iOS 27 ಘೋಷಣೆ: ಈ ಹೊಸ ಓಎಸ್‌ ಸಪೋರ್ಟ್‌ ಮಾಡುವ ಐಫೋನ್‌ಗಳ ಲಿಸ್ಟ್‌ ಇಲ್ಲಿದೆ

iOS 27 ಘೋಷಣೆ: ಈ ಹೊಸ ಓಎಸ್‌ ಸಪೋರ್ಟ್‌ ಮಾಡುವ ಐಫೋನ್‌ಗಳ ಲಿಸ್ಟ್‌ ಇಲ್ಲಿದೆ

WWDC 2026 ಕಾರ್ಯಕ್ರಮದಲ್ಲಿ Apple ತನ್ನ ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ ಆಗಿರುವ iOS 27 ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಐಓಎಸ್‌ 27 ಘೋಷಣೆ ಜೊತೆಗೆ ಈ ವರ್ಷದ ಕೊನೆಯಲ್ಲಿ ಯಾವ iPhone ಮಾದರಿಗಳಿಗೆ ಹೊಸ ಅಪ್‌ಡೇಟ್ ಲಭ್ಯವಾಗಲಿದೆ ಎಂಬ ಮಾಹಿತಿಯನ್ನೂ ಕಂಪನಿಯು ಬಹಿರಂಗಪಡಿಸಿದೆ. ವಿಶೇಷವೆಂದರೆ ಈ ಬಾರಿ ಆಪಲ್‌ ಯಾವುದೇ ಹೆಚ್ಚುವರಿ ಐಫೋನ್‌ ಮಾಡೆಲ್‌ಗಳಿಗೆ ಬೆಂಬಲವನ್ನು ಕೈಬಿಟ್ಟಿಲ್ಲ. ಪ್ರಸ್ತುತ ಐಓಎಸ್‌ 26 ಅನ್ನು ಸಪೋರ್ಟ್‌ ಮಾಡುವ ಎಲ್ಲ ಐಫೋನ್‌ಗಳು ಐಓಎಸ್‌ 27 ಅಪ್‌ಡೇಟ್ ಪಡೆಯಲಿವೆ. ಸಾಮಾನ್ಯವಾಗಿ ಹೊಸ ಐಓಎಸ್‌ ಆವೃತ್ತಿಗಳೊಂದಿಗೆ ಕೆಲವು ಹಳೆಯ ಐಫೋನ್‌ಗಳಿಗೆ ಬೆಂಬಲ ನಿಲ್ಲಿಸುವ ಸಂಸ್ಥೆಯು ಈ ಬಾರಿ ಬಳಕೆದಾರರಿಗೆ ಹೆಚ್ಚಿನ ಅವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಮುಂದುವರಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಜನಪ್ರಿಯ Vivo T5 Pro 5G ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ! ಆಕರ್ಷಕ ಫೀಚರ್ಸ್‌

iOS 27 ಸಪೋರ್ಟ್ ಮಾಡುವ ಐಫೋನ್‌ಗಳ ಸಂಪೂರ್ಣ ಪಟ್ಟಿ

– ಐಫೋನ್ 11

– ಐಫೋನ್ 11 ಪ್ರೊ

– ಐಫೋನ್ 11 ಪ್ರೊ ಮ್ಯಾಕ್ಸ್

– ಐಫೋನ್ 12

– ಐಫೋನ್ 12 ಮಿನಿ

– ಐಫೋನ್ 12 ಪ್ರೊ

– ಐಫೋನ್ 12 ಪ್ರೊ ಮ್ಯಾಕ್ಸ್

– ಐಫೋನ್ 13

– ಐಫೋನ್ 13 ಮಿನಿ

– ಐಫೋನ್ 13 ಪ್ರೊ

– ಐಫೋನ್ 13 ಪ್ರೊ ಮ್ಯಾಕ್ಸ್

– ಐಫೋನ್ 14

– ಐಫೋನ್ 14 ಪ್ಲಸ್

– ಐಫೋನ್ 14 ಪ್ರೊ

– ಐಫೋನ್ 14 ಪ್ರೊ ಮ್ಯಾಕ್ಸ್

iOS 27

– ಐಫೋನ್ SE (2 ನೇ ತಲೆಮಾರಿನ)

– ಐಫೋನ್ SE (3 ನೇ ತಲೆಮಾರಿನ)

– ಐಫೋನ್ 15

– ಐಫೋನ್ 15 ಪ್ಲಸ್

– ಐಫೋನ್ 15 ಪ್ರೊ

– ಐಫೋನ್ 15 ಪ್ರೊ ಮ್ಯಾಕ್ಸ್

– ಐಫೋನ್ 16

– ಐಫೋನ್ 16e

– ಐಫೋನ್ 16 ಪ್ಲಸ್

– ಐಫೋನ್ 16 ಪ್ರೊ

– ಐಫೋನ್ 16 ಪ್ರೊ ಮ್ಯಾಕ್ಸ್

– ಐಫೋನ್ 17

– ಐಫೋನ್ 17e

– ಐಫೋನ್ ಏರ್

– ಐಫೋನ್ 17 ಪ್ರೊ

– ಐಫೋನ್ 17 ಪ್ರೊ ಮ್ಯಾಕ್ಸ್

ಐಓಎಸ್‌ 27 ಯಾವಾಗ ಬಿಡುಗಡೆ ಆಗಲಿದೆ

ಆಪಲ್ ಈಗಾಗಲೇ ಐಓಎಸ್‌ 27 ರ ಮೊದಲ ಡೆವಲಪರ್ ಬೀಟಾವನ್ನು ಪರೀಕ್ಷೆಗೆ ಲಭ್ಯವಾಗುವಂತೆ ಮಾಡಿದೆ. ಸಾರ್ವಜನಿಕ ಬೀಟಾ ಜುಲೈನಲ್ಲಿ ಬರುವ ಸಾಧ್ಯತೆಗಳು ಇವೆ. ಇದು ಹೆಚ್ಚಿನ ಬಳಕೆದಾರರಿಗೆ ಅದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಸಾಫ್ಟ್‌ವೇರ್ ಅನ್ನು ಪ್ರಯತ್ನಿಸಲು ಅನುವು ಮಾಡಿಕೊಡುತ್ತದೆ. ಇನ್ನು ಐಓಎಸ್‌ 27 ರ ಸ್ಥಿರ ಆವೃತ್ತಿಯು ಸೆಪ್ಟೆಂಬರ್‌ನಲ್ಲಿ ಆಪಲ್‌ ಕಂಪನಿಯ ಮುಂದಿನ ನೂತನ ಐಫೋನ್ ಶ್ರೇಣಿಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile