ಭಾರತದಲ್ಲಿ Apple iPad mini (2026) ಡಿವೈಸ್ ಬಿಡುಗಡೆ; ಬೆಲೆ ಹಾಗೂ ಫೀಚರ್ಸ್ ನೋಡಿ
ಆಪಲ್ ಸಂಸ್ಥೆಯು ಇದೀಗ ಹೊಸದಾಗಿ Apple iPad mini (2026) ಡಿವೈಸ್ ಅನ್ನು ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಆಕರ್ಷಕ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಟ್ಟಿರುವ ಈ ಡಿವೈಸ್ 8.5 ಇಂಚಿನ OLED ಡಿಸ್‌ಪ್ಲೇ ಪಡೆದುಕೊಂಡಿದೆ. ಹಾಗೆಯೇ ಈ ಡಿವೈಸ್ ಕಂಪನಿಯ A20 ಪ್ರೊ ಚಿಪ್‌ಸೆಟ್ ಪ್ರೊಸೆಸರ್ ಬಲದವನ್ನು ಒಳಗೊಂಡಿದ್ದು, ಲ್ಯಾಂಡ್‌ಸ್ಕೇಪ್-ಆಧಾರಿತ ಮುಂಭಾಗದ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಟ್ಯಾಬ್ಲೆಟ್ iPadOS 27 ಅನ್ನು ರನ್ ಮಾಡುತ್ತದೆ ಮತ್ತು ಸಿರಿ AI ಜೊತೆಗೆ ಹೊಸ ಆಪಲ್ ಇಂಟೆಲಿಜೆನ್ಸ್ ಆಯ್ಕೆಗಳನ್ನು ಬೆಂಬಲಿಸುತ್ತದೆ. ಹಾಗಾದರೆ ಆಪಲ್ ಐಪ್ಯಾಡ್ ಮಿನಿ (2026) ಡಿವೈಸ್‌ನ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಕಡಿಮೆ ದರದಲ್ಲಿ ಅಧಿಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡೇಟಾ ಬೇಕಿದ್ರೆ, Jio ಸಂಸ್ಥೆಯ ಈ ಪ್ಲಾನ್ ಬೆಸ್ಟ್!
Apple iPad mini (2026) ಬೆಲೆ ಹಾಗೂ ಲಭ್ಯತೆ
ಮಾರುಕಟ್ಟೆ ಪ್ರವೇಶಿಸಿರುವ ಆಪಲ್ ಐಪ್ಯಾಡ್ ಮಿನಿ (2026) ಟ್ಯಾಬ್ಲೆಟ್ ಡಿವೈಸ್‌ನ 128GB ಸ್ಟೋರೇಜ್ ಸಾಮರ್ಥ್ಯದ Wi-Fi ಮಾದರಿಯ ಬೆಲೆಯು 82,900 ರೂ.ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ. ಹಾಗೆಯೇ Wi-Fi + 5G ವೇರಿಯಂಟ್ ಡಿವೈಸ್ ಬೆಲೆಯು 1,00,900 ರೂ.ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ. ಅಂದಹಾಗೆ ಈ ಟ್ಯಾಬ್ಲೆಟ್ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ‘ಮಿಡ್‌ನೈಟ್’ (Midnight) ಮತ್ತು ‘ಸ್ಟಾರ್‌ಲೈಟ್’ (Starlight) ಬಣ್ಣಗಳಲ್ಲಿ ದೊರೆಯುತ್ತದೆ. ಆಪಲ್ ವೆಬ್‌ಸೈಟ್ ಮತ್ತು ಆಪಲ್ ಸ್ಟೋರ್ ಆಪ್ ಮೂಲಕ ಐಪ್ಯಾಡ್ ಮಿನಿ (2026) ಗಾಗಿ ಪ್ರಿ- ಆರ್ಡರ್‌ಗಳು ಅಕ್ಟೋಬರ್ 28 ರಿಂದ ಪ್ರಾರಂಭವಾಗಲಿವೆ ಎಂದು ಆಪಲ್ ತಿಳಿಸಿದೆ. ಇದೇ ನವೆಂಬರ್ 6 ರಿಂದ ಈ ಡಿವೈಸ್ ಲಭ್ಯವಾಗಲಿದೆ.

ಆಪಲ್ ಐಪ್ಯಾಡ್ ಮಿನಿ ಡಿವೈಸ್ ಫೀಚರ್ಸ್ ಹೀಗಿವೆ
ಹೊಸ ಐಪ್ಯಾಡ್ ಮಿನಿ (2026) 8.5 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2316 x 1512 ಪಿಕ್ಸೆಲ್‌ಗಳ ರೆಸಲ್ಯೂಶನ್, P3 ವೈಡ್ ಕಲರ್ ಗ್ಯಾಮಟ್ ಬೆಂಬಲ ಮತ್ತು ಗರಿಷ್ಠ 1,200 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಈ ಟ್ಯಾಬ್ಲೆಟ್‌ಗೆ 2nm ತಂತ್ರಜ್ಞಾನದಲ್ಲಿ ತಯಾರಿಸಲಾದ ಆಪಲ್‌ನ A20 Pro ಚಿಪ್ ಶಕ್ತಿ ನೀಡುತ್ತದೆ. ಇದರಲ್ಲಿ ಪ್ರತಿ GPU ಕೋರ್‌ನಲ್ಲೂ ನ್ಯೂರಲ್ ಆಕ್ಸಿಲರೇಟರ್‌ಗಳನ್ನು ಹೊಂದಿರುವ 7-ಕೋರ್ GPU ಇದೆ. ಸ್ಟೋರೇಜ್ ಆಯ್ಕೆಗೆ ಅನುಗುಣವಾಗಿ CPU ವಿನ್ಯಾಸವೂ ಬದಲಾಗುತ್ತದೆ. 128GB ಮತ್ತು 256GB ಮಾದರಿಗಳಲ್ಲಿ 5-ಕೋರ್ CPU ಇದ್ದರೆ, 512GB ಮಾದರಿಯಲ್ಲಿ 6-ಕೋರ್ CPU ನೀಡಲಾಗಿದೆ.
ಈ ಟ್ಯಾಬ್ಲೆಟ್, ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್‌ನಲ್ಲಿರುವ 12 ಮೆಗಾಪಿಕ್ಸೆಲ್ ಸೆಂಟರ್ ಸ್ಟೇಜ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ವೈಡ್ ಸೆನ್ಸರ್ ಇದ್ದು, ಇದು ಸ್ಮಾರ್ಟ್ HDR 4) ಬೆಂಬಲ ಹಾಗೂ 60fps ವರೆಗಿನ 4K ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಇದರ ಗಮನ ಸೆಳೆಯುವ ಮತ್ತೊಂದು ಹೊಸ ಫೀಚರ್ ಎಂದರೆ ಅಕೌಸ್ಟಿಕ್ ಡಿಸ್‌ಪ್ಲೇ ಸಿಸ್ಟಮ್. ಇದಕ್ಕಾಗಿ ಸಂಸ್ಥೆಯು ವಿಶೇಷ ವೂಫರ್‌ಗಳನ್ನು ವಿನ್ಯಾಸಗೊಳಿಸಿದ್ದು, ಅವುಗಳನ್ನು ಗಾಜು ಮತ್ತು ಅಲ್ಯೂಮಿನಿಯಂ ಬಾಡಿಯ ನಡುವೆ ಅಳವಡಿಸಲಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
