OnePlus Community Sale: ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್
ಬಹುನಿರೀಕ್ಷಿತ ಒನ್‌ಪ್ಲಸ್ ಕಂಪನಿಯ ಕಮ್ಯೂನಿಟಿ ಸೇಲ್ ಘೋಷಣೆ
ಒನ್‌ಪ್ಲಸ್‌ನ ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳು ಭರ್ಜರಿ ಡಿಸ್ಕೌಂಟ್ ಪಡೆದಿವೆ
ಒನ್‌ಪ್ಲಸ್ ಕಂಪನಿಯ ಕಮ್ಯೂನಿಟಿ ಸೇಲ್ ಇದೇ ಜೂನ್ 11 ರ ವರೆಗೂ ಚಾಲ್ತಿ ಇರಲಿದೆ
OnePlus ಮೊಬೈಲ್ ಸಂಸ್ಥೆಯು ಭಾರತದಲ್ಲಿ ತನ್ನ ಬಹುನಿರೀಕ್ಷಿತ Community Sale ಅನ್ನು ಘೋಷಿಸಿದೆ. ಈ ಮಾರಾಟದಲ್ಲಿ ಕಂಪನಿಯ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಆಡಿಯೋ ಡಿವೈಸ್‌ಗಳು ಭರ್ಜರಿ ರಿಯಾಯಿತಿ ಆಫರ್‌ನಲ್ಲಿ ಖರೀದಿಗೆ ಲಭ್ಯವಾಗಲಿವೆ. ಸಂಸ್ಥೆಯು ಫ್ಲ್ಯಾಗ್‌ಶಿಪ್ ಫೋನ್‌ಗಳು ಹಾಗೂ ನಾರ್ಡ್ ಸರಣಿಯ ಮೊಬೈಲ್‌ಗಳು ಸಹ ಆಫರ್‌ನಲ್ಲಿ ಕಾಣಿಸಿಕೊಂಡಿವೆ. ಅಲ್ಲದೇ ಹೆಚ್ಚುವರಿಯಾಗಿ ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿಗಳು, ನೋ ಕಾಸ್ಟ್ EMI ಆಯ್ಕೆಗಳು ಸಹ ಸಿಗಲಿವೆ. ಅಂದಹಾಗೆ ಈ ವಿಶೇಷ ಸೇಲ್ ಇದೇ ಜೂನ್ 11, 2026 ರ ವರೆಗೆ ಚಾಲ್ತಿ ಇರಲಿದೆ. ಹಾಗಾದರೇ ಒನ್‌ಪ್ಲಸ್ ಕಂಪನಿಯ ಕಮ್ಯೂನಿಟಿ ಸೇಲ್‌ನಲ್ಲಿ ಡಿಸ್ಕೌಂಟ್ ಪಡೆದ ಡಿವೈಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ದೇಶೀಯ ಮಾರುಕಟ್ಟೆಯಲ್ಲಿ ಹೊಸ Xiaomi ಸ್ಮಾರ್ಟ್‌ಟಿವಿಗಳ ಗ್ರ್ಯಾಂಡ್ ಎಂಟ್ರಿ; ಬೆಲೆ ನೋಡಿ
OnePlus Community Sale ಆಫರ್ ಮಾಹಿತಿ
ಒನ್‌ಪ್ಲಸ್ ಕಂಪನಿಯ ಕಮ್ಯೂನಿಟಿ ಸೇಲ್‌ನಲ್ಲಿ ಸಂಸ್ಥೆಯ ಪ್ರಮುಖ ಒನ್‌ಪ್ಲಸ್ 13 ಸರಣಿ, ಒನ್‌ಪ್ಲಸ್ 13s ಮತ್ತು ಒನ್‌ಪ್ಲಸ್ 15 ಸರಣಿ ಫೋನ್‌ಗಳು ಸಹ ಕೊಡುಗೆಯಲ್ಲಿ ಲಭ್ಯವಾಗಲಿವೆ. ಅಲ್ಲದೇ ಒನ್‌ಪ್ಲಸ್ 15 ಮತ್ತು ಒನ್‌ಪ್ಲಸ್ 15R ಸ್ಮಾರ್ಟ್‌ಫೋನ್‌ಗಳು ಕೂಡಾ ರಿಯಾಯಿತಿ ಪಡೆದಿವೆ. ಒನ್‌ಪ್ಲಸ್ 15 ಮೊಬೈಲ್ ಬೆಲೆಯು 77,999 ರೂ. ಆಗಿದೆ. ಆದರೆ ಈ ಫೋನಿಗೆ ಸದ್ಯ 3,000 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಲಭ್ಯ ಇದ್ದು, ಗ್ರಾಹಕರು 74,999 ರೂ. ಗಳಿಗೆ ಖರೀದಿಸಬಹುದು.

ಹಾಗೆಯೇ ಒನ್‌ಪ್ಲಸ್ 15R ಮೊಬೈಲ್ ಬೆಲೆಯು 54,999 ರೂ.ಗಳು ಆಗಿದೆ. ಆದರೆ ಈ ಫೋನಿಗೆ ಸದ್ಯ 3,000 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಲಭ್ಯ ಇದ್ದು, 51,999 ರೂ. ಗಳ ಬೆಲೆಯಲ್ಲಿ ಸಿಗಲಿದೆ. ಇನ್ನು ಒನ್‌ಪ್ಲಸ್ 13 ಮೊಬೈಲ್ ಬೆಲೆಯು 69,999 ರೂ.ಗಳು ಆಗಿದೆ. ಆದರೆ ಈ ಫೋನಿಗೆ ಸದ್ಯ 5,000 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಲಭ್ಯ ಇದ್ದು, 52,999 ರೂ. ಗಳ ಬೆಲೆಯಲ್ಲಿ ಸಿಗಲಿದೆ.
ಒನ್‌ಪ್ಲಸ್ ನಾರ್ಡ್ ಫೋನ್‌ಗಳಿಗೆ ಅಫರ್
ಒನ್‌ಪ್ಲಸ್ ಸಂಸ್ಥೆಯ ನಾರ್ಡ್ ಸ್ಮಾರ್ಟ್‌ಫೋನ್ ಸರಣಿಯ ಮೊಬೈಲ್‌ಗಳು ಡಿಸ್ಕೌಂಟ್ ಪಡೆದಿವೆ. ಈ ಸರಣಿಯಲ್ಲಿ ಒನ್‌ಪ್ಲಸ್ ನಾರ್ಡ್ 6, ಒನ್‌ಪ್ಲಸ್ ನಾರ್ಡ್ CE6 ಮತ್ತು ಒನ್‌ಪ್ಲಸ್ ನಾರ್ಡ್ CE6 ಲೈಟ್ ಫೋನ್‌ಗಳು ಸೇರಿವೆ. ಅಂದಹಾಗೆ ಒನ್‌ಪ್ಲಸ್ ನಾರ್ಡ್ 6 ಮೊಬೈಲ್ ಬೆಲೆಯು 42,999 ರೂ.ಗಳು ಆಗಿದೆ. ಆದರೆ ಈ ಫೋನಿಗೆ ಸದ್ಯ 2,000 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಲಭ್ಯ ಇದ್ದು, 40,999 ರೂ. ಗಳ ಬೆಲೆಯಲ್ಲಿ ಸಿಗಲಿದೆ. ಹಾಗೆಯೇ ಒನ್‌ಪ್ಲಸ್ ನಾರ್ಡ್ CE6 ಮೊಬೈಲ್ ಬೆಲೆಯು 31,999 ರೂ.ಗಳು ಆಗಿದೆ. ಆದರೆ ಈ ಫೋನಿಗೆ ಸದ್ಯ 2,000 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಲಭ್ಯ ಇದ್ದು, 29,999 ರೂ. ಗಳ ಬೆಲೆಯಲ್ಲಿ ಸಿಗಲಿದೆ. ಅದೇ ರೀತಿ ಒನ್‌ಪ್ಲಸ್ ನಾರ್ಡ್ CE6 ಲೈಟ್ ಮೊಬೈಲ್ ಬೆಲೆಯು 22,999 ರೂ.ಗಳು ಆಗಿದೆ. ಆದರೆ ಈ ಫೋನಿಗೆ ಸದ್ಯ 1,500 ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಲಭ್ಯ ಇದ್ದು, 21,499 ರೂ. ಗಳ ಬೆಲೆಯಲ್ಲಿ ಸಿಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
