Kantara Chapter 1 on Amazon Prime OTT
ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕನ್ನಡದ ಜನಪ್ರಿಯ ಮತ್ತು ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ (Kantara) ಸಿನಿಮಾದಲ್ಲಿ ಮಂಗಳೂರು ಪ್ರದೇಶದ ಖ್ಯಾತ ಭೂತ ಕೋಲಾ ಹಬ್ಬದ ಸಾಂಪ್ರದಾಯದ ಕಥೆ ಮತ್ತು ನಂಬಿಕೆಯನ್ನು ಜಗತ್ತಿಗೆ ವಿವರಿಸಲಾಗಿದೆ.ಈ ಈ ಸಿನಿಮಾವನ್ನು ರಿಷಭ್ ಶೆಟ್ಟಿ (Rishab Shetty) ನಿರ್ದೇಶಿಸಿದ್ದು ಇದರ ಎರಡನೇ ಭಾಗ ಪೂರ್ತಿ 3 ವರ್ಷಗಳ ನಂತರ ಈಗ 2025 ರಲ್ಲಿ ಹೊಸ ಅಧ್ಯಯವನ್ನು Kantara Chapter 1 ಎಂಬ ಹೆಸರಿನೊಂದಿಗೆ ತಂದಿದೆ. ಈಗ ಅದರ ಪೂರ್ವಭಾಗ ಅದಕ್ಕಿಂತ ಸಿಕ್ಕಾಪಟ್ಟೆ ಜೋರಾಗಿದ್ದು ಈ ಕನ್ನಡ ಸಿನಿಮಾ (Kannada Movie) ಈಗ ಕೇವಲ ಕರ್ನಾಟಕ ಮಾತ್ರವಲ್ಲ ದೇಶ ಸೇರಿ ವಿದೇಶಗಳಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಬ್ಲಾಕ್ ಬಸ್ಟರ್ ಕಾಂತಾರ ಚಾಪ್ಟರ್ ಇಂದಿನಿಂದ OTT ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಲು ಲಭ್ಯವಿದೆ.
Also Read: Android Smart TV: ಅಮೆಜಾನ್ ಸೇಲ್‌ನಲ್ಲಿ 43 ಇಂಚಿನ QLED ಸ್ಮಾರ್ಟ್ ಟಿವಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
ಪ್ರಸ್ತುತ ಸ್ಯಾಂಡಲ್‌ವುಡ್ ತನ್ನ ಪರಿಮಳವನ್ನು ವಿಶ್ವದಾದ್ಯಂತ ಹರಡುವುದರೊಂದಿಗೆ ಈ ಕಾಂತಾರ ಚಾಪ್ಟರ್ ಮೊದಲ ಅಧ್ಯಾಯ (Kantara Chapter 1) ಪ್ರಸ್ತುತ ಅತ್ಯಂತ ಯಶಸ್ವಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ನಂತರ ಈಗ ಇದರ ಡಿಜಿಟಲ್ ಬಿಡುಗಡೆಯನ್ನು ಅಮೆಜಾನ್ ಪ್ರೈಮ್ (Amazon Prime) ಪಡೆದುಕೊಂಡಿದೆ. ಈವರಗೆ ಇನ್ನು ಈ ನಮ್ಮ ಕನ್ನಡ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸದ ಅಭಿಮಾನಿಗಳು ಈಗ ಮನೆಯಲ್ಲೇ ಕುಳಿತು ಮನೆಯವರರೊಂದಿಗೆ OTT ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ವೀಕ್ಷಿಸಿ ಆನಂದಿಸಬಹುದು. ಪ್ರಸ್ತುತ ಈ ಚಿತ್ರ ಪ್ರೈಮ್ ವಿಡಿಯೋದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು ಇನ್ನು ಕೆಲವು ವಾರಗಳ ನಂತರ ಹಿಂದಿ ಭಾಷೆಯಲ್ಲಿ ಲಭ್ಯವಾಗಲಿದೆ.
ಈ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಅವರೇ ಬೆರ್ಮೆ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕನಕಾವತಿ, ಗುಲ್ಶನ್ ದೇವಯ್ಯ ಪ್ರತಿಸ್ಪರ್ಧಿ ಪ್ರಿನ್ಸ್ ಕುಲಶೇಖರ ಪಾತ್ರದಲ್ಲಿ ಮತ್ತು ಜಯರಾಮ್ ಸುಬ್ರಮಣಿಯಂ ಪ್ರಮುಖ ಪಾತ್ರದಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ಅವರು ಇದನ್ನು ನಿರ್ಮಿಸಿದ್ದಾರೆ. ತಾಂತ್ರಿಕ ತಂಡವು ಮೊದಲ ಚಿತ್ರದಿಂದ ಹಿಂದಿರುಗಿದ ಹಲವಾರು ಸದಸ್ಯರನ್ನು ಒಳಗೊಂಡಿದೆ. ಅವರಲ್ಲಿ ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಮತ್ತು ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಸೇರಿದ್ದಾರೆ ಅವರ ಸ್ಮರಣೀಯ ಸಂಗೀತವು ಚಿತ್ರದ ಪ್ರಮುಖ ಅಂಶವಾಗಿದೆ.