James: ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಮೊದಲ ಬಾರಿಗೆ ಪ್ರೀಮಿಯರ್ ಆಗಲಿದೆ

Updated on 13-Jul-2022
HIGHLIGHTS

ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ 'ಜೇಮ್ಸ್' ಸಿನಿಮಾ

ಚಿತ್ರಮಂದಿರಗಳಲ್ಲಿ ದೊಡ್ಡಮಟ್ಟದಲ್ಲಿ ತೆರೆಕಂಡಿದ್ದ ಜೇಮ್ಸ್ (James)

ಜೇಮ್ಸ್ (James) ಸಿನಿಮಾ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರೀಮಿಯರ್ ಆಗಲಿದೆ.

ನಿಮ್ಮ ನೆಚ್ಚಿನ ಟಿವಿ ಚಾನಲ್ಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಬ್ಲಾಕ್ ಬಾಸ್ಟರ್ ಚಲನಚಿತ್ರ ಜೇಮ್ಸ್ (James) ಪ್ರೀಮಿಯರ್ ಆಗಲಿದೆ. ಈ ಸಿನಿಮಾಗಳು ಯಾವ ಚಾನಲ್ ಮೂಲಕ ಯಾವಾಗ ಪ್ರಸಾರವಾಗಲಿದೆ ಎನ್ನುವುದೇ ಒಂದು ಪ್ರಶ್ನೆಯಾಗಿದೆ. ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಸಿನಿಮಾದ ಮೇಲೆ ಅಭಿಮಾನಿಗಳಿಗೆ ವಿಶೇಷವಾದ ಪ್ರೀತಿ ಇದೆ. ಯಾಕೆಂದರೆ. ಜೇಮ್ಸ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಕಮರ್ಷಿಯಲ್ ಸಿನಿಮಾ. ಅಪ್ಪು ಅಭಿಮಾನಿಗಳ ಪಾಲಿಗೆ ಇದು ಬರೀ ಸಿನಿಮಾವಲ್ಲ ಬದಲಿಗೆ ಜೇಮ್ಸ್ ಒಂದು ಎಮೋಷನ್. ಸದ್ಯ ಪುನೀತ್ ಫ್ಯಾನ್ಸ್ ಖುಷಿ ಪಡುವಂತಹ ಸುದ್ದಿಯೊಂದು ಕೇಳಿಬಂದಿದೆ.

ಸ್ಟಾರ್ ಸುವರ್ಣದಲ್ಲಿ ಜೇಮ್ಸ್ ಪ್ರಸಾರ

ಜೇಮ್ಸ್ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸ್ಟಾರ್ ಸುವರ್ಣ ವಾಹಿನಿಯು ಪಡೆದುಕೊಂಡಿತ್ತು. ಇದೀಗ ಸಿನಿಮಾ ರಿಲೀಸ್ ಆಗಿ ಸರಿಯಾಗಿ 4 ತಿಂಗಳಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜೇಮ್ಸ್ ಸಿನಿಮಾವು ಪ್ರಸಾರವಾಗುತ್ತಿದೆ. ಜುಲೈ 17ರಂದು ಭಾನುವಾರ ಸಂಜೆ 5.30ಕ್ಕೆ ಜೇಮ್ಸ್ ಚಿತ್ರವು ಸುವರ್ಣ ವರ್ಲ್ಡ್ ಪ್ರಿಮಿಯರ್‌ ಆಗುತ್ತಿದೆ. ಬೆಳ್ಳಿತೆರೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೋಡಿ ಖುಷಿ ಪಟ್ಟಿದ್ದ ಅಭಿಮಾನಿಗಳು, ಕಿರುತೆರೆಯಲ್ಲಿಯೂ ರಾಜರತ್ನನ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

https://twitter.com/StarSuvarna/status/1546682352189030403?ref_src=twsrc%5Etfw

ಅಂದಹಾಗೆ ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಶಿವರಾಜ್‌ಕುಮಾರ್ ಅವರು ಧ್ವನಿ ನೀಡಿದ್ದರು. ಆರಂಭದಲ್ಲಿ ಕೆಲ ವಾರ ಶಿವಣ್ಣ ಅವರ ಧ್ವನಿಯಲ್ಲೇ ಸಿನಿಮಾ ಪ್ರದರ್ಶನ ಕಂಡಿತ್ತು. ಆನಂತರ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯನ್ನು ತಂತ್ರಜ್ಞಾನದ ಸಹಾಯದಿಂದ ಪುನಃ ಬಳಕೆ ಮಾಡಿಕೊಳ್ಳಲಾಗಿತ್ತು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಜೇಮ್ಸ್‌ ಸಿನಿಮಾದಲ್ಲಿ ಪುನೀತ್ ಅವರದ್ದೇ ಧ್ವನಿ ಇರಲಿದೆ.

ಮಾರ್ಚ್ 17ರಂದು ನಡೆದಿತ್ತು ಜೇಮ್ಸ್ ಜಾತ್ರೆ!

ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನವೇ ಜೇಮ್ಸ್ ಸಿನಿಮಾ ತೆರೆಕಂಡಿತ್ತು. ಮಾರ್ಚ್ 17ರಂದು ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಚಿತ್ರಮಂದಿರಗಳನ್ನು ಅಲಂಕರಿಸಿದ್ದ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದರು. ಕನ್ನಡ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಜೇಮ್ಸ್ ತೆರೆಕಂಡಿತ್ತು. ಇದೀಗ ಜೇಮ್ಸ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :