸೀಮಿತವಾಗಲಿವೆ.

WWDC 2026

Liquid Glass ವಿನ್ಯಾಸಕ್ಕೆ ಹೊಸ ಟಚ್

ಕಳೆದ ವರ್ಷ ಪರಿಚಯಿಸಿದ Liquid Glass ವಿನ್ಯಾಸವನ್ನು ಆಪಲ್‌ ಮತ್ತಷ್ಟು ಸುಧಾರಿಸಿದೆ. ಕೆಲವು ಬಳಕೆದಾರರು ಪಾರದರ್ಶಕತೆ ಪರಿಣಾಮಗಳಿಂದ ಓದುವಿಕೆ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಇದೀಗ ಬಳಕೆದಾರರು ಆ ಪರಿಣಾಮಗಳ ತೀವ್ರತೆಯನ್ನು ತಮ್ಮ ಇಚ್ಛೆಯಂತೆ ನಿಯಂತ್ರಿಸಬಹುದು. ಇದರ ಜೊತೆಗೆ ವಿಂಡೋಗಳು ಹಾಗೂ ಇತರ ಇಂಟರ್‌ಫೇಸ್ ಅಂಶಗಳ ವಿನ್ಯಾಸವನ್ನೂ ಆಪಲ್‌ ಸಂಸ್ಥೆಯು ಪರಿಷ್ಕರಿಸಿದ್ದು, ಸಂಪೂರ್ಣ ಸಿಸ್ಟಮ್‌ಗೆ ಹೆಚ್ಚು ಏಕರೂಪದ ಮತ್ತು ಆಕರ್ಷಕ ನೋಟ ನೀಡಲಾಗಿದೆ.

AI ಮತ್ತು ಕಾರ್ಯಕ್ಷಮತೆಗೆ ಶಕ್ತಿ

macOS 27 ಕೇವಲ ವಿನ್ಯಾಸ ಬದಲಾವಣೆಗಳಿಗೆ ಸೀಮಿತವಾಗಿಲ್ಲ. ದೈನಂದಿನ ಬಳಕೆಯಲ್ಲಿ ಮ್ಯಾಕ್‌ ಹೆಚ್ಚು ವೇಗವಾಗಿ ಮತ್ತು ಸ್ಪಂದಿಸುವಂತೆ ಮಾಡಲು ಹಲವು ಅಪ್‌ಡೇಟ್ಸ್‌ಗಳನ್ನು ಮಾಡಲಾಗಿದೆ. Apple Intelligence ವ್ಯಾಪ್ತಿಯನ್ನೂ ವಿಸ್ತರಿಸಲಾಗಿದ್ದು, ಹೊಸ AI ಪರಿಕರಗಳು, ಹೆಚ್ಚು ಬುದ್ಧಿವಂತ Siri ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಹಲವು ಫೀಚರ್ಸ್‌ಗಳು ಈ ಅಪ್‌ಡೇಟ್‌ನ ಪ್ರಮುಖ ಆಕರ್ಷಣೆ ಎನಿಸಿವೆ. ಆಪಲ್‌ ಸಿಲಿಕಾನ್‌ ಚಿಪ್‌ಗಳು ಈ AI ಅನುಭವವನ್ನು ಇನ್ನಷ್ಟು ಶಕ್ತಿಯುತ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಕಂಪನಿ ಹೇಳಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile