ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಫೋಟೋವನ್ನು ಬದಲಾಯಿಸುವುದು ಹೇಗೆ ತಿಳಿಯಿರಿ

Updated on 26-Sep-2022
HIGHLIGHTS

ಪ್ರಸ್ತುತ ದಿನಗಳಲ್ಲಿ ಬ್ಯಾಂಕ್‌ ವ್ಯವಹಾರಗಳಿಗೆ ಪ್ಯಾನ್‌ಕಾರ್ಡ್‌ ಅತ್ಯಗತ್ಯವಾಗಿದೆ.

ಶಾಶ್ವತ ಖಾತೆ ಸಂಖ್ಯೆ (PAN) ಆಗಿರುವ ಪಾನ್‌ ಕಾರ್ಡ್‌ 10 ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಕೋಡ್ ಹೊಂದಿರಲಿದೆ.

PAN ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ದಾಖಲೆಯಾಗಿದೆ.

ಪ್ರಸ್ತುತ ದಿನಗಳಲ್ಲಿ ಬ್ಯಾಂಕ್‌ ವ್ಯವಹಾರಗಳಿಗೆ ಪ್ಯಾನ್‌ಕಾರ್ಡ್‌ ಅತ್ಯಗತ್ಯವಾಗಿದೆ. ಶಾಶ್ವತ ಖಾತೆ ಸಂಖ್ಯೆ (PAN) ಆಗಿರುವ ಪಾನ್‌ ಕಾರ್ಡ್‌ 10 ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಕೋಡ್ ಹೊಂದಿರಲಿದೆ. ಪ್ಯಾನ್‌ಕಾರ್ಡ್‌ ನಿಮ್ಮ ಹಣಕಾಸಿನ ಫುಲ್‌ ಹಿಸ್ಟರಿಯನ್ನು ನೀಡಲಿದೆ. ಕೆಲವು ಸಂದರ್ಭದಲ್ಲಿ ನಿಮ್ಮ ಫೋಟೋ ಮತ್ತು ಸಹಿಯನ್ನು ಪರಿಶೀಲಿಸುವುದಕ್ಕೂ ಕೂಡ ಪ್ಯಾನ್‌ಕಾರ್ಡ್‌ ಬಳಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ಯಾನ್‌ಕಾರ್ಡ್‌ನಲ್ಲಿ ನಮೂದಿಸಿದ ಮಾಹಿತಿ ಸರಿಯಿರುವುದು ಅವಶ್ಯಕವಾಗಿದೆ.

ನೀವು ಪ್ಯಾನ್ ಕಾರ್ಡ್ ಹೊಂದಿರುವವರಾಗಿದ್ದೀರಾ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅದನ್ನು ಆನ್‌ಲೈನ್‌ನಲ್ಲಿ ಬದಲಾಯಿಸಬಹುದು. PAN ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ದಾಖಲೆಯಾಗಿದೆ. ಇದು ನಿಮ್ಮ ಗುರುತನ್ನು ಸಾಬೀತುಪಡಿಸಲು ಮಾತ್ರವಲ್ಲದೆ ಪ್ರತಿಯೊಂದು ಪ್ರಮುಖ ಹಣಕಾಸು ವಹಿವಾಟಿಗೆ ಮತ್ತು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಹ ಅಗತ್ಯವಾಗಿರುತ್ತದೆ ಎಂದು ತಿಳಿಯಬಹುದು.

ಯಾವುದೇ ಕಾಗುಣಿತದ ದೋಷ, ಸಹಿ ಅಥವಾ ಫೋಟೋ ಹೊಂದಾಣಿಕೆ ಸೇರಿದಂತೆ ಯಾವುದೇ ಇತರ ತಿದ್ದುಪಡಿ ಇದ್ದರೆ ನೀವು ಅದನ್ನು ಸರಿಪಡಿಸಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಫೋಟೋ ಸಾಕಷ್ಟು ಉತ್ತಮವಾಗಿಲ್ಲ ಅಥವಾ ಹಳೆಯದಾಗಿದೆ ಎಂದು ನೀವು ಭಾವಿಸಿದರೆ ನಿಮ್ಮ ಫೋಟೋವನ್ನು ನಿಮ್ಮ ಪ್ಯಾನ್‌ನಲ್ಲಿ ಬದಲಾಯಿಸಬಹುದು. ಬದಲಾವಣೆಗಳು ಮತ್ತು ತಿದ್ದುಪಡಿಗಳಿಗಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

ಹಂತ:1 ಮೊದಲನೆಯದಾಗಿ NSDL ನ ಅಧಿಕೃತ ವೆಬ್‌ಸೈಟ್‌ ತೆರೆಯಿರಿ.

ಹಂತ:2 ನಂತರ ವೆಬ್‌ಸೈಟ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಪ್ರಕಾರದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದೀಗ ಅಸ್ತಿತ್ವದಲ್ಲಿರುವ PAN ಡೇಟಾ ಆಯ್ಕೆಯಲ್ಲಿ ಬದಲಾವಣೆಗಳನ್ನು ಆಯ್ಕೆಮಾಡಿ.

ಹಂತ:3 ಇದಾದ ನಂತರ ಕ್ಯಾಟಗರಿ ಮೆನುವಿನಲ್ಲಿ ನಿಮ್ಮ ವೈಯಕ್ತಿಕ ಆಯ್ಕೆಯನ್ನು ಆರಿಸಿ

ಹಂತ:4 ಅಲ್ಲಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ:5 ನಂತರ ಪ್ಯಾನ್ ಅಪ್ಲಿಕೇಶನ್‌ನಲ್ಲಿ ಮುಂದುವರಿಯಿರಿ ಮತ್ತು KYC ಆಯ್ಕೆಯನ್ನು ಆಯ್ಕೆ ಮಾಡಿ.

ಹಂತ:6 ಇದೀಗ 'ಫೋಟೋ ಮಿಸ್‌ಮ್ಯಾಚ್‌' ಮತ್ತು 'ಸಿಗ್ನೇಚರ್ ಮಿಸ್‌ಮ್ಯಾಚ್' ಆಯ್ಕೆ ಕಾಣಿಸಿಕೊಳ್ಳುತ್ತದೆ.

ಹಂತ:7 ಇಲ್ಲಿ ನೀವು ಫೋಟೋವನ್ನು ಬದಲಾಯಿಸಲು ಫೋಟೋ ಮಿಸ್‌ಮ್ಯಾಚ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ:8 ಈಗ ಪೋಷಕರ ವಿವರಗಳನ್ನು ಭರ್ತಿ ಮಾಡಿದ ನಂತರ ಮುಂದಿನ ಬಟನ್ ಕ್ಲಿಕ್ ಮಾಡಿ.

ಹಂತ:9 ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅರ್ಜಿದಾರರು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಜನ್ಮ ಪುರಾವೆಯ ಮರಣದ ಪುರಾವೆಗಳನ್ನು ಲಗತ್ತಿಸಬೇಕು.

ಹಂತ:10 ನಂತರ ಡಿಕ್ಲರೇಶನ್ ಅನ್ನು ಟಿಕ್ ಮಾಡಿ ಮತ್ತು ಸಬ್ಮಿಟ್‌ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ:11 ಪ್ಯಾನ್‌ಕಾರ್ಡ್‌ನಲ್ಲಿ ಫೋಟೋ ಮತ್ತು ಸಹಿ ಬದಲಾವಣೆ ಮಾಡುವುದಕ್ಕೆ ಅರ್ಜಿ ಶುಲ್ಕ ಭಾರತದಲ್ಲಿ 101ರೂ. (ಜಿಎಸ್‌ಟಿ ಸೇರಿದಂತೆ) ಆಗಿದೆ.

ಹಂತ:12 ಸಂಪೂರ್ಣ ಪ್ರಕ್ರಿಯೆಯ ನಂತರ 15-ಅಂಕಿಯ ಸ್ವೀಕೃತಿಯನ್ನು ಸ್ವೀಕರಿಸಲಾಗುತ್ತದೆ.

ಹಂತ:13 ಇದಾದ ನಂತರ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ಅನ್ನು ಆದಾಯ ತೆರಿಗೆ ಪ್ಯಾನ್ ಸೇವಾ ಘಟಕಕ್ಕೆ ಕಳುಹಿಸಬೇಕಾಗುತ್ತದೆ.

ಹಂತ:14 ನೀವು ಸ್ವಿಕರಿಸುವ ಸ್ವೀಕೃತಿ ಸಂಖ್ಯೆ ಮೂಲಕ ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಹೀಗೆ ಮೇಲಿನ ನಿಯಮಗಳನ್ನು ಪಾಲಿಸುವ ಮೂಲಕ ಪ್ಯಾನ್‌ಕಾರ್ಡ್‌ನಲ್ಲಿ ನಿಮ್ಮ ಫೋಟೋ ಮತ್ತು ಸಹಿಯನ್ನು ಬದಲಾಯಿಸಬಹುದಾಗಿದೆ. ಪ್ಯಾನ್‌ಕಾರ್ಡ್‌ನಲ್ಲಿ ಕಾಲಕಾಲಕ್ಕೆ ನಿಮ್ಮ ಫೋಟೋ ಮತ್ತು ಸಹಿಯನ್ನು ಅಪ್ಡೇಟ್‌ ಮಾಡುವುದು ಒಳ್ಳೆಯ ಕೆಲಸವಾಗಿದೆ. ಸಾಮಾನ್ಯವಾಗಿ ಪ್ಯಾನ್‌ಕಾರ್ಡ್‌ನಲ್ಲಿ ನಮೂದಿಸಿರುವ ಫೋಟೋ ಕಾಲಕಳೆದಂತೆ ನಿಮಗೆ ಮಿಸ್‌ಮ್ಯಾಚ್‌ ಆಗುವ ಸಾದ್ಯತೆ ಕೂಡ ಇರಲಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :