10.4 ಇಂಚಿನ ಸ್ಕ್ರೀನ್ ಮತ್ತು 7100mAh ಬ್ಯಾಟರಿಯ Realme Pad ಅನ್ನು ಕೇವಲ 500 ರೂಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು

Updated on 16-Sep-2021
HIGHLIGHTS

ರಿಯಲ್‌ಮಿ ಪ್ಯಾಡ್‌ನಲ್ಲಿ (Realme Pad) ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ.

ರಿಯಲ್‌ಮಿ ಪ್ಯಾಡ್ (Realme Pad) ಅನ್ನು ಎಷ್ಟು ಬೆಲೆಗೆ ಮತ್ತು ಯಾವ ಆಫರ್‌ಗಳೊಂದಿಗೆ ಖರೀದಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ರಿಯಲ್‌ಮಿ ಪ್ಯಾಡ್ (Realme Pad) WiFi ರೂಪಾಂತರ (3GB + 32GB) 13,999 ರೂಗಳಿಗೆ ಖರೀದಿಸಬಹುದು.

ರಿಯಲ್‌ಮಿ ಕಂಪನಿಯು ಬಳಕೆದಾರರಿಗೆ ತುಂಬಾ ಇಷ್ಟವಾಗುವಂತಹ ಹಲವು ವಿಶೇಷತೆಗಳನ್ನು ನೀಡಿದೆ. ರಿಯಲ್‌ಮಿ ಪ್ಯಾಡ್ ಕಂಪನಿಯ ಮೊದಲ ಟ್ಯಾಬ್ಲೆಟ್ ಆಗಿದ್ದು ಅದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G80 ಪ್ರೊಸೆಸರ್‌ನೊಂದಿಗೆ ಬರುತ್ತದೆ. ರಿಯಲ್‌ಮಿ ಪ್ಯಾಡ್‌ನಲ್ಲಿ ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ. ರಿಯಲ್‌ಮಿ ಪ್ಯಾಡ್ ಇಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗುತ್ತದೆ. ಇದರೊಂದಿಗೆ ಕೆಲವು ಕೊಡುಗೆಗಳನ್ನು ಸಹ ನೀಡಲಾಗುವುದು. ಆದ್ದರಿಂದ ನೀವು ರಿಯಲ್‌ಮಿ ಪ್ಯಾಡ್ ಅನ್ನು ಎಷ್ಟು ಬೆಲೆಗೆ ಮತ್ತು ಯಾವ ಆಫರ್‌ಗಳೊಂದಿಗೆ ಖರೀದಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ರಿಯಲ್‌ಮಿ ಪ್ಯಾಡ್‌ನ ಬೆಲೆ ಮತ್ತು ಆಫರ್ಗಳು:

ರಿಯಲ್‌ಮಿ ಪ್ಯಾಡ್‌ನ LTE ರೂಪಾಂತರವನ್ನು (3GB + 32GB) 15,999 ರೂಗಳಿಗೆ ಖರೀದಿಸಬಹುದು. ಅದೇ ಸಮಯದಲ್ಲಿ ರಿಯಲ್‌ಮಿ ಪ್ಯಾಡ್‌ LTE ರೂಪಾಂತರಗಳನ್ನು (4GB + 64GB) 17,999 ರೂಗಳಿಗೆ ಖರೀದಿಸಬಹುದು. ಇದರ ರಿಯಲ್‌ಮಿ ಪ್ಯಾಡ್‌ ವೈಫೈ ರೂಪಾಂತರವನ್ನು (3GB + 32GB) 13,999 ರೂಗಳಿಗೆ ಖರೀದಿಸಬಹುದು. ಇದನ್ನು ರಿಯಲ್ ಗೋಲ್ಡ್ ಮತ್ತು ರಿಯಲ್ ಗ್ರೇ ಬಣ್ಣದಲ್ಲಿ ಖರೀದಿಸಬಹುದು. ಇದನ್ನು ಕಂಪನಿಯ ವೆಬ್‌ಸೈಟ್‌ನಿಂದ ಖರೀದಿಸಿದರೆ ಬಳಕೆದಾರರು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮೂಲಕ ಫ್ಲಾಟ್ ರೂ 1000 ಖರೀದಿಸಬಹುದು.

ಫ್ಲಿಪ್‌ಕಾರ್ಟ್‌ನಿಂದ ಖರೀದಿಸಿದ ನಂತರ ಬಳಕೆದಾರರಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಪಾವತಿಯ ಮೇಲೆ 5% ಶೇಕಡಾ ರಿಯಾಯಿತಿ ನೀಡಲಾಗುತ್ತದೆ. ಅದೇ ಸಮಯದಲ್ಲಿ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಮಾಸ್ಟರ್‌ಕಾರ್ಡ್‌ನಿಂದ ಮೊದಲ ಪಾವತಿಯ ಮೇಲೆ 10% ಪ್ರತಿಶತದಷ್ಟು ರಿಯಾಯಿತಿ ನೀಡಲಾಗುವುದು. ಅಲ್ಲದೆ Realme Pad ಅನ್ನು ಕೇವಲ 500 ರೂಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಇದರ್ಥ ನೀವು ಸ್ಟ್ಯಾಂಡರ್ಡ್ ಇಎಂಐ ಅಡಿಯಲ್ಲಿ ಇದನ್ನು ತಿಂಗಳಿಗೆ ರೂ 486 ಪಾವತಿಸಿ ಇಂದೇ ಖರೀದಿಸಬಹುದು.

ರಿಯಲ್‌ಮಿ ಪ್ಯಾಡ್‌ನ ವೈಶಿಷ್ಟ್ಯಗಳು:

ಇದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ ಯುಐನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 10.4 ಇಂಚಿನ WUXGA+ ಡಿಸ್‌ಪ್ಲೇ ಹೊಂದಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 1200×2000. ಇದರ ಸ್ಕ್ರೀನ್-ಟು-ಬಾಡಿ ಅನುಪಾತವು 82.5% ಶೇಕಡಾ ಇದು MediaTek Helio G80 ಪ್ರೊಸೆಸರ್ ಅನ್ನು ಹೊಂದಿದೆ. ಇದು 4 GB RAM ಮತ್ತು 64 GB ಸ್ಟೋರೇಜ್ ಹೊಂದಿದೆ. ಅದೇ ಸಮಯದಲ್ಲಿ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಇದು 4 ಡೈನಾಮಿಕ್ ಸ್ಪೀಕರ್‌ಗಳನ್ನು ಹೊಂದಿದ್ದು ಇದರಲ್ಲಿ ಡಾಲ್ಬಿ ಅಟ್ಮೋಸ್ ಮತ್ತು ಹೈ-ರೆಸ್ ಆಡಿಯೋ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹಾಗೆಯೇ ಡ್ಯುಯಲ್ ಮೈಕ್ರೊಫೋನ್ ಗಳು ಕೂಡ ಇದರಲ್ಲಿವೆ. ಓಪನ್-ಅಪ್ ಆಟೋ ಕನೆಕ್ಷನ್ ಫೀಚರ್ ರಿಯಲ್‌ಮಿ ಪ್ಯಾಡ್‌ನಲ್ಲಿದೆ. ಇದು 7100 mAh ಬ್ಯಾಟರಿಯನ್ನು ಹೊಂದಿದ್ದು 18W ತ್ವರಿತ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :