PF Accounts: ಒಂದು ವೇಳೆ ನೀವು ಕೆಲಸ ಬಿಟ್ರೆ ನಿಮ್ಮ ಪಿಎಫ್ ಅಕೌಂಟ್ ಏನಾಗುತ್ತೆ ನಿಮಗೊತ್ತಾ?

Updated on 10-Nov-2025
HIGHLIGHTS

ಸಾಮಾನ್ಯವಾಗಿ ಈ ಮೇಲಿನ ಪ್ರಶ್ನೆ ಒಂದಲ್ಲ ಒಂದು ಸರಿ ನಿಮ್ಮ ತಲೆಗೆ ಬರೋದು ಅನಿವಾರ್ಯವಾಗಿದೆ.

ನಿಮ್ಮ ನೌಕರರ ಭವಿಷ್ಯ ನಿಧಿ ಖಾತೆಯ ಭವಿಷ್ಯದ ಬಗ್ಗೆ ಯೋಚಿಸುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ.

ನಿಮ್ಮ PF ಹಣದ ಬಗ್ಗೆ ನೀವು ತೆಗೆದುಕೊಳ್ಳಬಹುದಾದ ಕೆಲವು ಸ್ಪಷ್ಟ ಆಯ್ಕೆಗಳು ನಿಯಮಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಈ ಮೇಲಿನ ಪ್ರಶ್ನೆ ಒಂದಲ್ಲ ಒಂದು ಸರಿ ನಿಮ್ಮ ತಲೆಗೆ ಬರೋದು ಅನಿವಾರ್ಯವಾಗಿದೆ ಬಂದಿಲ್ಲ ಅಂದ್ರೆ ಒಮ್ಮೆ ಇದರ ಬಗ್ಗೆ ತಿಳಿಯುದು ಮುಖ್ಯವಾಗಿದೆ. ಹೌದು ನೀವು ಒಂದು ಸಂಸ್ಥೆಯನ್ನು ಬಿಟ್ಟಾಗ ಅಥವಾ ಕಂಪನಿಯಿಂದ ರಾಜೀನಾಮೆ ನೀಡಿದಾಗ ನಿಮ್ಮ ನೌಕರರ ಭವಿಷ್ಯ ನಿಧಿ ಖಾತೆಯ (PF Accounts) ಭವಿಷ್ಯದ ಬಗ್ಗೆ ಯೋಚಿಸುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಯಾಕೆಂದರೆ ಅದರಲ್ಲಿ ಸಂಗ್ರಹವಾಗಿರುವ ಹಣದೊಂದಿಗೆ ಏನಾಗುತ್ತೆ ಎನ್ನುವುದರ ಬಗ್ಗೆ ಯೋಚಿಸುವುದು ಸಹಜವಾಗಿದೆ. ಒಂದು ವೇಳೆ ನೀವು ನಿಮ್ಮ ಕೆಲಸವನ್ನು ಕಳೆದುಕೊಂಡ ನಂತರ ನಿಮ್ಮ PF ಹಣದ ಬಗ್ಗೆ ನೀವು ತೆಗೆದುಕೊಳ್ಳಬಹುದಾದ ಕೆಲವು ಸ್ಪಷ್ಟ ಆಯ್ಕೆಗಳು EPFO ನಿಯಮಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಅಪ್ಡೇಟ್ ಮಾಡಲಾಗಿದೆ.

PF Accounts ಅನ್ನು ಹೊಸ ಉದ್ಯೋಗಕ್ಕೆ ವರ್ಗಾಯಿಸಿಕೊಳ್ಳಿ:

ನೀವು ಒಂದು ಕೆಲಸ ಬಿಟ್ಟು ತಕ್ಷಣವೇ ಬೇರೆ ಕೆಲಸಕ್ಕೆ ಸೇರಿದರೆ ನಿಮ್ಮ ಹಳೆಯ ಪಿಎಫ್ ಬಾಕಿಯನ್ನು ಹೊಸ ಖಾತೆಗೆ ವರ್ಗಾಯಿಸುವುದು ಉತ್ತಮ ಆಯ್ಕೆ. ಹೀಗೆ ಮಾಡುವುದರಿಂದ ನಿಮ್ಮ ನಿವೃತ್ತಿ ಉಳಿತಾಯಕ್ಕೆ ಅಡ್ಡಿಯಾಗುವುದಿಲ್ಲ. ಮುಖ್ಯವಾಗಿ ನಿಮ್ಮ ಸೇವೆಯ ಅವಧಿ ಮುಂದುವರಿಯುತ್ತದೆ. ಯುನಿವರ್ಸಲ್ ಅಕೌಂಟ್ ನಂಬರ್ ಸೂಚನೆಯ ವರ್ಗಾವಣೆ ಪ್ರಕ್ರಿಯೆ ಮೂಲಕ ನಿಮ್ಮ ಹಳೆ ಖಾತೆಯನ್ನು ಹೊಸ PF ಖಾತೆಯಾಗಿ ಬಳಸಬಹುದು ಈಗ ಈ ಪ್ರಕ್ರಿಯೆ ಸಹ ಬಹಳ ಸುಲಭವಾಗಿದೆ. ನಿಮ್ಮ ಪಿಎಫ್ ಖಾತೆಗಳನ್ನು ಒಂದೇ ಯುಎನ್ ಅಡಿಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಹೊಸ ಉದ್ಯೋಗದಾತರು ನಿಮ್ಮ ಹಳೆಯ ಖಾತೆಗೆ ಕೊಡುಗೆ ಜಮಾ ಮಾಡುತ್ತಾರೆ.

ಅಲ್ಲದೆ ಈ ರೀತಿಯ ಸುಗಮ ವರ್ಗಾವಣೆ ಮಾಡುವುದರಿಂದ ನೀವು ಪಿಎಫ್ ಮೇಲೆ ಗಳಿಸಿದ ಬಡ್ಡಿ ತೆರಿಗೆ ಮುಕ್ತವಾಗಿ ಉಳಿಯುತ್ತದೆ. ಇದು ಈ ಯೋಜನೆ ದೊಡ್ಡ ಪ್ರಯೋಜನ. ಇದಲ್ಲದೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿರಂತರ ಸೇವೆಯನ್ನು ನಿರ್ವಹಿಸಿದರೆ ನೀವು ಮಾಡುವ ಅಂತಿಮ ವಿತ್ ಡ್ರಾವಲ್ ಅಥವಾ ಹಣ ಹಿಂಪಡೆಯುವಿಕೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಪಡೆಯುತ್ತದೆ.

PF ಹಣವನ್ನು ಪೂರ್ಣ ಅಥವಾ ಹಿಂಪಡೆಯುವ ನಿಯಮಗಳು:

ನೀವು ತಕ್ಷಣ ಬೇರೆ ಕೆಲಸಕ್ಕೆ ಸೇರದಿದ್ದರೆ ನಿಮ್ಮ ಪಿಎಫ್ ಬಾಕಿಯನ್ನು ಹಿಂಪಡೆಯಲು ನಿಮಗೆ ಅವಕಾಶವಿದೆ. ಪ್ರಸ್ತುತ ಐಪಿಎಫ್‌ಒ ನಿಯಮಗಳ ಪ್ರಕಾರ ನೀವು ಒಂದು ತಿಂಗಳ ನಿಯೋಜಿತವಾಗಿದ್ದರೆ ನಿಮ್ಮ ಪಿಎಫ್‌ನಲ್ಲಿರುವ ಶೇ. 75ರಷ್ಟು ಹಣವನ್ನು ಹಿಂಪಡೆಯಬಹುದು. ನಿರುದ್ಯೋಗದ ಅವಧಿ ಎರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚಾದರೆ ಉಳಿದ ಶೇ. 25ರಷ್ಟು ಹಣವನ್ನು ಸಹ ಹಿಂಪಡೆಯಲು ಅವಕಾಶವಿದೆ.

Also Read: BSNL Offer: ಕೇವಲ 1 ರೂಗಳಿಗೆ ಉಚಿತ ಸಿಮ್ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಪೂರ್ತಿ 30 ದಿನಗಳಿಗೆ ಲಭ್ಯ!

ಆದರೆ ಇಲ್ಲಿ ತೆರಿಗೆಯ ಪರಿಣಾಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಐದು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದರೆ ಪಿಎಫ್‌ನ ಸಂಪೂರ್ಣ ಹಣವನ್ನು ಹಿಂಪಡೆದರೆ ಆ ಸಂಪೂರ್ಣ ಮೊತ್ತದ ಮೇಲೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸದಿದ್ದರೆ ಆದರೆ ಐದು ವರ್ಷಗಳ ಸೇವೆಯ ನಂತರ ಹಣ ಹಿಂಪಡೆದರೆ ಸಾಮಾನ್ಯವಾಗಿ ಯಾವುದೇ ತೆರಿಗೆ ಇರುವುದಿಲ್ಲ.

ಪಿಎಫ್ ಖಾತೆಯನ್ನು ಸುಮ್ಮನೆ ಹಾಗೆಯೇ ಬಿಟ್ರೆ ಏನಾಗುತ್ತೆ?

ಈ ಪಟ್ಟಿಯ ಮೂರನೇ ಆಯ್ಕೆ ಎಂದರೆ ನಿಮ್ಮ ಪಿಎಫ್ ಖಾತೆಯನ್ನು ಹಾಗೆಯೇ ಬಿಡುವುದು. ಕೆಲಸ ಬಿಟ್ಟ ನಂತರ ಇನ್ನು ಮುಂದೆ ಅದಕ್ಕೆ ವಂತಿಗೆ ಜಮಾ ಆಗಿದ್ದಾಗ ಖಾತೆಯು “ವಂತಿಗೆ ಇಲ್ಲದ ಕಾಂಟ್ರಿಬ್ಯೂಟಿಂಗ್ ಸ್ಥಿತಿ ಬರುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿ ಸಿಗುತ್ತಾ ಹೋಗುತ್ತದೆ. ಆದರೆ ನಿಮ್ಮ ಮುಖ್ಯ ಸಮಸ್ಯೆ ಏನೆಂದರೆ: ನೀವು ನಂತರವೂ ನಿಮ್ಮ ಪಿಎಫ್‌ನಲ್ಲಿರುವ ಹಣದ ಮೇಲೆ ಗಳಿಸುವ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ತೀರ್ಪು ನೀಡಿದೆ. ಜೊತೆಗೆ ನಿಮ್ಮ ಖಾತೆಯು ತುಂಬಾ ಸಮಯದವರೆಗೆ ನಿಷ್ಕ್ರಿಯವಾಗಿಯೇ ಇದ್ದರೆ ಆ ಹಣವು ಏಳು ಕಲ್ಯಾಣ ವರ್ಷಗಳ ನಂತರ “ಹಿರಿಯ ನಾಗರಿಕರ ನಿಧಿಗೆ” ವರ್ಗಾವಣೆಯಾಗುವ ಸಾಧ್ಯತೆಗಳಿವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :