Navratri Wishes In Kannada
Happy Navratri 2025: ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಹಬ್ಬಗಳ ಪೈಕಿ ಒಂದಾಗಿರುವ ಈ ನವರಾತ್ರಿ (Navratri) ಹಬ್ಬ ಇಂದಿನಿಂದ ಅಂದ್ರೆ 30ನೇ ಮಾರ್ಚ್ 2025 ರಿಂದ ನಡೆಯಲಿದೆ. ಈ ನವರಾತ್ರಿ (Navratri 2025) ಹಬ್ಬ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬವಾಗಿದ್ದು ಇದನ್ನು ಭಾರತದಲ್ಲಿ ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ದಸರ ಅಥವಾ ವಿಜಯ ದಶಮಿಎಂದು (Happy Navratri 2025) ಕರೆಯಲಾಗುತ್ತದೆ.
ಯಾಕೆಂದರೆ ಇದೇ ದಿನದಿಂದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ನಮ್ಮ ಮೈಸೂರಿನಲ್ಲಿ ನಡೆಯುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಪ್ರತಿದಿನ ಒಬ್ಬೊಬ್ಬ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ದೇವಿಯ ಪ್ರತಿಯೊಂದು ರೂಪವು ವಿಭಿನ್ನ ಶಕ್ತಿಗಳು ಮತ್ತು ಆಶೀರ್ವಾದಗಳೊಂದಿಗೆ ಸಂಬಂಧ ಹೊಂದಿದೆ.
ಇದು ದುರ್ಗಾ ದೇವಿಯ ಶಕ್ತಿ ಮತ್ತು ಮಹಿಮೆಯನ್ನು ಆಚರಿಸುವ ಸಮಯವಾಗಿದ್ದು ಮುಂಬರಲಿರುವ ಒಟ್ಟು ಒಂಬತ್ತು ದಿನ ಮತ್ತು ರಾತ್ರಿಯಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ನವರಾತ್ರಿ (Navratri 2025) ಹಬ್ಬದಲ್ಲಿ ಜನರು ತುಂಬ ಭಕ್ತಿ ಭಾವ, ಸಂತೋಷ ಮತ್ತು ಪ್ರೀತಿಪಾತ್ರರೊಂದಿಗಿನ ಬಾಂಧವ್ಯದ ಸಮಯವನ್ನು ಕಳೆಯುತ್ತಾರೆ. ನೀವು ಉತ್ಸಾಹಭರಿತ ಗಾರ್ಬಾ ರಾತ್ರಿಗಳಲ್ಲಿ ಭಾಗವಹಿಸುತ್ತಿರಲಿ ಅಥವಾ ಸಾಂಪ್ರದಾಯಿಕ ಪ್ರಾರ್ಥನೆಗಳಿಗೆ ಹಾಜರಾಗುತ್ತಿರಲಿ, ಹೃತ್ಪೂರ್ವಕ ಸಂದೇಶಗಳು ಮತ್ತು ಶುಭಾಶಯಗಳನ್ನು ಹಂಚಿಕೊಳ್ಳುವುದು ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ.
ಇಂದಿನ ಡಿಜಿಟಲ್ ಯುಗದಲ್ಲಿ Facebook, Insta ಮತ್ತು WhatsApp ಸೋಶಿಯಲ್ ಮೀಡಿಯಾಗಳಲ್ಲಿ ದೂರದಲ್ಲಿರುವವರಿಗೆ ಹಬ್ಬದ ಶುಭಾಶಯಗಳನ್ನು (Happy Navratri 2025) ಕಳುಹಿಸಲು ಜನಪ್ರಿಯ ವೇದಿಕೆಯಾಗಿದೆ. ಈ ನವರಾತ್ರಿ ಹಬ್ಬದ ಮೆರಗು ಹರಡಲು ನಿಮಗೆ ಸಹಾಯ ಮಾಡುವ ಅತ್ಯುತ್ತಮ WhatsApp ಸಂದೇಶಗಳು, ಶುಭಾಶಯಗಳು, ಸ್ಟೇಟಸ್ ಅಪ್ಡೇಟ್, ಡಿಸ್ಪ್ಲೇ ಇಮ್ಯಾಜೆಸ್, ಪ್ರೊಫೈಲ್ ಇಮೇಜ್ ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ನವರಾತ್ರಿಯ ಮುಗಿಯುವವರೆಗೆ ಅಪ್ಪಿತಪ್ಪಿಯೂ ಸಹ ಮಾಂಸ, ಮೀನು ಅಥವಾ ಮದ್ಯ ಸೇವಿಸಬೇಡಿ. ಕೂದಲು, ಗಡ್ಡ ಮತ್ತು ಉಗುರುಗಳನ್ನು ಕತ್ತರಿಸುವುದು ಅಥವಾ ಟ್ರಿಮ್ ಮಾಡುವುದನ್ನು ತಪ್ಪಿಸಿ. ಮನೆಯಲ್ಲಿ ಸಂಘರ್ಷದ ಪರಿಸ್ಥಿತಿಯನ್ನು ಸೃಷ್ಟಿಸಬೇಡಿ ಮತ್ತು ವಾದಗಳಿಂದ ದೂರವಿರಿ.ಕೊನೆಯದಾಗಿ ನಿಮ್ಮ ಮತ್ತು ಮನೆಯ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಮನೆಯನ್ನು ಕೊಳಕಾಗಿ ಇಡಬೇಡಿ.