ಸಾಮಾನ್ಯ ರಿಚಾರ್ಜ್ ಮೂಲಕವೇ ಉಚಿತ Amazon Prime ಉಚಿತ ಮೆಂಬರ್​ಶಿಪ್ ಪಡೆಯುವುದು ಹೇಗೆ ಗೊತ್ತಾ?

Updated on 22-Jul-2022
HIGHLIGHTS

ಅಮೆಜಾನ್ ಪ್ರೈಮ್ (Amazon Prime) ಚಂದಾದಾರಿಕೆಯನ್ನು ಹೊಂದಿಲ್ಲದಿದ್ದರೆ ನೀವು ಉಚಿತವಾಗಿ ಪ್ರೈಮ್ ಸದಸ್ಯತ್ವವನ್ನು ಪಡೆಯಬಹುದು

ಏರ್ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾದಲ್ಲಿ (Vi) ಪ್ರೈಮ್ (Prime) ಚಂದಾದಾರಿಕೆಯ ಯೋಜನೆ ಜಾರಿಗೆ ತರಲಾಗಿದೆ.

ನೀವು ಇನ್ನೂ ಅಮೆಜಾನ್ ಪ್ರೈಮ್ (Amazon Prime) ಚಂದಾದಾರಿಕೆಯನ್ನು ಹೊಂದಿಲ್ಲದಿದ್ದರೆ ನೀವು ಉಚಿತವಾಗಿ ಪ್ರೈಮ್ ಸದಸ್ಯತ್ವವನ್ನು ಪಡೆಯಬಹುದು. ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ನಲ್ಲಿ ಇದೇ ಜುಲೈ 23 ಮತ್ತು 24 ರಂದು ಬಹುನಿರೀಕ್ಷಿತ ಪ್ರೈಮ್ ಡೇ ಸೇಲ್ ನಡೆಯಲಿದೆ. ಇದರಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಗಳು, ಉಡುಗೆ-ತೊಡುಗೆಗಳು ಸೇರಿದಂತೆ ಬಹುತೇಕ ಎಲ್ಲ ಪ್ರಾಡಕ್ಟ್ ಮೇಲೆ ಬಂಪರ್ ಡಿಸ್ಕೌಂಟ್ ನೀಡಲಾಗುತ್ತದೆ. ಹೀಗಿರುವಾಗ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಲ್ಲಿ ಪ್ರೈಮ್ ಚಂದಾದಾರಿಕೆಯ ಯೋಜನೆ ಜಾರಿಗೆ ತರಲಾಗಿದೆ. ಈ ಪ್ಲಾನ್ ಬಗೆಗಿನ ಮಾಹಿತಿ ಇಲ್ಲಿದೆ.

ಏರ್ಟೆಲ್ ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಯೋಜನೆ

ಏರ್ಟೆಲ್ 999 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 100GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ಏರ್ಟೆಲ್ 1199 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 150GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ಏರ್ಟೆಲ್ 1599 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 250GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ, ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ವೋಡಾಫೋನ್ ಐಡಿಯಾ ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಯೋಜನೆ

ವೋಡಾಫೋನ್ ಐಡಿಯಾ 499 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 75GB ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ವೋಡಾಫೋನ್ ಐಡಿಯಾ 699 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ ಅನಿಯಮಿತ ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ವೋಡಾಫೋನ್ ಐಡಿಯಾ 1099 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ ಅನಿಯಮಿತ ಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ವೋಡಾಫೋನ್ ಐಡಿಯಾ 999 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 220GBಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ವೋಡಾಫೋನ್ ಐಡಿಯಾ 1299 ರೂ. ಪೋಸ್ಟ್​ ಪೇಯ್ಡ್ ಪ್ಲಾನ್: ಇದರಲ್ಲಿ 300GBಡೇಟಾ ನೀಡಲಾಗಿದೆ. ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 SMS ಉಚಿತ ಜೊತೆಗೆ ಆರು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.

ಉಚಿತವಾಗಿ AMAZON PRIME ಸದಸ್ಯತ್ವದ ಮೊದಲ ವಿಧಾನ:

ಕಂಪನಿಯು ಉಚಿತ ಪ್ರಯೋಗಗಳನ್ನು ನೀಡುವುದನ್ನು ನಿಲ್ಲಿಸಿದೆ. ಆದರೆ ಇನ್ನೂ ನೀವು ಭಾರತದಲ್ಲಿ Amazon Prime ವೀಡಿಯೊಗಾಗಿ 30 ದಿನಗಳ ಉಚಿತ ಪ್ರಯೋಗವನ್ನು ತೆಗೆದುಕೊಳ್ಳಬಹುದು. ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ನೀವು ಮೊದಲು Amazon Prime ಗೆ ಚಂದಾದಾರರಾಗಿಲ್ಲದಿದ್ದರೆ ಮಾತ್ರ ಈ ವಿಧಾನವು ಕಾರ್ಯನಿರ್ವಹಿಸುತ್ತದೆ. ಅಂದರೆ ನೀವು ಮೊದಲು ಅಮೆಜಾನ್ (Amazon) ಚಂದಾದಾರರಾಗಿರದಿದ್ದರೆ ನೀವು 30-ದಿನಗಳ ಉಚಿತ ಪ್ರಯೋಗವನ್ನು ಪ್ರಯತ್ನಿಸಬಹುದು ಮತ್ತು ಎರಡು ದಿನಗಳ ಮಾರಾಟದ ಸಮಯದಲ್ಲಿ ತೀವ್ರವಾಗಿ ಶಾಪಿಂಗ್ ಮಾಡಬಹುದು ಮತ್ತು ಅದು ಕೂಡ ಎಲ್ಲಾ ಪ್ರೈಮ್ ಪ್ರಯೋಜನಗಳೊಂದಿಗೆ ನೀಡುತ್ತವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :