Google I/O 2026: ಗೂಗಲ್‌ನ ಈ ಕಾರ್ಯಕ್ರಮದ ನಿರೀಕ್ಷೆಗಳೇನು? ಲೈವ್‌ ವೀಕ್ಷಣೆ ಹೇಗೆ?

HIGHLIGHTS

ಇಂದು ಗೂಗಲ್‌ I/O 2026 ಕಾರ್ಯಕ್ರಮ ಪ್ರಾರಂಭವಾಗಲಿದೆ

ಈ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಹೈಲೈಟ್‌ ಎನ್ನಲಾಗಿದೆ

ಈ ಕಾರ್ಯಕ್ರಮ ಭಾರತೀಯ ಕಾಲಮಾನ ರಾತ್ರಿ 10:30 ಗಂಟೆಗೆ ಪ್ರಾರಂಭ

Google I/O 2026: ಗೂಗಲ್‌ನ ಈ ಕಾರ್ಯಕ್ರಮದ ನಿರೀಕ್ಷೆಗಳೇನು? ಲೈವ್‌ ವೀಕ್ಷಣೆ ಹೇಗೆ?

Google I/O 2026: ಗೂಗಲ್ ಸರ್ಚ್‌ ಇಂಜಿನ್‌ ದೈತ್ಯ ಸಂಸ್ಥೆಯ ಬಹುನಿರೀಕ್ಷಿತ Google I/O 2026 ಡೆವಲಪರ್‌ ಕಾರ್ಯಕ್ರಮ ಇಂದು (ಮೇ 19) ಆರಂಭವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಗೂಗಲ್ ತನ್ನ ವಿವಿಧ ಸೇವೆಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಗೆ ಬರಲಿರುವ ಹೊಸ ಸಾಫ್ಟ್‌ವೇರ್‌ ಫೀಚರ್ಸ್‌, AI ಆಧಾರಿತ ಅಪ್‌ಡೇಟ್‌ಗಳು ಹಾಗೂ ಆಂಡ್ರಾಯ್ಡ್‌ಗೆ ಸಂಬಂಧಿಸಿದ ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಈಗಾಗಲೇ ನಡೆದ Android Show ಕಾರ್ಯಕ್ರಮದ ಮೂಲಕ ಕೆಲವು ಹೊಸ ಆಯ್ಕೆಗಳ ಸುಳಿವು ನೀಡಿದ್ದ ಗೂಗಲ್‌ ಈ ಬಾರಿ ಕೃತಕ ಬುದ್ಧಿಮತ್ತೆ (AI) ಮತ್ತು ಡೆವಲಪರ್‌ ಟೂಲ್ಸ್‌ ಕ್ಷೇತ್ರದಲ್ಲಿ ತನ್ನ ಮುಂದಿನ ಯೋಜನೆಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ವೇಗದ ಪ್ರೊಸೆಸರ್‌ ಇರುವ Motorola Edge 60 Fusion 5G ಬೆಲೆಯಲ್ಲಿ ಸಖತ್ ಇಳಿಕೆ!

Google I/O 2026: ಲೈವ್‌ಸ್ಟ್ರೀಮ್ ವೀಕ್ಷಿಸುವುದು ಹೇಗೆ?

ಗೂಗಲ್‌ ಸಂಸ್ಥೆಯ ಈ ಬಹುನಿರೀಕ್ಷಿತ ಕಾರ್ಯಕ್ರಮ ಭಾರತೀಯ ಕಾಲಮಾನ ರಾತ್ರಿ 10:30 ಗಂಟೆಗೆ ಪ್ರಾರಂಭವಾಗುತ್ತದೆ. ಗೂಗಲ್‌ CEO ಸುಂದರ್ ಪಿಚೈ ಅವರು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿರುವ ಶೋರ್‌ಲೈನ್ ಆಂಫಿಥಿಯೇಟರ್‌ನಿಂದ ತಮ್ಮ ಮುಖ್ಯ ಭಾಷಣ ಮಾಡುವ ನಿರೀಕ್ಷೆ ಇದೆ. ಈ ಕಾರ್ಯಕ್ರಮವನ್ನು Google for Developers ಯೂಟ್ಯೂಬ್ ಚಾನೆಲ್ ಮೂಲಕವೂ ನೇರ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ ಬಳಕೆದಾರರು ಮೊಬೈಲ್ ಮೂಲಕ YouTube ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು.

Google I/O 2026

ಗೂಗಲ್ I/O 2026: ನಿರೀಕ್ಷೆಗಳು ಏನು?

ಗೂಗಲ್ I/O 2026 ಕಾರ್ಯಕ್ರಮದಲ್ಲಿ ಈ ಬಾರಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಹೈಲೈಟ್‌ ಎನ್ನಲಾಗುತ್ತಿದೆ. ಗೂಗಲ್ ತನ್ನ ಮಲ್ಟಿಮೋಡಲ್ AI ಮಾದರಿಗಳು, ಮೀಡಿಯಾ ಜನರೇಷನ್‌, ರೊಬೊಟಿಕ್ಸ್‌ ಹಾಗೂ ಸ್ಮಾರ್ಟ್‌ AI ಏಜೆಂಟ್‌ಗಳಿಗೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಡೆವಲಪರ್‌ಗಳು ಸುಲಭವಾಗಿ AI ಆಧಾರಿತ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಅನುಕೂಲವಾಗುವ ಹೊಸ ತಂತ್ರಜ್ಞಾನ ಸುಧಾರಣೆಗಳನ್ನೂ ಕಂಪನಿ ಅನಾವರಣಗೊಳಿಸಬಹುದು.

ಹಾಗೆಯೇ ಈ ಕಾರ್ಯಕ್ರಮದಲ್ಲಿ ಆಂಡ್ರಾಯ್ಡ್ 17 ಸಹ ಪ್ರಮುಖ ಆಕರ್ಷಣೆ ಆಗಬಹುದು ಎನ್ನಲಾಗಿದೆ. ಪ್ರಸ್ತುತ ಬೀಟಾ ಹಂತದಲ್ಲಿರುವ ಈ ಹೊಸ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯಕ್ಷಮತೆ, ಮೀಡಿಯಾ ಫೀಚರ್ಸ್‌ ಹಾಗೂ ದೊಡ್ಡ ಪರದೆ ಮತ್ತು ಡೆಸ್ಕ್‌ಟಾಪ್‌ ಅನುಭವಕ್ಕೆ ಸಂಬಂಧಿಸಿದ ಹಲವು ಅಪ್‌ಡೇಟ್‌ಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಅದರ ಜೊತೆಗೆ ಗೂಗಲ್ ತನ್ನ Chrome ಬ್ರೌಸರ್‌ಗೆ AI ಆಧಾರಿತ ಹೊಸ ಫೀಚರ್ಸ್‌, ವೇಗದ ಕಾರ್ಯಕ್ಷಮತೆ ಹಾಗೂ ಉತ್ತಮ ವೆಬ್‌ ಅನುಭವ ನೀಡುವ ಹೊಸ ಅಪ್‌ಡೇಟ್‌ಗಳ ಕುರಿತು ಕೂಡ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile