Black Friday Sale: ಭಾರತದಲ್ಲಿ ಸೋನಿಯ ಬ್ಲಾಕ್ ಫ್ರೈಡೇ ಸೇಲ್ ಆರಂಭ! ಆಫರ್ ಡಿಸ್ಕೌಂಟ್‌ಗಳ ಸುರಿಮಳೆ!

Updated on 21-Nov-2025
HIGHLIGHTS

ಭಾರತದಲ್ಲಿ ಸೋನಿ ತನ್ನ ಬ್ಲ್ಯಾಕ್ ಫ್ರೈಡೇ ಸೇಲ್ ಅನ್ನು ಅಧಿಕೃತವಾಗಿ ಪ್ರಕಟಿಸಿದೆ.

ಈ ಮಾರಾಟವು 21ನೇ ನವೆಂಬರ್ ರಿಂದ 4ನೇ ಡಿಸೆಂಬರ್ 2025 ರವರೆಗೆ ಲಭ್ಯ.

ಗ್ರಾಹಕರು ತಮ್ಮ ನೆಚ್ಚಿನ ಗ್ಯಾಜೆಟ್‌ಗಳ ಮೇಲೆ ಶೇಕಡಾ 60% ರಷ್ಟು ದೊಡ್ಡ ಬೆಲೆ ಕಡಿತವನ್ನು ನಿರೀಕ್ಷಿಸಬಹುದು.

ಸೋನಿ ಭಾರತದಲ್ಲಿ ತನ್ನ ಬ್ಲಾಕ್ ಫ್ರೈಡೇ ಸೇಲ್ (Black Friday Sale) ಅನ್ನು ಅಧಿಕೃತವಾಗಿ ಪ್ರಕಟಿಸಿದೆ. ಗೇಮರ್‌ಗಳಿಗೆ ಇದೊಂದು ಸುವರ್ಣಾವಕಾಶ ಏಕೆಂದರೆ ಈ ಸೇಲ್‌ನಲ್ಲಿ PS5 ಕನ್ಸೋಲ್‌ಗಳು, ಪರಿಕರಗಳು ಮತ್ತು ಪ್ರಸಿದ್ಧ ಪ್ಲೇಸ್ಟೇಷನ್ ಆಟಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಮಾರಾಟವು ಇಂದು 21ನೇ ನವೆಂಬರ್ ರಿಂದ 4ನೇ ಡಿಸೆಂಬರ್ 2025 ರವರೆಗೆ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಲಭವಿರುತ್ತದೆ. ಗ್ರಾಹಕರು ತಮ್ಮ ನೆಚ್ಚಿನ ಗ್ಯಾಜೆಟ್‌ಗಳ ಮೇಲೆ ಶೇಕಡಾ 60% ರಷ್ಟು ದೊಡ್ಡ ಬೆಲೆ ಕಡಿತವನ್ನು ನಿರೀಕ್ಷಿಸಬಹುದು. ಬ್ಲ್ಯಾಕ್ ಫ್ರೈಡೇ ಆಫರ್‌ಗಳು ಭಾಗವಾಗಿ PS5 ಕನ್ಸೋಲ್ ಭೌತಿಕ ಮತ್ತು ಡಿಜಿಟಲ್ ಆವೃತ್ತಿಗಳ ಮೇಲೆ ₹5,000 ರಿಯಾಯಿತಿಗಳು ಸಹ ಲಭ್ಯವಿರುತ್ತವೆ.

Also Read: ಅಮೆಜಾನ್‌ನಲ್ಲಿ ಇಂದು 55 ಇಂಚಿನ ಜಬರ್ದಸ್ತ್ 4K Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!

PS5 Physical ಮತ್ತು Digital Versions ರಿಯಾಯಿತಿ ಬೆಲೆ ವಿವರಗಳು:

ಈ ಬ್ಲ್ಯಾಕ್ ಫ್ರೈಡ್ ಮಾರಾಟದಲ್ಲಿ ಗ್ರಾಹಕರು PS5 ಸ್ಲಿಮ್ ಫಿಸಿಕಲ್ ಎಡಿಷನ್ ಮತ್ತು PS5 ಡಿಜಿಟಲ್ ಎಡಿಷನ್ ಎರಡರ ಮೇಲೂ ರಿಯಾಯಿತಿಗಳು ಪಡೆಯಬಹುದದು. ಅಲ್ಲದೆ PS5 ಸ್ಲಿಮ್ ಫಿಸಿಕಲ್ ಎಡಿಷನ್ (CFI-2008A01X) ಇದರ ಮೂಲ ಬೆಲೆ ₹54,990 ಇದ್ದು ಇದೀಗ ನೇರ ₹5,000 ರಿಯಾಯಿತಿಯೊಂದಿಗೆ ಕೇವಲ ₹49,990 ಕ್ಕೆ ಲಭ್ಯವಿದೆ. ಇದರ PS5 ಡಿಜಿಟಲ್ ಆವೃತ್ತಿ (CFI-2008B01X) ಇದರ ಮೂಲ ಬೆಲೆ ₹49,990 ಇದ್ದು ಇದು ₹5,000 ರಿಯಾಯಿತಿ ನಂತರ ₹44,990 ಕ್ಕೆ ಖರೀದಿಗೆ ಲಭ್ಯವಿದೆ.

ಪ್ಲೇಸ್ಟೇಷನ್ ಪೋರ್ಟಲ್ — ಮಾರಾಟ ಬೆಲೆ: 16,990 (ರೂ. 2,000 ರಿಯಾಯಿತಿ)
ಪ್ಲೇಸ್ಟೇಷನ್ VR2 — ಮಾರಾಟ ಬೆಲೆ: ₹34,999 (₹10,000 ರಿಯಾಯಿತಿ)
ಪಲ್ಸ್ ಎಲೈಟ್ ವೈರ್‌ಲೆಸ್ ಹೆಡ್‌ಸೆಟ್ — ಮಾರಾಟ ಬೆಲೆ: ₹7,990 (₹5,000 ರಿಯಾಯಿತಿ)
ಪಲ್ಸ್ ಎಕ್ಸ್‌ಪ್ಲೋರ್ ವೈರ್‌ಲೆಸ್ ಇಯರ್‌ಬಡ್ಸ್ — ಮಾರಾಟ ಬೆಲೆ: 9,990 (ರೂ. 9,000 ರಿಯಾಯಿತಿ)
ಡ್ಯುಯಲ್‌ಸೆನ್ಸ್ ಕಂಟ್ರೋಲರ್ (ಬಿಳಿ/ಕಪ್ಪು/ಕೆಂಪು/ಐಸ್ ನೀಲಿ/ಬೂದು ಕ್ಯಾಮೊ) — 4,390 (ರೂ. 2,000 ರಿಯಾಯಿತಿ)
ಡ್ಯುಯಲ್‌ಸೆನ್ಸ್ ಕಂಟ್ರೋಲರ್ (ಮ್ಯಾಟ್ ನೀಲಿ/ಕೆಂಪು, CHRM ಟೀಲ್/ಇಂಡಿಗೊ) – ₹4,849 (₹2,000 ರಿಯಾಯಿತಿ)
ಡ್ಯುಯಲ್‌ಸೆನ್ಸ್ ಎಡ್ಜ್ ವೈರ್‌ಲೆಸ್ ಕಂಟ್ರೋಲರ್ – 15,990 (ರೂ. 3,000 ರಿಯಾಯಿತಿ)
PS5 ಆಕ್ಸೆಸ್ ಕಂಟ್ರೋಲರ್ – ₹5,700 (₹2,000 ರಿಯಾಯಿತಿ)

Black Friday Sale ರಿಯಾಯಿತಿಗಳು ಎಲ್ಲಿ ಲಭ್ಯವಿದೆ?

ಈ ಬ್ಲ್ಯಾಕ್ ಫ್ರೈಡೇ ಸೇಲ್ ಭಾರತದ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳಲ್ಲಿ ಲಭ್ಯವಿರುತ್ತದೆ. ಇವುಗಳಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್, ಬ್ಲಿಂಕಿಟ್, ಜೆಪ್ಟೊ, ಕ್ರೋಮಾ, ರಿಲಯನ್ಸ್ ಡಿಜಿಟಲ್, ವಿಜಯ್ ಸೇಲ್ಸ್, ಸೋನಿ ಸೆಂಟರ್ ಮತ್ತು ಇತರ ಅಧಿಕೃತ ಪ್ಲೇಸ್ಟೇಷನ್ ಚಿಲ್ಲರೆ ವ್ಯಾಪಾರಿಗಳು ಸೇರಿದ್ದಾರೆ. ಈ ಮಾರಾಟವು ಇಂದು 21ನೇ ನವೆಂಬರ್ ರಿಂದ 4ನೇ ಡಿಸೆಂಬರ್ 2025 ರವರೆಗೆ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಲಭವಿರುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :