WhatsApp ಬಳಕೆದಾರರಿಗೆ ಸಿಹಿಸುದ್ದಿ: ಇನ್ಮುಂದೆ ಮೆಸೆಜ್‌ ಕಳುಹಿಸಲು ಸಮಯ ಶೆಡ್ಯೂಲ್ ಮಾಡಬಹುದು!

ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಬಳಕೆದಾರರ ಅನುಕೂಲಕ್ಕಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಇದೀಗ ಬಳಕೆದಾರರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಮೆಸೆಜ್‌ಗಳನ್ನು ನಿಗದಿತ ಸಮಯಕ್ಕೆ ಕಳುಹಿಸುವ (Message Scheduling) ಆಯ್ಕೆಯನ್ನು ಪರಿಚಯಿಸಿದೆ. ಈ ಸೌಲಭ್ಯದ ಮೂಲಕ ಬಳಕೆದಾರರು ತಾವು ಕಳುಹಿಸಬೇಕಾದ ಮೆಸೆಜ್‌ ಅನ್ನು ಮೊದಲೇ ಟೈಪ್ ಮಾಡಿ ಯಾವ ದಿನ ಮತ್ತು ಎಷ್ಟು ಗಂಟೆಗೆ ಅದು ತಲುಪಬೇಕು ಎಂಬುದನ್ನು ನಿಗದಿಪಡಿಸಬಹುದು. ಹುಟ್ಟುಹಬ್ಬದ ಶುಭಾಶಯಗಳು, ಮದುವೆ ವಾರ್ಷಿಕೋತ್ಸವದ ಮೆಸೆಜ್‌ಗಳು ಅಥವಾ ಪ್ರಮುಖ ಕೆಲಸದ ನೆನಪಿಗಾಗಿ ಮೆಸೆಜ್‌ ಕಳುಹಿಸಬೇಕಿದ್ದರೆ ಈ ಫೀಚರ್ ಸಾಕಷ್ಟು ಉಪಯುಕ್ತವಾಗಲಿದೆ. ಸಮಯಕ್ಕೆ ಸರಿಯಾಗಿ ಮೆಸೆಜ್ ಕಳುಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿಯೂ ಇದು ನೆರವಾಗಬಹುದು. ವೈಯಕ್ತಿಕ ಚಾಟ್‌ಗಳು ಮತ್ತು ಗ್ರೂಪ್‌ಗಳಲ್ಲಿಯೂ ಈ ಸೌಲಭ್ಯ ಲಭ್ಯವಾಗಲಿದೆ.

WhatsApp Message Scheduling: ಮೆಸೆಜ್‌ ಶೆಡ್ಯೂಲ್ ಮಾಡುವುದು ಹೇಗೆ?

ಈ ಹೊಸ ಫೀಚರ್ ಬಳಸಲು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಿ. ಇದಕ್ಕಾಗಿ Google Play Store ಅಥವಾ Apple App Storeಗೆ ಭೇಟಿ ನೀಡಬಹುದು. ಬಳಿಕ ಈ ಕೆಳಗಿನ ಹಂತಗಳನ್ನು ಅನುಸರಿಸಿ.

- ವಾಟ್ಸಾಪ್‌ ತೆರೆದು ಮೆಸೆಜ್ ಕಳುಹಿಸಬೇಕಾದ ವ್ಯಕ್ತಿಯ ಅಥವಾ ಗ್ರೂಪ್‌ನ ಚಾಟ್ ತೆರೆಯಿರಿ.

- ಕಳುಹಿಸಬೇಕಾದ ಮೆಸೆಜ್‌ ಅನ್ನು ಟೈಪ್ ಮಾಡಿ.

- ಬಳಿಕ Send ಐಕಾನ್ ಬಟನ್ ಮೇಲೆ ಒತ್ತಿ ಹಿಡಿಯಿರಿ.

- ಮೆಸೆಜ್‌ ಅನ್ನು ಯಾವ ದಿನಾಂಕ ಮತ್ತು ಸಮಯಕ್ಕೆ ಕಳುಹಿಸಬೇಕು ಎಂಬ ಆಯ್ಕೆಯನ್ನು ಆರಿಸಿ.

- ದಿನಾಂಕ ಮತ್ತು ಸಮಯವನ್ನು ಹೊಂದಿಸಿದ ನಂತರ ಶೆಡ್ಯೂಲ್ ಮಾಡುವ ಆಯ್ಕೆಯನ್ನು ದೃಢೀಕರಿಸಿ.

- ಹೀಗೆ ಮಾಡಿದರೆ ನಿಮ್ಮ ಮೆಸೆಜ್‌ ನಿಗದಿಪಡಿಸಿದ ಸಮಯಕ್ಕೆ ಕಳುಹಿಸಲು ಸಿದ್ಧವಾಗಿರುತ್ತದೆ.

ಎಲ್ಲರಿಗೂ ಈ ಫೀಚರ್ ಲಭ್ಯವಾಗಿದೆಯೇ?

ಈ ಹೊಸ ಆಯ್ಕೆಯ ಅಪ್‌ಡೇಟ್ ಹಂತ ಹಂತವಾಗಿ ಬಳಕೆದಾರರಿಗೆ ಲಭ್ಯವಾಗುತ್ತಿದೆ ಎಂದು ತಿಳಿಸಲಾಗಿದೆ. ಹೀಗಾಗಿ ನಿಮ್ಮ ವಾಟ್ಸಾಪ್‌ನಲ್ಲಿ ಈ ಆಯ್ಕೆ ತಕ್ಷಣ ಕಾಣಿಸದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ ಮತ್ತು ಮುಂದಿನ ಅಪ್‌ಡೇಟ್‌ಗಳಿಗಾಗಿ ಕಾಯಿರಿ.

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile