50+ Happy New Year Wishes in Kannada: ನಿಮ್ಮ ಪ್ರೀತಿಪಾತ್ರರಿಗಾಗಿ ವಾಟ್ಸಾಪ್ ಮೆಸೇಜ್, ಶುಭಾಶಯಗಳು ಮತ್ತು ಹೊಸ ವರ್ಷದ ಸಂಕಲ್ಪಗಳು – 2026

Updated on 31-Dec-2025
HIGHLIGHTS

ಹೊಸ ವರ್ಷವು ಯಾವಾಗಲೂ ಹೊಸ ಅವಕಾಶಗಳು, ಸಂತೋಷ ಮತ್ತು ಭರವಸೆಯನ್ನು ತರುತ್ತದೆ.

ಈ ವಿಶೇಷ ಸಂದರ್ಭದಲ್ಲಿ, ನಾವೆಲ್ಲರೂ ನಮ್ಮ ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರನ್ನು ಅವರ ಹೃದಯಗಳನ್ನು ಸ್ಪರ್ಶಿಸುತ್ತದೆ.

ಈ ಅದ್ಭುತ ಶುಭಾಶಯಗಳೊಂದಿಗೆ 2026 ಅನ್ನು ಸ್ವಾಗತಿಸೋಣ ಮತ್ತು ನಮ್ಮ ಪ್ರೀತಿಪಾತ್ರರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರೋಣ.

Happy New Year Wishes in Kannada 2026: ಹೊಸ ವರ್ಷ ಎನ್ನುವುದು ಬರಿ ದಿನಾಂಕದ ಬದಲಾವಣೆಯಲ್ಲ ಅದು ನಮ್ಮ ಬದುಕಿನಲ್ಲಿ ಹೊಸ ಅವಕಾಶಗಳು, ಅಪಾರ ಸಂತೋಷ ಮತ್ತು ಭರವಸೆಯ ಕಿರಣಗಳನ್ನು ಹೊತ್ತು ತರುವ ಸುಸಂದರ್ಭ. ಈ ವಿಶೇಷ ಸಮಯದಲ್ಲಿ, ನಮ್ಮ ಸ್ನೇಹಿತರು, ಕುಟುಂಬದವರು ಮತ್ತು ಪ್ರೀತಿಪಾತ್ರರಿಗೆ ಅವರ ಮನಸ್ಸಿಗೆ ಹತ್ತಿರವಾಗುವಂತಹ ಮಾತುಗಳ ಮೂಲಕ ಶುಭ ಹಾರೈಸುವುದು ನಮಗೆಲ್ಲರಿಗೂ ಇಷ್ಟ. ಹೊಸ ವರ್ಷವೆಂದರೆ ಕೇವಲ ಮನೆಯ ಗೋಡೆಯ ಮೇಲಿರುವ ಕ್ಯಾಲೆಂಡರ್ ಬದಲಿಸುವುದು ಮಾತ್ರವಲ್ಲ. ಇದು ನಮ್ಮ ಜೀವನದಲ್ಲಿ ಹೊಸ ಸಫಲತೆ, ವಿಜಯ ಮತ್ತು ನೆಮ್ಮದಿಯನ್ನು ತರುವ ಹಬ್ಬದಂತಿದೆ. ಬನ್ನಿ ಸುಂದರವಾದ ಹಾರೈಕೆಗಳೊಂದಿಗೆ 2026 ಹೊಸ ವರ್ಷವನ್ನು ಸ್ವಾಗತಿಸೋಣ. ನಮ್ಮ ಪ್ರೀತಿಪಾತ್ರರ ಹೊಸ ವರ್ಷದ ಆರಂಭವು ಅತ್ಯಂತ ವಿಶೇಷವಾಗಿರುವಂತೆ ಮಾಡೋಣ.

Happy New Year Wishes in Kannada 2026

  • ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು! 2026 ಸುಖಮಯವಾಗಿರಲಿ.
  • ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರಲಿ. ಹ್ಯಾಪಿ ನ್ಯೂ ಇಯರ್ 2026!
  • ಹಳೆಯ ನೋವೆಲ್ಲ ಮರೆಯಾಗಲಿ, ಹೊಸ ವರ್ಷದಲ್ಲಿ ಸಂತೋಷ ಮನೆ ಮಾಡಲಿ. ಹೊಸ ವರ್ಷದ ಶುಭಾಶಯಗಳು.
  • 2026ರ ಪ್ರತಿಯೊಂದು ದಿನವೂ ನಿಮಗೆ ಯಶಸ್ಸು ತರಲಿ. ಶುಭವಾಗಲಿ!
  • ಹೊಸ ಕನಸು, ಹೊಸ ಗುರಿ, ಹೊಸ ಸಾಧನೆ ಈ ವರ್ಷ ನಿಮ್ಮದಾಗಲಿ. ಹ್ಯಾಪಿ ನ್ಯೂ ಇಯರ್!
  • ದೇವರು ನಿಮಗೆ ಆಯಸ್ಸು ಮತ್ತು ಆರೋಗ್ಯ ನೀಡಿ ಕಾಪಾಡಲಿ. ಹೊಸ ವರ್ಷದ ಶುಭಾಶಯಗಳು.
  • ಮಿನುಗುವ ನಕ್ಷತ್ರದಂತೆ ನಿಮ್ಮ ಭವಿಷ್ಯ ಹೊಳೆಯಲಿ. ಹೊಸ ವರ್ಷ 2026ರ ಶುಭಾಶಯಗಳು.
  • ಪ್ರೀತಿ ಮತ್ತು ಸ್ನೇಹದೊಂದಿಗೆ ಹೊಸ ವರ್ಷವನ್ನು ಆಚರಿಸೋಣ. ಹ್ಯಾಪಿ ನ್ಯೂ ಇಯರ್!
  • ಗೆಳೆಯಾ, ಈ ವರ್ಷ ನಿನ್ನ ಎಲ್ಲಾ ಆಸೆಗಳು ಈಡೇರಲಿ. ಹೊಸ ವರ್ಷದ ಹಾರ್ದಿಕ ಹಾರೈಕೆಗಳು.
  • ನಿಮ್ಮ ಮುಖದಲ್ಲಿ ನಗು ಸದಾ ಇರಲಿ, ಈ 2026 ಅದ್ಭುತವಾಗಿರಲಿ.
  • ಸುಖದ ಸುರಿಮಳೆಯಾಗಲಿ, ಶಾಂತಿ ನೆಲೆಸಲಿ. ಹೊಸ ವರ್ಷದ ಶುಭಾಶಯಗಳು.
  • ವಿಶ್ವಾಸದೊಂದಿಗೆ ಹೊಸ ಹೆಜ್ಜೆ ಇಡೋಣ, ಗೆಲುವು ನಮ್ಮದಾಗಲಿ. ಹ್ಯಾಪಿ ನ್ಯೂ ಇಯರ್!
  • ಕಹಿ ನೆನಪು ಮರೆತು, ಸಿಹಿ ಹಂಚುತ್ತಾ ಹೊಸ ವರ್ಷ ಆಚರಿಸೋಣ, ನಿಮ್ಮ ಪಾಲಿಗೆ ಅದೃಷ್ಟದ ವರ್ಷವಾಗಲಿ ಎಂದು ಹಾರೈಸುತ್ತೇನೆ.
  • ಹೊಸ ವರ್ಷದ ಪ್ರತಿಯೊಂದು ಕ್ಷಣವೂ ಸ್ಮರಣೀಯವಾಗಿರಲಿ. ಶುಭಾಶಯಗಳು!
  • ಸಾಧನೆಯ ಶಿಖರ ಏರಲು ಈ ವರ್ಷ ನಿಮಗೆ ಶಕ್ತಿ ನೀಡಲಿ. ಹ್ಯಾಪಿ ನ್ಯೂ ಇಯರ್.
  • ಮನೆಯಲ್ಲಿ ಸದಾ ಸಂಭ್ರಮವಿರಲಿ, ಮನದಲ್ಲಿ ಸದಾ ನೆಮ್ಮದಿ ಇರಲಿ. ಹೊಸ ವರ್ಷದ ಶುಭಾಶಯಗಳು.
  • ಸುಂದರ ಕ್ಷಣಗಳೊಂದಿಗೆ ಈ ವರ್ಷ ಆರಂಭವಾಗಲಿ. ಶುಭೋದಯ ಮತ್ತು ಹೊಸ ವರ್ಷದ ಹಾರೈಕೆಗಳು.
  • ಕಷ್ಟಗಳೆಲ್ಲ ಕರಗಿ ಹೋಗಲಿ, ಇಷ್ಟಗಳೆಲ್ಲ ಕೈಗೂಡಲಿ. ಹ್ಯಾಪಿ ನ್ಯೂ ಇಯರ್ 2026!
  • ಎಲ್ಲರಿಗೂ ಸುಖ ನೀಡುವ ವರ್ಷ ಇದಾಗಲಿ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

Also Read: Happy New Year Scam 2026: ಎಚ್ಚರ! ಹೊಸ ವರ್ಷದಲ್ಲಿ ಹಳೆ QR ಕೋಡ್ ಮತ್ತು WhatsApp ಮೆಸೇಜ್ ವಂಚನೆಗಳು ಹೆಚ್ಚುತ್ತಿವೆ!

WhatsApp ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

  • ಮೊದಲಿಗೆ ನಿಮ್ಮ ಫೋನಿನಲ್ಲಿ WhatsApp ಓಪನ್ ಮಾಡಿ.
  • ಯಾರಿಗೆ ಮೆಸೇಜ್ ಕಳುಹಿಸಬೇಕೋ ಅವರ ಚಾಟ್ ಬಾಕ್ಸ್ ಓಪನ್ ಮಾಡಿ.
  • ಟೈಪಿಂಗ್ ಜಾಗದಲ್ಲಿರುವ Emoji ಐಕಾನ್ ಒತ್ತಿ.
  • ಕೆಳಗಡೆ ಇರುವ Sticker ಐಕಾನ್ (ಕಾಗದದ ತುದಿ ಮಡಚಿದಂತೆ ಇರುತ್ತದೆ) ಮೇಲೆ ಕ್ಲಿಕ್ ಮಾಡಿ.
  • ಅಲ್ಲಿರುವ “+” (Plus) ಚಿಹ್ನೆಯನ್ನು ಒತ್ತಿ, ಆಗ ಹಲವು ಸ್ಟಿಕ್ಕರ್ ಪ್ಯಾಕ್‌ಗಳು ಕಾಣಿಸುತ್ತವೆ.
  • ಅಲ್ಲಿ “New Year” ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ Play Store ನಿಂದ “New Year 2026 Stickers” ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಸುಲಭವಾಗಿ ಕಳುಹಿಸಿ.

ನಿಮ್ಮ ಪ್ರೀತಿಪಾತ್ರರಿಗಾಗಿ ಹೊಸ 2026 ವರ್ಷದ ಇಮೇಜ್ ಸಲಹೆಗಳು:

20 ಸ್ಫೂರ್ತಿದಾಯಕ ಉಲ್ಲೇಖಗಳು:

  • “ಹೊಸ ವರ್ಷವು ಖಾಲಿ ಪುಸ್ತಕವಿದ್ದಂತೆ ಅದರಲ್ಲಿ ಉತ್ತಮವಾದ ಕಥೆಯನ್ನು ಬರೆಯಿರಿ.”
  • “ಬದಲಾವಣೆ ಜಗದ ನಿಯಮ, ಹೊಸ ವರ್ಷ ಹೊಸ ಬದಲಾವಣೆಗೆ ನಾಂದಿಯಾಗಲಿ, ಕಳೆದ ಹೋದದ್ದನ್ನು ನೆನೆಯಬೇಡಿ, ಬರುವ ಭವಿಷ್ಯವನ್ನು ಸಿದ್ಧಪಡಿಸಿಕೊಳ್ಳಿ.”
  • “ಸೋಲು ಅನುಭವವಾಗಿರಲಿ, ಗೆಲುವು ಗುರಿಯಾಗಿರಲಿ, ನಂಬಿಕೆ ಇರಲಿ, ಕಾಲ ಎಲ್ಲವನ್ನೂ ಸರಿಪಡಿಸುತ್ತದೆ.
  • “ಪ್ರತಿ ಸೂರ್ಯೋದಯವೂ ನಮಗೆ ಹೊಸ ಅವಕಾಶವನ್ನು ನೀಡುತ್ತದೆ, ಶ್ರಮ ಪಡದೆ ಯಶಸ್ಸು ಸಿಗದು, ಈ ವರ್ಷ ಕಠಿಣ ಪರಿಶ್ರಮಕ್ಕೆ ಮೀಸಲಿಡಿ.”
  • “ನಗು ಅತಿ ದೊಡ್ಡ ಆಸ್ತಿ, ಅದನ್ನು ಎಲ್ಲರಿಗೂ ಹಂಚಿ ಜೀವನ ಒಂದು ಪಯಣ, ಹೊಸ ವರ್ಷ ಅದರ ಹೊಸ ನಿಲ್ದಾಣ.”
  • “ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ಮೊದಲ ಮೆಟ್ಟಿಲು ಹಳೆಯ ತಪ್ಪುಗಳಿಂದ ಕಲಿಯೋಣ, ಹೊಸ ಹಾದಿಯಲ್ಲಿ ನಡೆಯೋಣ.”
  • “ಸಮಯ ಅಮೂಲ್ಯವಾದುದು, ಈ ವರ್ಷ ಅದನ್ನು ವ್ಯರ್ಥ ಮಾಡಬೇಡಿ, ಪ್ರೀತಿಯೇ ಎಲ್ಲವನ್ನೂ ಗೆಲ್ಲಬಲ್ಲದು ಗುರಿ ತಲುಪುವ ತನಕ ನಿಲ್ಲದಿರಿ.
  • “ಧೈರ್ಯವಾಗಿ ಮುನ್ನಡೆಯಿರಿ, ಜಗತ್ತು ನಿಮ್ಮ ಹಿಂದೆ ಬರುತ್ತದೆ, ಇಂದಿನ ಕೆಲಸ ಇಂದೇ ಮಾಡಿ, ನಾಳೆಗೆ ಕಾಯಬೇಡಿ.”
  • “ಸರಳ ಜೀವನ, ಉನ್ನತ ಚಿಂತನೆ ನಮ್ಮ ಮಂತ್ರವಾಗಲಿ, ನಿಮ್ಮನ್ನು ನೀವು ನಂಬಿ, ಹೊಸ ವರ್ಷ ಗೆಲುವು ತರುತ್ತದೆ.”
  • “ಸಹನೆ ಮತ್ತು ತಾಳ್ಮೆ ಸಾಧಕನ ಲಕ್ಷಣ 2026 ನಿಮ್ಮ ಜೀವನದ ಸುವರ್ಣ ವರ್ಷವಾಗಲಿ.”

15 ಹೊಸ ವರ್ಷದ ನಿರ್ಧಾರಗಳು (Resolution Ideas):

  • ಆರೋಗ್ಯಕ್ಕೆ ಆದ್ಯತೆ: ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಅಥವಾ ಯೋಗ ಮಾಡುವುದು.
  • ಓದುವ ಹವ್ಯಾಸ: ತಿಂಗಳಿಗೊಂದು ಹೊಸ ಪುಸ್ತಕ ಓದುವ ಗುರಿ ಇಟ್ಟುಕೊಳ್ಳುವುದು.
  • ಸಮಯ ನಿರ್ವಹಣೆ: ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿ, ಸಮಯವನ್ನು ಉಳಿಸುವುದು.
  • ಉಳಿತಾಯ: ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಭವಿಷ್ಯಕ್ಕಾಗಿ ಹಣ ಉಳಿಸುವುದು.
  • ಹೊಸ ಕೌಶಲ್ಯ: ಕಂಪ್ಯೂಟರ್ ಅಥವಾ ಯಾವುದಾದರೂ ಒಂದು ಹೊಸ ಭಾಷೆಯನ್ನು ಕಲಿಯುವುದು.
  • ಆಹಾರ ಪದ್ಧತಿ: ಜಂಕ್ ಫುಡ್ ಬಿಟ್ಟು ಮನೆಯಲ್ಲೇ ಮಾಡಿದ ಪೌಷ್ಟಿಕ ಆಹಾರ ಸೇವಿಸುವುದು.
  • ಪರಿಸರ ಪ್ರೇಮ: ಕನಿಷ್ಠ ಒಂದಾದರೂ ಗಿಡ ನೆಟ್ಟು ಅದನ್ನು ಪೋಷಿಸುವುದು.
  • ಸಹಾಯ: ತಿಂಗಳಿಗೊಮ್ಮೆ ಯಾರಿಗಾದರೂ ಅಶಕ್ತರಿಗೆ ಸಹಾಯ ಮಾಡುವುದು.
  • ಮುಂಜಾನೆ ಏಳುವುದು: ಸೂರ್ಯೋದಯಕ್ಕಿಂತ ಮುಂಚೆ ಎದ್ದು ದಿನದ ಕೆಲಸ ಆರಂಭಿಸುವುದು.
  • ಕೋಪ ನಿಯಂತ್ರಣ: ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ಬಿಡುವುದು.
  • ಕುಟುಂಬದೊಂದಿಗೆ ಸಮಯ: ಪ್ರತಿದಿನ ಕುಟುಂಬದವರೊಂದಿಗೆ ಕನಿಷ್ಠ ಒಂದು ಗಂಟೆ ಕಳೆಯುವುದು.
  • ಕೃತಜ್ಞತೆ: ಪ್ರತಿದಿನ ನಮಗೆ ಸಿಕ್ಕ ಒಳ್ಳೆಯದಕ್ಕಾಗಿ ದೇವರಿಗೆ ಧನ್ಯವಾದ ಸಲ್ಲಿಸುವುದು.
  • ನೀರಿನ ಬಳಕೆ: ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವುದು.
  • ಪ್ರವಾಸ: ವರ್ಷದಲ್ಲಿ ಒಮ್ಮೆಯಾದರೂ ಹೊಸ ಸ್ಥಳಕ್ಕೆ ಭೇಟಿ ನೀಡುವುದು.
  • ಮಾನಸಿಕ ನೆಮ್ಮದಿ: ಧ್ಯಾನ ಮಾಡುವ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು.
Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :