insta new features
Instagram Reels Update: ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗಾಗಿ ಒಂದು ಅದ್ಭುತವಾದ ಫೀಚರ್ ಅನ್ನು ಪರಿಚಯಿಸುತ್ತಿದೆ. ಹೌದು, ಈಗ ನೀವು ನೋಡುವ ಅಥವಾ ಮಾಡುವ ರೀಲ್ಸ್‌ಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelligence) ಮೂಲಕ ಧ್ವನಿಯನ್ನು ಬೇರೆ ಭಾಷೆಗೆ ಬದಲಾಯಿಸಬಹುದು. ಅಷ್ಟೇ ಅಲ್ಲ ಆ ಭಾಷೆಗೆ ತಕ್ಕಂತೆ ವಿಡಿಯೋದಲ್ಲಿರುವ ವ್ಯಕ್ತಿಯ ತುಟಿಗಳ ಚಲನೆಯನ್ನು (Lip-sync) ಕೂಡ ಈ ತಂತ್ರಜ್ಞಾನ ಹೊಂದಿಸುತ್ತದೆ. ವಿಶ್ವದ ನಾಲ್ಕು ಪ್ರಮುಖ ಭಾಷೆಗಳಲ್ಲಿ ಲಭ್ಯವಿರುವ ಈ ಸೌಲಭ್ಯ ಈಗ ಕನ್ನಡ ಸೇರಿದಂತೆ 5 ಪ್ರಮುಖ ಭಾರತೀಯ ಭಾಷೆಗಳಿಗೆ ವಿಸ್ತರಣೆಯಾಗಿದೆ. ಭಾರತವು ಮೆಟಾ ಕಂಪನಿಗೆ ಎಷ್ಟು ಮುಖ್ಯವಾದ ಮಾರುಕಟ್ಟೆ ಈ ಹೊಸ ಅಪ್ಡೇಟ್ ತೋರಿಸುತ್ತದೆ. ಕಳೆದ ನವೆಂಬರ್‌ನಲ್ಲಿಯೇ ಈ ಬಗ್ಗೆ ಘೋಷಿಸಲಾಗಿದೆ ಆದರೆ ಈಗ ಇದು ಎಲ್ಲರಿಗೂ ಸಿಗುತ್ತಿದೆ.
ಮುಂಬೈನಲ್ಲಿ ನಡೆದ ಹೌಸ್ ಆಫ್ ಇನ್‌ಸ್ಟಾಗ್ರಾಮ್ ಎಂಬ ಕಾರ್ಯಕ್ರಮದಲ್ಲಿ ಕಂಪನಿಯು ಎರಡು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದೆ. ಉಪಯುಕ್ತ, ರೀಲ್ಸ್‌ಗಳಲ್ಲಿ ಹೆಚ್ಚಿನ ಭಾರತೀಯ ಭಾಷೆಗಳ ಬಳಕೆ ಮತ್ತು ಎರಡನೆಯದಾಗಿ ವಿಡಿಯೋದಲ್ಲಿ ಬರುವ ಅಕ್ಷರಗಳಿಗೆ ಸುಂದರ ಭಾರತೀಯ ಭಾಷೆಯ ಫಾಂಟ್‌ಗಳು ಬೆಂಬಲದೊಂದಿಗೆ ಈ ಬದಲಾವಣೆಯಿಂದಾಗಿ ಸೃಷ್ಟಿಕರ್ತರು ಕೇವಲ ತಮ್ಮ ಭಾಷೆಯವರಿಗೆ ಬೇರೆ ಭಾಷೆ ಮಾತನಾಡುವ ಜನರಿಗೆ ತಮ್ಮ ವಿಷಯವನ್ನು ತಿಳಿಸಲಾಗಿದೆ ಸುಲಭವಾಗಿ ತಲುಪಲು ಸಾಧ್ಯ. ಇದು ಕಾಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ಅವಕಾಶವನ್ನು ಹುಡುಕಲು ದೊಡ್ಡ ಅವಕಾಶ ನೀಡುತ್ತದೆ.
ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ, ಬಂಗಾಳಿ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಅಧಿಕೃತ ಬೆಂಬಲ ಸಿಕ್ಕಿದೆ. ಮೆಟಾ AI ತಂತ್ರಜ್ಞಾನವನ್ನು ಬಳಸಿ ನಿಮ್ಮ ರೀಲ್ಸ್‌ಗಳನ್ನು ಈ ಭಾಷೆಗಳಿಗೆ ಡಬ್ ಮಾಡಬಹುದು. ವೀಕ್ಷಕರು ವಿಡಿಯೋ ನೋಡುವಾಗ ತಮಗೆ ಬೇಕಾದ ಭಾಷೆಯನ್ನು ಆರಿಸಿಕೊಂಡರೆ ಸಾಕು ಆ ಭಾಷೆಯಲ್ಲಿ ವಿಡಿಯೋ ಪ್ಲೇ ಆಗುತ್ತದೆ. ಈ ಮೊದಲು ಇಂಗ್ಲಿಷ್, ಹಿಂದಿ, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳು ಮಾತ್ರ ಇದ್ದವು ಈಗ ನಮ್ಮ ಹೆಮ್ಮೆಯ ಕನ್ನಡವೂ ಈ ಪಟ್ಟಿಗೆ ಸೇರಿದೆ.
ಇಲ್ಲಿರುವ ಮತ್ತೊಂದು ವಿಶೇಷತೆ ಎಂದರೆ ಬೇರೆ ಭಾಷೆಗೆ ಅನುವಾದಗೊಂಡಾಗ ಧ್ವನಿಯು ರೋಬೋಟ್‌ನಂತೆ ಕೇಳುವುದಿಲ್ಲ. ಬದಲಾಗಿ ಮೆಟಾ AI ನಿಮ್ಮ ಅಸಲಿ ಧ್ವನಿಯ ಗಾಂಭೀರ್ಯ, ಸ್ವರ ಮತ್ತು ಮಾತನಾಡುವ ಶೈಲಿಯನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ. ನೀವು ವಿಡಿಯೋದಲ್ಲಿ ಎಷ್ಟು ವೇಗವಾಗಿ ಅಥವಾ ಯಾವ ಭಾವನೆಯಲ್ಲಿ ಮಾತನಾಡುತ್ತೀರೋ ಅದೇ ಶೈಲಿಯಲ್ಲಿ ಅನುವಾದಿತ ಧ್ವನಿಯೂ ಇರುತ್ತದೆ. ಅಷ್ಟೇ ಅಲ್ಲದೆ ನೀವು ಮಾತನಾಡುವಾಗ ಬಾಯಿಯ ಚಲನೆ (Lip-sync) ಕೂಡ ಹೊಸ ಭಾಷೆಗೆ ತಕ್ಕಂತೆ ಹೊಂದಿಕೆಯಾಗುತ್ತದೆ. ಈ ವಿಡಿಯೋವನ್ನು ನೋಡುವವರಿಗೆ ಅದು ಬೇರೆ ಭಾಷೆಯಿಂದ ಬಂದ ವಿಡಿಯೋ ಎಂದು ಅನುಮಾನವೇ ಬರುವುದಿಲ್ಲ ಅಷ್ಟು ನೈಸರ್ಗಿಕವಾಗಿ ಕಾಣಿಸುತ್ತದೆ.