ಭಾರತದಲ್ಲಿ Moto Pad 70 Pro ಟ್ಯಾಬ್‌ ಲಾಂಚ್‌! 10,200mAh ಬ್ಯಾಟರಿ ಸಪೋರ್ಟ್‌

HIGHLIGHTS

ಮೊಟೊ ಪ್ಯಾಡ್‌ 70 ಪ್ರೊ ಟ್ಯಾಬ್ಲೆಟ್ 10,200mAh ಬ್ಯಾಟರಿ ಒಳಗೊಂಡಿದೆ

ಈ ಟ್ಯಾಬ್‌ ಮೈಕ್ರೊSD ಕಾರ್ಡ್ ಮೂಲಕ 2TB ವರೆಗೆ ಮೆಮೊರಿ ವಿಸ್ತರಿಸುವ ಆಯ್ಕೆ ಪಡೆದಿದೆ

ಮೊಟೊದ ಈ ಟ್ಯಾಬ್‌ ಆಂಡ್ರಾಯ್ಡ್ 16-ಆಧಾರಿತ ಹಲೋ UI ಸಪೋರ್ಟ್‌ ಒಳಗೊಂಡಿದೆ

ಮೊಟೊರೊಲಾ ಕಂಪನಿಯ ಟ್ಯಾಬ್ಲೆಟ್ ಡಿವೈಸ್‌ಗಳು ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಅವರ ಮುಂದುವರಿದ ಭಾಗವಾಗಿ ಮೊಟೊ ಇದೀಗ Moto Pad 70 Pro ಟ್ಯಾಬ್‌ ಅನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಟ್ಯಾಬ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s ಜೆನ್ 4 ಪ್ರೊಸೆಸರ್‌ ಸಪೋರ್ಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 144Hz ರಿಫ್ರೆಶ್ ರೇಟ್‌ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸರ್ ರಚನೆಯನ್ನು ಪಡೆದುಕೊಂಡಿದೆ. ಈ ಟ್ಯಾಬ್‌ 10,200mAh ಬ್ಯಾಟರಿ ಸಪೋರ್ಟ್‌ ಅನ್ನು ಹೊಂದಿದೆ. ಹಾಗಾದರೇ ಮೊಟೊ ಪ್ಯಾಡ್‌ 70 ಪ್ರೊ ಟ್ಯಾಬ್‌ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Vi ಟೆಲಿಕಾಂನ ಈ ಕಡಿಮೆ ಬೆಲೆಯ ಪೋಸ್ಟ್‌ಪೇಯ್ಡ್‌ ಪ್ಲಾನ್‌ನಲ್ಲಿ ಆಕರ್ಷಕ ಪ್ರಯೋಜನ!

Moto Pad 70 Pro ಟ್ಯಾಬ್‌ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಮೊಟೊರೊಲಾ ಕಂಪನಿಯ ನೂತನ ಮೊಟೊ ಪ್ಯಾಡ್‌ 70 ಪ್ರೊ ಟ್ಯಾಬ್‌ನ 8GB RAM + 128GB ವೇರಿಯಂಟ್‌ 36,999 ರೂ.ಗಳ ಬೆಲೆಯನ್ನು ಹೊಂದಿದೆ. ಇದರ 256GB ಸ್ಟೋರೇಜ್‌ ವೇರಿಯಂಟ್‌ 39,999 ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ಮೊಟೊರೊಲಾದ ಸ್ನ್ಯಾಪ್-ಆನ್ ಕೀಬೋರ್ಡ್ ಹೊಂದಿರುವ ಟ್ಯಾಬ್ಲೆಟ್ 45,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಹೊಸ ಟ್ಯಾಬ್ಲೆಟ್ ಜುಲೈ 4 ರಂದು ಫ್ಲಿಪ್‌ಕಾರ್ಟ್ ಮತ್ತು ಮೊಟೊರೊಲಾ ಆನ್‌ಲೈನ್ ಸ್ಟೋರ್ ಮೂಲಕ ಭಾರತದಲ್ಲಿ ಸೇಲ್‌ ಪ್ರಾರಂಭಿಸಲಿದೆ. ಮೊಟೊ ಪ್ಯಾಡ್ 70 ಪ್ರೊ ಡಿವೈಸ್‌ ಪ್ಯಾಂಟೋನ್ ಟೈಟಾನ್ ಕಲರ್‌ ಆಯ್ಕೆಯಲ್ಲಿ ಲಭ್ಯ.

ಮೊಟೊ ಪ್ಯಾಡ್‌ 70 ಪ್ರೊ ಟ್ಯಾಬ್‌ ಡಿವೈಸ್‌ ಫೀಚರ್ಸ್‌

ಮೊಟೊ ಪ್ಯಾಡ್‌ 70 ಪ್ರೊ ಟ್ಯಾಬ್‌ 13 ಇಂಚಿನ 3.5K LCD ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, 3,504 × 2,190 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ 144Hz ರಿಫ್ರೆಶ್ ರೇಟ್‌ ಮತ್ತು 800 nits ವರೆಗಿನ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಹೊಂದಿದೆ. ಅಲ್ಲದೇ 319 ppi ಪಿಕ್ಸೆಲ್ ಸಾಂದ್ರತೆ, ಡಾಲ್ಬಿ ವಿಷನ್ ಬೆಂಬಲವಿದೆ. ಇನ್ನು ಈ ಟ್ಯಾಬ್‌ ಕ್ವಾಲ್ಕಾಮ್‌ನ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಪ್ರೊಸೆಸರ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ನಾಲ್ಕು JBL-ಟ್ಯೂನ್ಡ್ ಸ್ಪೀಕರ್‌ ಪಡೆದಿದೆ.

ಹಾಗೆಯೇ ಮೊಟೊ ಪ್ಯಾಡ್‌ 70 ಪ್ರೊ ಟ್ಯಾಬ್‌ ಹಿಂಭಾಗದಲ್ಲಿ 13MP ಸೆನ್ಸಾರ್‌ನ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ 10,200mAh ಬ್ಯಾಟರಿ ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಇದು ವೈರ್‌ಲೆಸ್ ಸಂಪರ್ಕಕ್ಕಾಗಿ Wi-Fi 7 ಮತ್ತು ಬ್ಲೂಟೂತ್ 6.0 ಅನ್ನು ಸಹ ಬೆಂಬಲಿಸುತ್ತದೆ. USB 3.2 Gen 1 ಟೈಪ್-C ಪೋರ್ಟ್ ಅನ್ನು ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :