New UPI Rules From August 1
UPI Transaction: ಭಾರತದಲ್ಲಿ ಪ್ರಸ್ತುತ ಪ್ರತಿಯೊಂದು ಸಣ್ಣ ಪುಟ್ಟ ಖರೀದಿಗೆ ತಂಬಾಕು, ಬಿಡಿ ಸಿಗರೇಟ್, ಪ್ರಯಾಣಿಕರ ಬಾಡಿಗೆ, ಮೆಟ್ರೋ, ಟಿಕೆಟ್ ಖರೀದಿ ಮತ್ತು ಅನೇಕ ಸಣ್ಣ ಪುಟ್ಟ ಅಂಗಡಿಗಳಿಂದ ದೊಡ್ಡ ಮಾಲ್, ಹೋಟೆಲ್ ಪ್ರತಿಯೊಂದನ್ನು ಬಳಸಲು ಜನ ಅಧಿಕವಾಗಿ ಡಿಜಿಟಲ್ ಪೇಮೆಂಟ್ ಇ-ವಾಲೆಟ್ (PhonePe, Paytm, Gpay & Banks Apps) ಸಹಾಯದಿಂದ ಮಾಡುವುದು ಅನಿವಾರ್ಯವಾಗಿದೆ. ಯಾಕೆಂದರೆ ಇದಕ್ಕೆ ಮೂಲ ಕಾರಣವೆಂದರೆ ಸಮಯಕ್ಕೆ ಸರಿಯಾದ ಚಿಲ್ಲರೆ ಹಣದ ಕೊರತೆ ಒಂದಾಗಿದೆ. ಇದೊಂದಿಗೆ ಈ ಡಿಜಿಟಲ್ ಪೇಮೆಂಟ್ (Digital Payment) ಇಂದಿನ ಆಧುನಿಕ ಯುಗದಲ್ಲಿ ನೀಡಿದ ಪುರಾವೆಯಾಗಿರುವುದರೊಂದಿಗೆ ನಿಮ್ಮ ಪ್ರತಿಯೊಂದು ರೂಪಾಯಿ ಮೇಲೆ ಗಮನ ಇಡಲು ಸಹಕರಿಸುತ್ತದೆ.
Also Read: Upcoming Phones in Feb 2025: ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಹೊಸ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ!
ಹೌದು, ನಾಳೆ ಅಂದ್ರೆ 1ನೇ ಫೆಬ್ರವರಿ 2025 ರಿಂದ ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ (Unified Payments Interface -UPI) ಯಾವುದೇ ವಹಿವಾಟುಗೊಳಿಸಲು ಅದಕ್ಕೆ ಪೂರಕವಾಗಿರುವ UPI ID ಮೇಲೆ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಸರಳ ಭಾಷೆಯಲ್ಲಿ ಏನಪ್ಪಾ ಈ ಹೊಸ ರೂಲ್ ಅನ್ನೋದಾದ್ರೆ ನೀವು ಯಾವುದೇ ಇ-ವಾಲೆಟ್ (PhonePe, Paytm, Gpay & Banks Apps) ಅಪ್ಲಿಕೇಶನ್ಗಳನ್ನು ಬಳಸುತ್ತೀರಿ ಆದರೆ ಆ ಅಪ್ಲಿಕೇಶನ್ ಒಳಗೆ ನೀವು ರಚಿಸಿರುವ UPI ID ಜೊತೆಗೆ ಯಾವುದೇ ಸ್ಪೆಷಲ್ ಚಿನ್ಹೆಗಳಾಗಿರುವ @, $, #,^,%,* (ಅಂಕಿಗಳನ್ನು ಬಳಸಬಹುದು) ಇವನ್ನು ಹೊಂದಿರಬಾರದು ಎನ್ನುವುದು ನಿಯಮ.
ಇದನ್ನು ನಿಮಗೆ ಮತ್ತಷ್ಟು ಉದಾಹರಣೆಯ ಸಮೇತ ವಿವರಿಸುವುದಾದರೆ ನಿಮ್ಮ ಐಡಿಯಲ್ಲಿ ಮೊದಲನೇಯದಾಗಿ ಸ್ಪೆಷಲ್ ಚಿನ್ಹೆಗಳಾದ @, $, #,^,%,* ಹೊಂದಿರಬಾರದು. ಆದರೆ ಪ್ರಸ್ತುತ ಸುಮಾರು ಜನರಿಗೆ ತಲೆಕೆಡಿಸುತ್ತಿರುವ ಪ್ರಶ್ನೆ ಅಂದರೆ ನಾವು ಹಾಕದೆ ನಮ್ಮ ಐಡಿಯ ಕೊನೆಯಲ್ಲಿ @ybl, @ibl, ಅಥವಾ @axl ಹೊಂದಿದೆ ಅನ್ನೋದು. ಆದರೆ ಈ ಹೊಸ ನಿಮಯದಲ್ಲಿ ನೀವು ರಚಿಸುವ ಐಡಿಗೆ ಮಾತ್ರ ನಿಯಮ ಅನ್ವಯಿಸುತ್ತದೆ. ಉದಾಹರಣೆ ನಿಮ್ಮ ಹೆಸರು ಪ್ರಕಾಶ್ ಕುಮಾರ್ ಆಗಿದ್ದು ನೀವು prakash.kumar, prakash_kumar, prakash$kumar, prakash@kumar, prakash%kumar,prakash*kumar ಎಂಬ ಐಡಿಗಳನ್ನು ಬಳಸುವಂತಿಲ್ಲ.
ಫೆಬ್ರವರಿ 1ರಿಂದ ಯಾವುದೇ ವಿಶೇಷ ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು NPCI (National Payments Corporation of India ) ಮಾಹಿತಿಯನ್ನು ನೀಡಿದೆ. ಈ ಸಂಬಂಧ 9ನೇ ಜನವರಿಯಂದು ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ. ಈ ಸುತ್ತೋಲೆ ಪ್ರಕಾರ ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ವಿಶೇಷ ಚಿಹ್ನೆ (Special Character) ಐಡಿಯನ್ನು ಯುಪಿಐ ಸ್ವೀಕರಿಸುವುದಿಲ್ಲ ಒಂದು ವೇಳೆ ಇದ್ದರೆ ಇಂದೇ ಅದನ್ನು ಬದಲಾಹಿಸಿಕೊಳ್ಳಿ.