WhatsApp Ghostpairing Scam
ಇತ್ತೀಚೆಗೆ ಸೈಬರ್ ಸೆಕ್ಯುರಿಟಿ ಕಂಪನಿಯೊಂದು ವಾಟ್ಸಾಪ್ ಹ್ಯಾಕ್ ಮಾಡುವ ಹೊಸ ಮತ್ತು ಡೇಂಜರಸ್ ದಾರಿಯನ್ನು ಕಂಡುಹಿಡಿಯಲಾಗಿದೆ. ಇದಕ್ಕೆ WhatsApp ಘೋಸ್ಟ್ ಪೇರಿಂಗ್ (Ghostpairing) ಎಂದು ಹೆಸರಿಡಲಾಗಿದೆ. ಈ ಕಿಡಿಗೇಡಿ ಕೆಲಸದಲ್ಲಿ ಹ್ಯಾಕರ್‌ಗಳಿಗೆ ನಿಮ್ಮ ಪಾಸ್‌ವರ್ಡ್, ಒಟಿಪಿ (OTP) ಅಥವಾ ನಿಮ್ಮ ಸಿಮ್ ಕಾರ್ಡ್ ಯಾವುದೂ ಬೇಕಾಗಿಲ್ಲ. ಸುಲಭವಾಗಿ ನಿಮ್ಮ ವಾಟ್ಸಾಪ್ ಖಾತೆಯನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ. ಇಲ್ಲಿ ವಾಟ್ಸಾಪ್ ಸಾಫ್ಟ್‌ವೇರ್‌ನಲ್ಲಿ ಯಾವುದೇ ತಪ್ಪು ಇಲ್ಲ ಬದಲಿಗೆ ನಿಮ್ಮನ್ನು ನಂಬಿಸಿ ನಿಮ್ಮಿಂದಲೇ ಅನುಮತಿ ಪಡೆದು ಮೋಸ ಮಾಡುತ್ತಾರೆ. ಈ ವಂಚನೆಯು ಹ್ಯಾಕರ್‌ಗಳು ಪಾಸ್‌ವರ್ಡ್, ಒಟಿಪಿ ಅಥವಾ ಸಿಮ್ ಕಾರ್ಡ್ ಇಲ್ಲದೆಯೇ ಬಳಕೆದಾರರ ವಾಟ್ಸಾಪ್ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
Also Read: ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್! iPhone 16 ಮೇಲೆ ಸಿಕ್ಕಾಪಟ್ಟೆ ಬೆಲೆ ಕಡಿತ! ಹೊಸ ಬೆಲೆ ಮತ್ತು ಫೀಚರ್ಗಳೇನು?
ಜೆನ್ ಡಿಜಿಟಲ್ ಎಂಬ ಸಂಸ್ಥೆಯ ವರದಿಯ ಪ್ರಕಾರ ಈ ಹಗರಣವು ಒಂದು ಸಣ್ಣ ಮೆಸೇಜ್ನಿಂದ ಶುರುವಾಗುತ್ತದೆ. ಈ ಮೆಸೇಜ್ ನಿಮಗೆ ಗೊತ್ತಿರುವವರಿಂದಲೇ ಬಂದಂತೆ ಇರುತ್ತದೆ. ಉದಾಹರಣೆಗೆ “ಹೇ, ನನ್ನ ಬಳಿ ನಿನ್ನದೊಂದು ಫೋಟೋ ಇದೆ ನೋಡುವೆಯ ಎಂಬ ಲಿಂಕ್ ಕಳುಹಿಸುತ್ತಾರೆ. ಇದು ನೋಡಲು ಫೇಸ್ಬುಕ್ ಫೋಟೋದಂತೆಯೇ ಕಾಣುತ್ತದೆ. ನೀವು ಕುತೂಹಲದಿಂದ ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಅದು ಫೇಸ್‌ಬುಕ್ ತರಹವೇ ಕಾಣುವ ಒಂದು ನಕಲಿ ವೆಬ್‌ಸೈಟ್‌ಗೆ ನಿಮ್ಮನ್ನು ಕರೆದೊಯ್ಯುತ್ತದೆ.
ಈ ವಂಚನೆ ಮೊದಲು ವಿದೇಶದಲ್ಲಿ (ಜೆಕಿಯಾ) ಕಂಡುಬಂದರೂ ಈಗ ಎಲ್ಲೆಡೆ ಹರಡುತ್ತಿದೆ. ಹ್ಯಾಕರ್ ನಿಮ್ಮ ಖಾತೆಯನ್ನು ಕೈವಶ ಮಾಡಿಕೊಂಡರೆ ನಿಮ್ಮ ಹೆಸರಿನಲ್ಲೇ ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಗ್ರೂಪ್‌ಗಳಿಗೆ ಈ ಲಿಂಕ್ ಕಳುಹಿಸುತ್ತಾನೆ. ಪರಿಚಯದವರಿಂದ ಲಿಂಕ್ ಬಂದಿದೆ ಎಂದುಕೊಂಡು ಬೇರೆಯವರು ಕೂಡ ಮೋಸ ಹೋಗುತ್ತಾರೆ. ಇದು ವಾಟ್ಸಾಪ್ನ ‘ಲಿಂಕ್ಡ್ ಡಿವೈಸ್’ (ಲಿಂಕ್ಡ್ ಡಿವೈಸ್) ಎಂಬ ಫೀಚರ್ ಅನ್ನು ತಪ್ಪು ದಾರಿಯಲ್ಲಿ ಬಳಸಿಕೊಳ್ಳುವ ತಂತ್ರವಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ಸೆಟ್ಟಿಂಗ್‌ಗಳು > ಲಿಂಕ್ಡ್ ಸಾಧನಗಳು ಆಗಾಗ ಚೆಕ್ ಮಾಡುತ್ತಿರಿ. ನಿಮಗೆ ಗೊತ್ತಿಲ್ಲದ ಯಾವುದಾದರೂ ಡಿವೈಸ್ ಅಲ್ಲಿ ಕಾಣಿಸಿದರೆ ಕೂಡಲೇ ‘Logout’ ಮಾಡಿ.
ಯಾವುದೇ ಅಪರಿಚಿತ ವೆಬ್‌ಸೈಟ್‌ನಲ್ಲಿ ಕ್ಯೂಆರ್ ಕೋಡ್ (QR ಕೋಡ್) ಸ್ಕ್ಯಾನ್ ಮಾಡಬೇಡಿ ಅಥವಾ ಯಾವುದೇ ನಂಬರ್/ಕೋಡ್ ಎಂಟರ್ ಮಾಡಬೇಡಿ.
ನಿಮ್ಮ ವಾಟ್ಸಾಪ್‌ನಲ್ಲಿ ಎರಡು-ಹಂತದ ಪರಿಶೀಲನೆಯನ್ನು ಯಾವಾಗಲೂ ಆನ್ ಇಟ್ಟುಕೊಳ್ಳಿ.
ಸ್ನೇಹಿತರಿಂದಲೇ ಬಂದರೂ ಯಾವುದಾದರೂ ವಿಚಿತ್ರ ಲಿಂಕ್ ಅಥವಾ ಮೆಸೇಜ್ ಕಂಡರೆ ಒಮ್ಮೆ ಅವರಿಗೆ ಫೋನ್ ಮಾಡಿ ವಿಚಾರಿಸಿ.
ಯಾವುದೇ ಸೌಲಭ್ಯವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಬಳಸಿದರೆ ಅದು ನಮಗೆ ಸಂಕಷ್ಟ ತರಬಹುದು ಎಂಬುದಕ್ಕೆ ಈ ‘ಘೋಸ್ಟ್‌ಪೇರಿಂಗ್’ ದೊಡ್ಡ ಉದಾಹರಣೆಯಾಗಿದೆ.