Raksha Bandhan 2025
Raksha Bandhan 2025: ಈ ರಕ್ಷಾಬಂಧನವು ಭಾರತದ ಅತ್ಯಂತ ಪ್ರೀತಿಪಾತ್ರ ಹಾಗೂ ಭಾವನಾತ್ಮಕ ಹಬ್ಬಗಳಲ್ಲಿ ಒಂದಾಗಿದೆ. ಇದು ಅಕ್ಕ-ತಮ್ಮಂದಿರ ನಡುವಿನ ಅಪಾರ ಪ್ರೀತಿ, ನಂಬಿಕೆ ಮತ್ತು ರಕ್ಷಣೆಯ ಸಂಕೇತವಾಗಿದೆ. ರಕ್ಷಾಬಂಧನ 2025 ಈ ಬಾರಿ ಇಂದು ಅಂದ್ರೆ 9ನೇ ಆಗಸ್ಟ್ 2025 ರಂದು ಆಚರಿಸಲಾಗುತ್ತದೆ. ದೇಶದಾದ್ಯಂತ ಕುಟುಂಬಗಳು ಸಂತೋಷದಿಂದ ಈ ಹಬ್ಬವನ್ನು ಆಚರಿಸಲು ಸಿದ್ಧವಾಗಿವೆ. ಈ ರಕ್ಷಾಬಂಧನ (Raksha Bandhan 2025) ನಿಮ್ಮ ಸಹೋದರ ಅಥವಾ ಸಹೋದರಿಯೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದರೊಂದಿಗೆ ಪ್ರೀತಿಯ ಸಂದೇಶ ಕಳುಹಿಸಿ ಈ ಅಪೂರ್ವ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬಹುದು. ಈ ಹಬ್ಬ ಅಕ್ಕ-ತಮ್ಮಂದಿರ ಪ್ರೀತಿ ಮತ್ತು ರಕ್ಷಣೆಯ ಹಬ್ಬವಾಗಿದ್ದು ವಿಶೇಷ ಶುಭಾಶಯಗಳು, ಮೆಸೇಜ್ ಮತ್ತು ಹಬ್ಬದ ಮಹತ್ವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ರಕ್ಷಾಬಂಧನದ ನಿಜವಾದ ಅರ್ಥವೆಂದರೆ ಅಕ್ಕ-ತಮ್ಮಂದಿರ ಬಾಂಧವ್ಯವನ್ನು ಗೌರವಿಸುವುದು ಮತ್ತು ಜೀವನದಲ್ಲಿ ಎಷ್ಟೇ ಬದಲಾವಣೆಗಳು ಬಂದರೂ, ಈ ಬಂಧವು ಬದಲಾಗುವುದಿಲ್ಲ ಹತ್ತಿರವಿದ್ದರೂ ಅಥವಾ ದೂರದಲ್ಲಿದ್ದರೂ ಜೀವನಪೂರ್ತಿ ಉಳಿಸಿಕೊಳ್ಳುವುದು. ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಹಬ್ಬದ ವೇಳೆ ಸಹೋದರಿ ತಮ್ಮನ ಕೈಗೆ ರಾಖಿ (ಪವಿತ್ರ ಹಗ್ಗ) ಕಟ್ಟುತ್ತಾಳೆ. ಇದು ಪ್ರೀತಿ ಮತ್ತು ರಕ್ಷಣೆಯ ಸಂಕೇತವಾಗಿದೆ. ತಮ್ಮನು ಇದಕ್ಕೆ ಪ್ರತಿಯಾಗಿ ತನ್ನ ಅಕ್ಕ ಅಥವಾ ತಂಗಿಯ ಜೀವನದಲ್ಲಿ ಯಾವ ಪರಿಸ್ಥಿತಿಯಲ್ಲಾದರೂ ರಕ್ಷಣೆ ಮಾಡುವುದಾಗಿ ಭರವಸೆ ನೀಡುತ್ತಾನೆ. ಯಾಕೆಂದರೆ ಇದು ಹಿಂದೂ ಸಂಸ್ಕೃತಿಯ ಪ್ರಕಾರ ಅಪಾರ ಪ್ರೀತಿ, ನಂಬಿಕೆ ಮತ್ತು ರಕ್ಷಣೆಯ ಸಂಕೇತವಾಗಿದೆ.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಅಕ್ಕ-ತಮ್ಮಂದಿರು ದೂರದಲ್ಲಿದ್ದರೂ WhatsApp, Facebook, Instagram ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಪ್ರೀತಿಯಿಂದ ಬರೆಯಲಾದ ಸಂದೇಶಗಳು, ಫೋಟೋಗಳು, ವೀಡಿಯೊಗಳು, ಮತ್ತು ವಾಯ್ಸ್ ನೋಟ್‌ಗಳ ಮೂಲಕ ದೂರವನ್ನು ಮರೆಮಾಡುತ್ತಾರೆ. ಕೆಲವರು ಆನ್‌ಲೈನ್‌ನಲ್ಲಿ ರಾಖಿ ಕಳುಹಿಸಿ ಗಿಫ್ಟ್‌ಗಳನ್ನು ಆರ್ಡರ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಯಾಕೆಂದರೆ ಇಂದಿನ ಕಾಲದಲ್ಲಿ ಈ ಸಂಪ್ರದಾಯವನ್ನು ತಮ್ಮಂದಿರು ಮಾತ್ರವಲ್ಲದೆ ಚಿಕ್ಕಪ್ಪಂದಿರು, ಮಾವಂದಿರು, ಸ್ನೇಹಿತರು ಹಾಗೂ ತಮ್ಮಂತೆಯೇ ಹತ್ತಿರವಾಗಿರುವ ಪ್ರತಿ ವ್ಯಕ್ತಿಗಳ ಜೊತೆಗೂ ಆಚರಿಸಲಾಗುತ್ತಿದೆ.
Also Read: Sony Dolby Soundbar ಇಂದು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!