Digit Zero 1 Awards 2024
Digit Zero 1 Awards 2024: ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ವಿಶ್ವಾಸಾರ್ಹ ಗ್ಯಾಜೆಟ್ ಪ್ರಶಸ್ತಿಗಳು ವರ್ಷದ ಅತ್ಯುತ್ತಮ ಕಾರ್ಯನಿರ್ವಹಣೆಯ ಟೆಕ್ ಉತ್ಪನ್ನಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿರಿಸಲಾಗುತ್ತದೆ. ಡಿಜಿಟ್ (Digit.in) ಈಗಾಗಲೇ ನಿಮಗೆ ತಿಳಿದಿರುವಂತೆ ಟೈಮ್ಸ್ ನೆಟ್ವರ್ಕ್ ಜೊತೆಗೆ ವಿಲೀನಗೊಂಡಿದ್ದು ಈ ಸಮಾರಂಭವನ್ನು ಈಗ ತನ್ನ 24ನೇ ವರ್ಷದ ಪ್ರತಿಷ್ಠಿತ ಈವೆಂಟ್ ಅನ್ನು ಇಂದು ಅಂದ್ರೆ 17ನೇ ಜನವರಿ 2025 ರಂದು ದೆಹಲಿಯಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಉದ್ಯಮದ ಪ್ರವರ್ತಕ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರ ಸಮ್ಮುಖದಲ್ಲಿ ಈ ನವೋದ್ಯಮಗಳನ್ನು ಗೌರವಿಸಿದರು.
Also Read: ಬರೋಬ್ಬರಿ 70 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ ಮತ್ತು ಡೇಟಾ ನೀಡುವ ಈ Recharge Plan ಬೆಲೆ ಎಷ್ಟು?
ಡಿಜಿಟ್ ಝೀರೋ1 ಪ್ರಶಸ್ತಿಗಳು ಕಾರ್ಯಕ್ಷಮತೆಯ ಮೇಲಿನ ಗಮನ ಸಾಮಾನ್ಯ ಜನರ ಯೋಚನೆಗಿಂತ ಕೊಂಚ ಭಿನ್ನವಾಗಿವೆ. ಡಿಜಿಟ್ ಈ ಪಟ್ಟಿಗೆ ಹಳೆಯ ಅಥಭ ಜನಪ್ರಿಯ ಬ್ರಾಂಡ್ ಅನ್ನೊದು ಅಷ್ಟು ಮುಖ್ಯವಾಗಿರುವುದಿಲ್ಲ. ಯಾಕೆಂದರೆ ಉತ್ಪನ್ನವು ಅದರ ಉದ್ದೇಶಿತ ಕಾರ್ಯವನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತದೆ ಎಂಬುದರ ಮೇಲೆ ಮಾತ್ರ ನಮ್ಮ ಗಮನವಿರುತ್ತದೆ ಅದು ಯಾವುದೇ ಬ್ರಾಂಡ್ ಆಗಿರಲಿ ಸತ್ಯತೆಯ ಆಳದವರೆಗೆ ಹೋಗಿ ಅದರ ಅಡಿಪಾಯವನ್ನು ಪರೀಕ್ಷಿಸಿ ಅದರ ಫಲಿತಾಂಶದ ಮೇಲೆ ಮಾತ್ರ ಯಾವುದು ಬೆಸ್ಟ್ ಎನ್ನುವುದನ್ನು ಗುರುತಿಸಲಾಗುತ್ತದೆ.
ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಉತ್ತಮ ಕಾರ್ಯಕ್ಷಮತೆಯ ವಿಷಯದಲ್ಲಿ ಭಾರತದಲ್ಲಿ ನಿಮಗೊಂದು ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಬೇಕಿದ್ದರೆ ಮಾರುಕಟ್ಟೆಯಲ್ಲಿ ಯಾವುದನ್ನು ಖರೀದಿಸಬೇಕು ಎನ್ನುವದು ತಲೆಕೆಡಿಸುವ ಪ್ರಶ್ನೆಯಾಗಿದೆ. ಇಂಹತ ನಿಮ್ಮ ಹತ್ತಾರು ಪ್ರಶ್ನೆಗಳಿಗೆ ಉತ್ತರವಾಗಿ ಈ ವರ್ಗದಲ್ಲಿ Zero1 ಪ್ರಶಸ್ತಿ ಗೆದ್ದ ಲ್ಯಾಪ್‌ಟಾಪ್‌ಗಳನ್ನು ನೋಡಬಹುದು.
ಯಾಕೆಂದರೆ ಕೇಲವ ಮೇಲಿನ ನೋಟದಿಂದ ಮಾತ್ರವಲ್ಲದೆ ಒಳಗಿನ ಎಲ್ಲ ಮಾನದಂಡಗಳನ್ನು ಹೊಂದಿಸಿ ಆ ಪ್ರಾಡಕ್ಟ್ ಬಳಕೆದಾರರಿಗೆ ಎಷ್ಟು ಉತ್ತಮವಾಗಿದೆ ಎನ್ನುದನ್ನು ತೋರಿಸುತ್ತದೆ. ಅಲ್ಲದೆ ಮುಂಬರುವ ವರ್ಷದಲ್ಲಿ ಆ ಮಾನದಂಡಗಳನ್ನು ಆವಿಷ್ಕರಿಸಿ ಅದಕ್ಕಿಂತ ಮೀರಿ ಹೋಗಲು ಇತರ ಬ್ರ್ಯಾಂಡ್‌ಗಳನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ.
Premium / Flagship (Over 50K): ಕಳೆದ ವರ್ಷದಲ್ಲಿ50,000 ರೂಗಳೊಳಗೆ ಬಿಡುಗಡೆಯಾದ ಪ್ರೀಮಿಯಂ ಸ್ಮಾರ್ಟ್ ಫೋನ್ ಪ್ರಶಸ್ತಿ
Zero1 Winner – iQOO 12
Zero1 Best Buy – Vivo X100 Pro
Gaming Laptop: ಕಳೆದ ವರ್ಷದಲ್ಲಿ ಬಿಡುಗಡೆಯಾದ ಬೆಸ್ಟ್ ಗೇಮಿಂಗ್ ಲ್ಯಾಪ್ಟಾಪ್ ಪ್ರಶಸ್ತಿ
Zero1 Winner – MSI Raider 18 HX A14V
Zero1 Best Buy – Acer Predator Helios 16
Wireless Headphones: ಕಳೆದ ವರ್ಷದಲ್ಲಿ ಬಿಡುಗಡೆಯಾದ ವಯರ್ಲೆಸ್ ಹೆಡ್ಫೋನ್ ಪ್ರಶಸ್ತಿ
Zero1 Winner – Sonos Ace
Zero1 Best Buy – Sennheiser Accentum Plus
CPU: ಕಳೆದ ವರ್ಷದಲ್ಲಿ ಬಿಡುಗಡೆಯಾದ ಬೆಸ್ಟ್ ಡೆಸ್ಕ್ಟಾಪ್ ಪ್ರೊಸೆಸರ್ CPU ಪ್ರಶಸ್ತಿ
Zero1 Winner – AMD Ryzen 7 9800x3D
Zero1 Best Buy – AMD Ryzen 5 9600X
Audio Product: ಕಳೆದ ವರ್ಷದಲ್ಲಿ ಬಿಡುಗಡೆಯಾದ ಬೆಸ್ಟ್ ಆಡಿಯೋ ಪ್ರಾಡಕ್ಟ್ ಪ್ರಶಸ್ತಿ
Zero1 Winner – JBL Tour One M2
Zero1 Best Buy – AMD Ryzen 5 9600X