Change your old Aadhaar card photo
Aadhaar Card Photo: ದೇಶದಲ್ಲಿ ಭಾರತೀಯ ಪ್ರಾಧಿಕಾರ (UIDAI) ನೀಡುವ ಈ ಆಧಾರ್ ಕಾರ್ಡ್ ಭಾರತದಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಜನರು ಆಧಾರ್ ಕಾರ್ಡ್ (Aadhaar Card) ಮೊದಲ ಬಾರಿಗೆ ಪಡೆಯುವಾಗ ಅಧಿಕವಾಗಿ ಯಾರು ಅಷ್ಟಾಗಿ ಗಮನಿಸದೆ ಇದ್ದ ಹಾಗೆಯೆ ಫೋಟೋ ಕ್ಲಿಕ್ ಮಾಡಿಸಿಕೊಳ್ಳುವುದು ಇಂದಿಗೂ ರೂಢಿಯಲ್ಲಿದೆ.
ಇದಕ್ಕೆ ಕಾರಣ ಅಲ್ಲಿನ ವಾತಾವರಣ ಅಂದ್ರೆ ತಪ್ಪಿಲ್ಲ ಯಾಕೆಂದರೆ ಹತ್ತಾರು ಜನರ ಸಾಲುಗಳು ಮತ್ತು ಬೇಗ ಬೇಗ ಎನ್ನುವ ಏಜೆಂಟ್ಗಳ ಮಾತಿಗೆ ಸಿಲುಕಿ ಯದ್ವಾ ತದ್ವ ಆಧಾರ್ ಕಾರ್ಡ್ ಫೋಟೋ (Aadhaar Card Photo) ಕ್ಲಿಕ್ ಮಾಡಿಸಿ ಅಲ್ಲಿಂದ ಹೊರಗೆ ಹೋಗಲು ತುದಿಗಾಲಿನಲ್ಲಿ ನಿಂತದ್ದು ನಿಮಗೆ ಈಗ ನೆನಪಾಗುತ್ತಿರಬಹುದು.
ಏನೇ ಆಗಲಿ ಸಮಯ ಕಳೆದಂತೆ ಆ ನಿಮ್ಮ ಆಧಾರ್ ಕಾರ್ಡ್ ಫೋಟೋ (Aadhaar Card Photo) ತುಂಬ ಕರಬಾಗಿ ಕಾಣಲು ಶುರುವಾಗುತ್ತದೆ. ಇದಕ್ಕೆ ಪರಿಹಾರವಾಗಿ ಸರ್ಕಾರ ಮತ್ತೆ ನೀವು ನಿಮ್ಮ ಫೋಟೋವನ್ನು ಮೇಕ್ಅಪ್ ಜೊತೆಗೆ ಉತ್ತಮವಾಗಿ ತಮ್ಮನ್ನು ಅಲಂಕರಿಸಿಕೊಂಡು ಹೊಸ ಫೋಟೋವನ್ನು ಅಪ್ಡೇಟ್ ಮಾಡಿಕೊಳ್ಳುವ ಅವಕಾಶ ನೀಡುತ್ತಿದೆ.
ಇದಕ್ಕಾಗಿ ನೀವು ಆನ್ಲೈನ್ ಮೂಲಕ ಬಯೋಮೆಟ್ರಿಕ್ ಡೀಟೇಲ್ ಅಪ್ಡೇಟ್ ಆಯ್ಕೆಯೊಂದಿಗೆ ಅರ್ಜಿ ಸಲ್ಲಿಸಿ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಹೊಸ ಫೋಟೋ ಕ್ಲಿಕ್ ಮಾಡಿಸಿ ಅಪ್ಡೇಟ್ ಮಾಡಿಕೊಳ್ಳಬವುದು. ಹಾಗದರೆ ಆಧಾರ್ ಕಾರ್ಡ್ ಫೋಟೋ (Aadhaar Card Photo) ಬದಲಾಯಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ಈ ಕೆಳಗೆ ತಿಳಿಯಿರಿ.
ಹಂತ 1: ನಿಮ್ಮ ಆಧಾರ್ ಫೋಟೋ ಅಪ್ಡೇಟ್ ಮಾಡಲು https://uidai.gov.in/my-aadhaar/update-aadhaar.html ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಆಧಾರ್ ನೋಂದಣಿ ಫಾರ್ಮ್‌ನಲ್ಲಿ ಸಂಬಂಧಿತ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
ಹಂತ 3: ಫಾರ್ಮ್‌ನಲ್ಲಿ ಕೇಳಲಾದ ವಿವರಗಳನ್ನು ಪೂರ್ಣಗೊಳಿಸಿ ಮತ್ತು ಅದನ್ನು ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಸಲ್ಲಿಸಿ.
ಹಂತ 4: ಕೇಂದ್ರದಲ್ಲಿರುವ ಅಧಿಕಾರಿಯು ಹೊಸ ಫೋಟೋವನ್ನು ಕ್ಲಿಕ್ ಮಾಡುವ ಮೊದಲು ಮಾಹಿತಿಯನ್ನು ನೀಡುತ್ತಾರೆ.
ಹಂತ 5: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಅಪ್ಡೇಟ್ ಮಾಡಲು ನೀವು ರೂ 100 ಮತ್ತು GST ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹಂತ 6: ಪಾವತಿಯ ನಂತರ ನಿಮಗೆ (URN) ಅಪ್‌ಡೇಟ್ ವಿನಂತಿ ಸಂಖ್ಯೆಯೊಂದಿಗೆ ನೀವು ಸ್ವೀಕೃತಿ ಚೀಟಿಯನ್ನು ಪಡೆಯುತ್ತೀರಿ ಇದನ್ನು ಜೋಪಾನವಾಗಿಡಿ.
ಹಂತ 7: ಈ ನಿಮ್ಮ ಹೊಸ ಆಧಾರ್ ಫೋಟೋವನ್ನು ಸುಮಾರು 90 ದಿನಗಳೊಳಗೆ ಅಪ್ಡೇಟ್ ಮಾಡಲಾಗುತ್ತದೆ.