D2M Technology
ಭಾರತದಲ್ಲಿ ಈ ಡೈರೆಕ್ಟ್-ಟು-ಮೊಬೈಲ್ (D2M) ತಂತ್ರಜ್ಞಾನದ ಆಗಮನವು ಡಿಜಿಟಲ್ ವಿಷಯವನ್ನು ಹೇಗೆ ಬಳಸುತ್ತೇವೆ ಎಂಬುದನ್ನು ಪರಿವರ್ತಿಸಲಿದೆ. ಇಂಟರ್ನೆಟ್ ಡೇಟಾದ ಸಾಂಪ್ರದಾಯಿಕ ಅಗತ್ಯವನ್ನು ತಪ್ಪಿಸುವ ಮೂಲಕ D2M ಬಳಕೆದಾರರಿಗೆ ಉತ್ತಮ ಗುಣಮಟ್ಟದ ಚಲನಚಿತ್ರಗಳು, ನೇರ ಕ್ರೀಡೆಗಳು ಮತ್ತು ಸುದ್ದಿಗಳನ್ನು ನೇರವಾಗಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ಈ ನಾವೀನ್ಯತೆಯು ಹೆಚ್ಚು ಕೈಗೆಟುಕುವ ಮನರಂಜನಾ ಅನುಭವವನ್ನು ನೀಡುವುದಲ್ಲದೆ ಇಂಟರ್ನೆಟ್ ಸಂಪರ್ಕವು ಸವಾಲಾಗಿ ಉಳಿದಿರುವ ದೂರದ ಪ್ರದೇಶಗಳಿಗೆ ಮಲ್ಟಿಮೀಡಿಯಾ ವಿಷಯವನ್ನು ತರುವ ಮೂಲಕ ಡಿಜಿಟಲ್ ಅಂತರವನ್ನು ನಿವಾರಿಸುತ್ತದೆ.
ಈ ಡೈರೆಕ್ಟ್-ಟು-ಮೊಬೈಲ್ (D2M) ಎಂಬುದು ಒಂದು ಅದ್ಭುತ ಬ್ರಾಡ್ಕಾಸ್ಟ್ ತಂತ್ರಜ್ಞಾನವಾಗಿದೆ. ಇದು ನಿಮ್ಮ ಮನೆಯ ಟಿವಿ ಹೇಗೆ ಕೆಲಸ ಮಾಡುತ್ತದೋ ಡಿಶ್ ಇಲ್ಲದೆ ಆಂಟೆನಾ ಮೂಲಕ ಅದೇ ರೀತಿ ಇಂಟರ್ನೆಟ್, ವೈಫೈ ಅಥವಾ ಸಿಮ್ ಕಾರ್ಡ್ ಇಲ್ಲದಿದ್ದರೂ ನಿಮ್ಮ ಮೊಬೈಲ್‌ಗೆ ನೇರವಾಗಿ ವಿಡಿಯೋಗಳನ್ನು ತಲುಪಿಸುತ್ತದೆ. ಇದು ಎಫ್‌ಎಮ್ ರೇಡಿಯೋ ತರಹವೇ ಕೆಲಸ ಮಾಡುತ್ತದೆ. ಸರ್ಕಾರವು 470–582 MHz ಫ್ರೀಕ್ವೆನ್ಸಿಯನ್ನು ಬಳಸಲು ನಿರ್ಧರಿಸಿದೆ. ನಿಮ್ಮ ಫೋನ್‌ನಲ್ಲಿರುವ ವಿಶೇಷ ಚಿಪ್ ಮತ್ತು ಆಂಟೆನಾ ಸಹಾಯದಿಂದ ಟವರ್‌ಗಳಿಂದ ಬರುವ ಸಿಗ್ನಲ್‌ಗಳನ್ನು ಪಡೆದು ಸಿನಿಮಾ ಅಥವಾ ಲೈವ್ ಮ್ಯಾಚ್ಗಳನ್ನು ಯಾವುದೇ ಅಡೆತಡೆಯಿಲ್ಲದೆ ನೋಡಬಹುದು.
ಸಾಮಾನ್ಯ ಜನರಿಗೆ ಇದರಿಂದ ಸಿಗುವ ಮೊದಲ ದೊಡ್ಡ ಲಾಭವೆಂದರೆ ಡೇಟಾ ಖರ್ಚು ಉಳಿತಾಯ ನಾವು ಸದ್ಯ ವಿಡಿಯೋ ನೋಡಲು ತುಂಬಾ ಹಣ ನೀಡಿ ಇಂಟರ್ನೆಟ್ ರಿಚಾರ್ಜ್ ಆಗುತ್ತದೆ. ಆದರೆ D2M ಬಂದರೆ ಯಾವುದೇ ಇಂಟರ್ನೆಟ್ ಪ್ಯಾಕ್ ಇಲ್ಲದೆ ಫ್ರೀಯಾಗಿ ವಿಡಿಯೋ ಸ್ಟ್ರೀಮಿಂಗ್ ಮಾಡಬಹುದು. ನೆಟ್‌ವರ್ಕ್ ಇಲ್ಲದ ಹಳ್ಳಿಗಳಲ್ಲಿ ಅಥವಾ ಇಂಟರ್ನೆಟ್ ವೇಗ ಕಡಿಮೆ ಇರುವ ಕಡೆಗಳಲ್ಲಿ ತಂತ್ರಜ್ಞಾನ ವರದಾನ ವಸ್ತುಗಳು. ಬಫರಿಂಗ್ ಕಾಟವಿಲ್ಲದೆ ಸಿನಿಮಾ ನೋಡಬಹುದು. ತುರ್ತು ಸಮಯದಲ್ಲಿ ಸರ್ಕಾರದ ಸೂಚನೆಗಳು ಅಥವಾ ಶೈಕ್ಷಣಿಕ ಮಾಹಿತಿಗಳು ಎಲ್ಲರಿಗೂ ತಲುಪಲು ಇದು ಸಹಕಾರಿಯಾಗಿದೆ. ಬಡ ವರ್ಗದ ಜನರಿಗಾಗಿ ₹2,000–₹2,500 ಬೆಲೆಯಲ್ಲಿ ಇಂತಹ ಫೋನ್‌ಗಳು ಲಭ್ಯವಾಗುವ ಸಾಧ್ಯತೆಯಿದೆ.
ಭಾರತದ ದೊಡ್ಡ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಈ ತಂತ್ರಜ್ಞಾನ ದೊಡ್ಡ ಆತಂಕ ತಂದಿದೆ. ಏಕೆಂದರೆ ಮೊಬೈಲ್ ಬಳಕೆದಾರರು ಬಳಸುವ ಡೇಟಾದಲ್ಲಿ ಶೇ. 80ರಷ್ಟು ಭಾಗ ಕೇವಲ ವಿಡಿಯೋ ನೋಡಲು ಬಳಕೆಯಾಗುತ್ತದೆ. ಜನರು ಡೇಟಾ ಇಲ್ಲದೆಯೇ ಫ್ರೀಯಾಗಿ ವಿಡಿಯೋ ನೋಡಲು ಶುರು ಮಾಡಿದರೆ, ಟೆಲಿಕಾಂ ಕಂಪನಿಗಳ ಆದಾಯಕ್ಕೆ ಭಾರಿ ಹೊಡೆತ ಬೀಳುತ್ತದೆ. ಆದ್ದರಿಂದ ಈ ಕಂಪನಿಗಳು (COAI) ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಇದು 5G ನೆಟ್‌ವರ್ಕ್‌ಗೆ ತೊಂದರೆ ನೀಡಬಹುದು ಮತ್ತು ಸ್ಪೆಕ್ಟ್ರಾಮ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬುದು ಈ ಕಂಪನಿಗಳ ವಾದವಾಗಿದೆ.