Smartphone Price Hike in 2026
Smartphone Price Hike: ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸುವವರಿಗೆ ಒಂದು ಬೇಸರದ ಸುದ್ದಿ ಇದೆ. ಈ ಹೊಸ 2026 ವರ್ಷದಲ್ಲಿ ಮೊಬೈಲ್ ಫೋನ್‌ಗಳ ಬೆಲೆ ಈಗ ಮತ್ತೆ ಸುಮಾರು ಶೇ. 10 ರಿಂದ 15 ರಷ್ಟು ಹೆಚ್ಚಾಗಬಹುದು ಎಂದು ‘ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ’ (AIMRA) ಎಚ್ಚರಿಕೆ ನೀಡಿದೆ. ಈ 2025 ವರ್ಷಕ್ಕೆ ಬೆಲೆಗಳು ಶೇ. 10% ಹೆಚ್ಚಳ ಮುಂದಿನ ವರ್ಷವೂ ಇದು ಮುಂದುವರಿಯಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪರಿಶೀಲಿಸಬಹುದು.
ಮೊಬೈಲ್ ಫೋನ್ ಬೇಕಾದ ಮುಖ್ಯ ಭಾಗಗಳು ಕಾಂಪೊನೆಂಟ್ಸ್ ಬೆಲೆ ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಫೋನ್‌ನ ಮೆಮೋರಿ ಚಿಪ್‌ಗಳ ಬೆಲೆ ಜಾಸ್ತಿಯಾಗಿದೆ. ಇದರ ಜೊತೆಗೆ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದಲ್ಲಿ ಆಗಾಗ ಬದಲಾವಣೆ ಆಗುತ್ತಿದೆ ಕೂಡ ಮೊಬೈಲ್ ಕಂಪನಿಗಳಿಗೆ ಹೊರೆಯಾಗಿದೆ. ಈ ಖರ್ಚುಗಳನ್ನು ಸರಿದೂಗಿಸಲು ಕಂಪನಿಗಳು ಫೋನ್ ಬೆಲೆಯನ್ನು ಹೆಚ್ಚಿಸುತ್ತಿವೆ ಎಂದು ‘ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ’ (AIMRA) ಎಚ್ಚರಿಕೆ ನೀಡಿದೆ.
Also Read: Motorola Edge 50 Fusion ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಜಬರ್ದಸ್ತ್ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಲಭ್ಯ!
AIMRA ಸಂಘದ ಅಧ್ಯಕ್ಷರಾದ ಕೈಲಾಶ್ ಲಖ್ಯಾನಿ ಅವರ ಪ್ರಕಾರ 2026ನೇ ವರ್ಷಕ್ಕೆ ಮೊಬೈಲ್ ತಯಾರಕರು ಮತ್ತು ಮಾರಾಟಗಾರರಿಗೆ ಅತ್ಯಂತ ಕಠಿಣ ವರ್ಷವಾಗುವ ನಿರೀಕ್ಷೆಗಳಿವೆ. ಯಾಕೆಂದರೆ ಸ್ಮಾರ್ಟ್ಫೋನ್ ಮಾರುಕಟ್ಟೆಯ ಒಟ್ಟು ವ್ಯವಹಾರದ ಮೌಲ್ಯ ಜಾಸ್ತಿ ಕಾಣಿಸಬಹುದು ಆದರೆ ಜನರು ಖರೀದಿಸುವ ಫೋನ್‌ಗಳು ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಕಂಪನಿಗಳು ಗ್ರಾಹಕರಿಗೆ ನೀಡುವಂತಹ ಆಫರ್‌ಗಳನ್ನು ನೀಡುತ್ತವೆ ಈ ಮಾರುಕಟ್ಟೆಯ ಭವಿಷ್ಯ ನಿಂತಿದೆ.
ಭಾರತದಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ Xiaomi, Realme, Vivo ಮತ್ತು Oppo ತಮ್ಮ ಫೋನ್‌ಗಳ ಬೆಲೆಯನ್ನು ಹೆಚ್ಚಿಸಲು ಪ್ರಾರಂಭಿಸಿ. ಕೆಲವು ಕಂಪನಿಗಳು ನೇರವಾಗಿ ಫೋನ್‌ನ ಮೂಲ ಬೆಲೆಯನ್ನು (MRP) ಹೆಚ್ಚಿಸಿದರೆ ಇನ್ನು ಕೆಲವು ಕಂಪನಿಗಳು ಗ್ರಾಹಕರಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ಕಡಿಮೆಗೊಳಿಸುತ್ತವೆ ಮಾಡಿವ ಮೂಲಕ ಪರೋಕ್ಷವಾಗಿ ಹೊರೆ ಹಾಕುತ್ತಿವೆ. ಉದಾಹರಣೆಗೆ ಬ್ಯಾಂಕ್ ಸಿಗುತ್ತಿದ್ದ ಕ್ಯಾಶ್‌ಬ್ಯಾಕ್‌ಗಳಿಂದ ಹಣವನ್ನು ಕಡಿತಗೊಳಿಸಲಾಗುತ್ತಿದೆ. ಬಡ್ಡಿ ರಹಿತ ಅಂದರೆ ಶೂನ್ಯ ಬಡ್ಡಿಯೊಂದಿಗೆ EMI ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ. ಚಿಲ್ಲರೆ ಅಂಗಡಿಗಳಿಗೆ ಕಂಪನಿಗಳು ನೀಡುತ್ತಿದ್ದ ಸಹಾಯಧನವನ್ನು ಕಡಿಮೆ ಮಾಡಲಾಗಿದೆ.
ದೀಪಾವಳಿ ಹಬ್ಬ ಮುಗಿದ ನಂತರ ಮೊಬೈಲ್ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಡಿಸೆಂಬರ್ ತಿಂಗಳ ವ್ಯಾಪಾರವು ಕಳೆದ ತಿಂಗಳಿನಿಂದ ಬಹಳ ಕುಸಿದಿದೆ. ವ್ಯಾಪಾರ ಇಲ್ಲದ ಕಾರಣ ಸಣ್ಣ ಮತ್ತು ದೊಡ್ಡ ಅಂಗಡಿ ತಮ್ಮ ಸಿಬ್ಬಂದಿಯ ಸಂಬಳ ಮತ್ತು ಅಂಗಡಿಯನ್ನು ಬಾಡಿಗೆಗೆ ಸ್ವಂತ ಉಳಿತಾಯ ಹಣದಿಂದ ಭರಿಸಿದೆ. ಮುಂಬರಲಿರುವ ಈ 2026 ಜನವರಿಯಲ್ಲಿ ಬಿಡುಗಡೆಯಾದ Xiaomi Note ಸರಣಿಗಳು ಮತ್ತು Oppo Reno ಸರಣಿಯ ಫೋನ್‌ಗಳು ಮತ್ತೆ ಉತ್ತಮ ಗುಣಮಟ್ಟದ ಎಂಬ ಸಣ್ಣ ಆಶಾವಾದ ಮಾತ್ರ ಇವರಲ್ಲಿದೆ.