How to check your name in voter list for Lok Sabha Elections 2024 - Digit Kannada
ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಲೋಕಸಭೆಯ ಚುನಾವಣೆಯ (Lok Sabha Elections 2024) ಕುರಿತು ನಿಮಗೆ ಹೊಸದಾಗಿ ಪರಿಚಯ ನೀಡಬೇಕಿಲ್ಲ ಯಾಕೆಂದರೆ ಈಗ 5ನೇ ಸುತ್ತಿನ ಚುನಾವಣೆ ದೇಶದಲ್ಲಿ ಶುರುವಾಗಲಿದೆ. ನೀವು ಉತ್ತರ ಭಾರತದಲ್ಲಿದ್ದು ಇನ್ನೂ ಯಾವುದೇ ಮತವನ್ನು ಚಲಾಯಿಸದಿದ್ದರೆ ಅಥವಾ ಈಗಾಗಲೇ ನೀವು ಮತ ಚಲಾಯಿಸಿದರೆ ನಿಮ್ಮ ಹೆಸರು ವೋಟರ್ ಪಟ್ಟಿಯಲ್ಲಿ ನೋಂದಣಿಯಾಗಿದ್ಯಾ ಇಲ್ವಾ ಎನ್ನುವುದನ್ನು ತಿಳಿಯಲು ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಹಾಗಾದ್ರೆ ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ ಎನ್ನುವುದನ್ನು ಹಂತ ಹಂತವಾಗಿ ತಿಳಿಯೋಣ.
ಲೋಕಸಭೆ ಚುನಾವಣೆ 2024 ರ ಐದನೇ ಹಂತದ ಮತದಾನವು ಮೇ 20 ರಂದು (ಸೋಮವಾರ) ನಡೆಯಲಿದೆ. ಐದನೇ ಹಂತದಲ್ಲಿ 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 49 ಸ್ಥಾನಗಳನ್ನು ಒಳಗೊಳ್ಳಲಿದೆ. ಅಲ್ಲದೆ 49 ಲೋಕಸಭಾ ಸ್ಥಾನಗಳ ಪೈಕಿ ಉತ್ತರ ಪ್ರದೇಶದಿಂದ 14, ಮಹಾರಾಷ್ಟ್ರದಿಂದ 13, ಪಶ್ಚಿಮ ಬಂಗಾಳದಿಂದ 7, ಬಿಹಾರದಿಂದ 5, ಜಾರ್ಖಂಡ್‌ನಿಂದ 3, ಒಡಿಶಾದಿಂದ 5 ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಿಂದ ತಲಾ ಒಂದು ನಡೆಯಲಿದೆ.
ಮೊದಲಿಗೆ ನೀವು ನೇರವಾಗಿ https://voters.eci.gov.in/ ಲಿಂಕ್ ಮೇಲೆ ಅಥವಾ ಈ ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡಿ.
ಇದರ ನಂತರ ಕೆಳಗೆ ಸ್ಕ್ರೋಲ್ ಮಾಡಿ Search in Electoral Roll ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನಿಮಗೆ ಇಲ್ಲಿ Seach by EPIC, Search by Details, Search by Mobile ಎಂಬ 3 ಮಾದರಿಯ ಆಯ್ಕೆಗಳು ಮೇಲ್ಭಾಗದಲ್ಲಿ ಕಾಣುತ್ತದೆ.
ಪ್ರಸ್ತುತ Seach by EPIC ಮೇಲೆ ಕ್ಲಿಕ್ ಮಾಡಿ ನಂತರ ಭಾಷೆಯನ್ನು ಆಯ್ಕೆ ಮಾಡಿ
ಇದರ ನಂತರ ನಿಮ್ಮ EPIC Number ನೀಡಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಕೆಳಗೆ Captcha Code ನೀಡಿ Seach ಮೇಲೆ ಕ್ಲಿಕ್ ಮಾಡಿ ಅಷ್ಟೇ.
ಈ ಕೆಳಗೆ ನಿಮ್ಮ ಹೆಸರು ನಿಮ್ಮ ವೋಟರ್ ಐಡಿ ನಂಬರ್ ಮತ್ತು ನಿಮ್ಮೆಲ್ಲ ಮಾಹಿತಿ ಕೆಳಗೆ ಕಂಡರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರ ಪಟ್ಟಿಯಾಗಿದೆ ಎಂದರ್ಥ.
Also Read: 8GB RAM ಮತ್ತು 64MP ಕ್ಯಾಮೆರಾವುಳ್ಳ Vivo Y200 Pro 5G ಬಿಡುಗಡೆ! ಬೆಲೆಯೊಂದಿಗೆ ಬೆಸ್ಟ್ ಫೀಚರ್‌ಗಳನ್ನು ತಿಳಿಯಿರಿ!