IPL Tickets Online 2025: ಈ ಬಾರಿಯ ಐಪಿಎಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ ತಿಳಿಯಿರಿ!

Updated on 20-Feb-2025
HIGHLIGHTS

IPL Tickets Online 2025 ಬುಕಿಂಗ್ BookMyShow, Paytm ಮತ್ತು IPLT20.com ಅಲ್ಲಿ ಲಭ್ಯ.

IPL ವೀಕ್ಷಣೆಗಾಗಿ ಪ್ರೇಕ್ಷಕರು ಜನರಲ್, ಪ್ರೀಮಿಯಂ ಮತ್ತು VIP ಸೀಟ್ಗಳನ್ನು ಆಯ್ಕೆ ಮಾಡಬಹುದು.

ಅಲ್ಲದೆ ನೇರವಾಗಿ ಸ್ಟೇಡಿಯಂ ಬಾಕ್ಸ್ ಆಫೀಸ್ ಮೂಲಕವು ನಿಗದಿತ ಐಡಿ ಪ್ರೂಫ್ ತೋರಿಸಿ ಖರೀದಿಸಬಹುದು.

IPL Tickets Online 2025: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಕ್ರಿಕೆಟ್ ಪಂದ್ಯಾವಳಿಗಳು 22ನೇ ಮಾರ್ಚ್ 2025 ರಿಂದ ಪ್ರಾರಂಭವಾಗಿ 25ನೇ ಮೇ 2025 ರಂದು ಕೊನೆಗೊಳ್ಳುತ್ತದೆ. ಇದರಲ್ಲಿ ಒಟ್ಟು 74 ಪಂದ್ಯಗಳು 13 ವಿವಿಧ ಸ್ಥಳಗಳಲ್ಲಿ ನಡೆಯಲಿವೆ.

IPL 2025 ಇದರ ಮೊದಲ ಪಂದ್ಯಗಳು ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆಯ ಪಂದ್ಯಗಳು ಸಂಜೆ 7:30 ಕ್ಕೆ ಪ್ರಾರಂಭವಾಗುತ್ತವೆ. ಈ IPL ವೀಕ್ಷಣೆಗಾಗಿ ಪ್ರೇಕ್ಷಕರು ಜನರಲ್, ಪ್ರೀಮಿಯಂ ಮತ್ತು VIP ಸೀಟ್ಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ನೇರವಾಗಿ ಸ್ಟೇಡಿಯಂ ಬಾಕ್ಸ್ ಆಫೀಸ್ ಮೂಲಕವು ನಿಗದಿತ ಐಡಿ ಪ್ರೂಫ್ ತೋರಿಸಿ ಖರೀದಿಸಬಹುದು.

IPL Tickets Online 2025 ಬಗ್ಗೆ ಹೆಚ್ಚುವರಿ ಮಾಹಿತಿಗಳು:

ಈ ಬಾರಿಯ ಐಪಿಎಲ್ ಟಿಕೆಟ್‌ಗಳನ್ನು ಪ್ರಸ್ತುತ ಇನ್ನೂ ಮಾರಾಟಕ್ಕೆ ಬಿಡುಗಡೆ ಮಾಡಲಾಗಿಲ್ಲ. ಆದರೆ ಟಿಕೆಟ್‌ಗಳು ಲಭ್ಯವಾದಾಗ ನೀವು ಅವುಗಳನ್ನು ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ ಸೇರಿ BookMyShow, Paytm ಮೂಲಕ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದು.

ಐಪಿಎಲ್ 2025 ರಲ್ಲಿ ಭಾಗವಹಿಸುವ ತಂಡಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಆದಾಗ್ಯೂ ಕಳೆದ ವರ್ಷದಂತೆ ಈ ವರ್ಷವೂ 10 ತಂಡಗಳು ಭಾಗವಹಿಸುವ ಸಾಧ್ಯತೆಯಿದೆ.

ನೀವು ಐಪಿಎಲ್ 2025 ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಬಯಸಿದರೆ ನೀವು ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಕ್ರಿಕೆಟ್ ಸುದ್ದಿ ವೆಬ್‌ಸೈಟ್‌ಗಳನ್ನು ಅನುಸರಿಸಬಹುದು.

IPL Tickets Online 2025 ಬುಕಿಂಗ್ BookMyShow, Paytm ಮತ್ತು IPLT20.com ಅಲ್ಲಿ ಲಭ್ಯವಿದ್ದು IPL ವೀಕ್ಷಣೆಗಾಗಿ ಪ್ರೇಕ್ಷಕರು ಜನರಲ್, ಪ್ರೀಮಿಯಂ ಮತ್ತು VIP ಸೀಟ್ಗಳನ್ನು ಆಯ್ಕೆ ಮಾಡಬಹುದು.

ಆನ್‌ಲೈನ್‌ನಲ್ಲಿ ಟಿಕೆಟ್ ಸಿಗದಿದ್ದರೆ ಅಥವಾ ನಿಮಗೆ ಅದರ ಮಾಹಿತಿ ಅರ್ಥವಾದದಿದ್ದರೆ ನೀವು ನೇರವಾಗಿ ಸ್ಟೇಡಿಯಂ ಬಾಕ್ಸ್ ಆಫೀಸ್ ಮೂಲಕವು ನಿಗದಿತ ಐಡಿ ಪ್ರೂಫ್ ತೋರಿಸಿ ಖರೀದಿಸಬಹುದು.

ಪ್ರೇಕ್ಷಕರು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, UPI, ನೆಟ್ ಬ್ಯಾಂಕಿಂಗ್ ಅಥವಾ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಪಾವತಿಗಳನ್ನು ಮಾಡಿ.

ಪಾವತಿ ಯಶಸ್ವಿಯಾದ ಕೂಡಲೇ ಅಭಿಮಾನಿಗಳು ಇ-ಟಿಕೆಟ್ ಅಥವಾ QR ಕೋಡ್ ಜೊತೆಗೆ ಇಮೇಲ್ ಅಥವಾ SMS ದೃಢೀಕರಣವನ್ನು ಪಡೆಯುತ್ತಾರೆ.

ಹೆಚ್ಚುವರಿಯಾಗಿ ಇ-ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಮುದ್ರಿಸಿಕೊಳ್ಳಬಹುದು. QR ಕೋಡ್ ಅನ್ನು ಇಮೇಲ್/SMS ಮೂಲಕವೂ ಕಳುಹಿಸಲಾಗುತ್ತದೆ.

Also Read: iPhone 16e Launched: ಕಡಿಮೆ ಬೆಲೆಗೆ ಆಪಲ್‌ನ ಹೊಸ ಫೋನ್ ಲಾಂಚ್! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

IPL 2025 ಆಫ್‌ಲೈನ್ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?

ಈಗಾಗಲೇ ಮೇಲೆ ತಿಳಿಸಿರುವಂತೆ ಆಫ್‌ಲೈನ್ ಟಿಕೆಟ್ ಬುಕಿಂಗ್ ಸಹ ಲಭ್ಯವಿದ್ದು ಆನ್‌ಲೈನ್‌ನಲ್ಲಿ ಟಿಕೆಟ್ ಸಿಗದಿದ್ದರೆ ಅಥವಾ ನಿಮಗೆ ಅದರ ಪ್ರಕ್ರಿಯೆ ಅರ್ಥವಾಗದಿದ್ದರೆ ನೀವು ನೇರವಾಗಿ ಸ್ಟೇಡಿಯಂ ಬಾಕ್ಸ್ ಆಫೀಸ್ ಮೂಲಕವು ಪಡೆಯಬಹುದು. ನೀವು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸದಿದ್ದರೆ ಆಫ್‌ಲೈನ್‌ನಲ್ಲೂ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಆದರೆ ಇದು ಕೊಂಚ ತಲೆನೋವಿಗೆ ಕಾರಣವಾಗಬಹುದು.

ಯಾಕೆಂದರೆ ಯಾವ ಪದ್ಯವನ್ನು ನೀವು ನೋಡ ಬಯಸುತ್ತೀರೋ ಆ ಕ್ರೀಡಾಂಗಣದ ಹೊರಗಡೆಯಲ್ಲಿರುವ ಬಾಕ್ಸ್ ಆಫೀಸ್‌ ಮತ್ತು ಅಧಿಕೃತ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಸಾಲುಗಳಲ್ಲಿ ನಿಂತು ಖರೀದಿಸಬೇಕಾಗುತ್ತದೆ. ಅದಕ್ಕೂ ಮೊದಲು ಅಲ್ಲಿ ಗ್ರಾಹಕರು ಮೊದಲು ಟಿಕೆಟ್ ಲಭ್ಯತೆಯನ್ನು ಪರಿಶೀಲಿಸಬೇಕು ಮತ್ತು ಮಾನ್ಯ ಐಡಿ ಪುರಾವೆಗಳನ್ನು ಒದಗಿಸಬೇಕು. ಅದರ ನಂತರ ಅಭಿಮಾನಿಗಳು ಪಾವತಿಸಿ ತಮ್ಮ ಟಿಕೆಟ್‌ಗಳನ್ನು ಪಡೆದು ಪಂದ್ಯವನ್ನು ಆನಂದಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :