Google Lens New Option
Google Lens Option: ಗೂಗಲ್‌ನಿಂದ ಹೊಸ ಸರ್ಚ್ ಫೀಚರ್ ಪರಿಚಯವಾಗಿದ್ದು ಈ ಗೂಗಲ್ ಲೆನ್ಸ್ (Google Lens) ಎಂಬುದು ಸ್ಮಾರ್ಟ್‌ಫೋನ್ ವೈಶಿಷ್ಟ್ಯವಾಗಿದ್ದು ಇದರ ಮೂಲಕ ಪ್ರಸ್ತುತ ಯಾವುದೇ ಚಿತ್ರಗಳನ್ನು ಸ್ಕ್ಯಾನ್ ಮಾಡುವ ಮೂಲಕ ಆ ವಸ್ತುಗಳನ್ನು ಸರ್ಚ್ ಮಾಡಲು ನಿಮಗೆ ಅನುಮತಿಸುತ್ತದೆ. ಅಲ್ಲದೆ ನೀವು ಆನ್‌ಲೈನ್‌ನಲ್ಲಿ ಕಂಡುಬರುವ ನಿಮ್ಮ ಸುತ್ತಲಿನ ಪ್ರಪಂಚದ ವಸ್ತುಗಳ ಫೋಟೋಗಳನ್ನು ತೆಗೆದುಕೊಂಡು ಅವುಗಳ ಬಗ್ಗೆ ಮಾಹಿತಿ ಮತ್ತು ಅದರಂತೆ ಕಾಣುವಂತಹವನ್ನು ಹುಡುಕಬಹುದು.
ಈ ಗೂಗಲ್ ಲೆನ್ಸ್ (Google Lens) ಫೀಚರ್ ಆಂಡ್ರಾಯ್ಡ್‌ಗಳಲ್ಲಿ ಅಂತರ್ನಿರ್ಮಿತವಾಗಿ ಬಂದರೂ ಈ ಹೊಸ ಸರ್ಚ್ ಸ್ಕ್ರೀನ್ ಫೀಚರ್ ಬಳಸಲಾಗದು ಆದರೆ ಪ್ರಸ್ತುತ ಐಫೋನ್ ಕ್ರೋಮ್ ಮತ್ತು ಗೂಗಲ್ ಅಪ್ಲಿಕೇಶನ್‌ಗಳಲ್ಲಿ ಈ ಫೀಚರ್ ಲಭ್ಯವಿದೆ. ಪ್ರಸ್ತುತ ಈ ಗೂಗಲ್ ಅಪ್ಲಿಕೇಶನ್ ಮತ್ತು iOS ನಲ್ಲಿ ಕ್ರೋಮ್‌ನಲ್ಲಿ ಗೂಗಲ್ ಲೆನ್ಸ್ ಆಯ್ಕೆಯೊಂದಿಗೆ ಹೊಸ ಸರ್ಚ್ ಸ್ಕ್ರೀನ್ ಗೂಗಲ್ ಘೋಷಿಸಿದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ.
ಆದ್ರೆ ಆಂಡ್ರಾಯ್ಡ್ ಬಳಕೆದಾರರ ಬಗ್ಗೆ ಈಗಾಗಲೇ ಮೇಲೆ ತಿಳಿಸಿದಂತೆ ಈ ಗೂಗಲ್ ಲೆನ್ಸ್ (Google Lens) ಫೀಚರ್ ಇರುವ ಬಗ್ಗೆ ತುಂಬ ಜನರಿಗೆ ಮಾಹಿತಿಗಳೆ ಇಲ್ಲ. ಕೆಲವರಂತು ಈ ಫೀಚರ್ ಅನ್ನು ಫೋನಲ್ಲಿ ನೋಡಿ ಏನು ಮಾಡಬೇಕು ಎಂದು ಅರಿಯದೆ ಅದನ್ನು ಕಡೆಗಣಿಸಿರಬಹುದು. ಮತ್ತೆ ಕೆಲವರಿಗಂತೂ ಇದರ ಅಗತ್ಯವಿದ್ದರೂ ಇದರಲ್ಲಿ ಏನೇನು ಮಾಡಬಹುದು ಎನ್ನುವುದು ತಿಳಿದಿರುವುದಿಲ್ಲ ಹಾಗಾದ್ರೆ ಈ ಫೀಚರ್ ಬಳಸುವುದು ಹೇಗೆ? ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಗೂಗಲ್ ಕ್ರೋಮ್‌ನಲ್ಲಿ ಪ್ರಾರಂಭಿಸಲು ಮೂರು-ಡಾಟ್ ಮೆನು ತೆರೆಯಿರಿ ಮತ್ತು ‘Google Lens ನೊಂದಿಗೆ ಸರ್ಚ್ ಸ್ಕ್ರೀನ್ ಎಂದು ಲೇಬಲ್ ಮಾಡಲಾದ ಆಯ್ಕೆಯನ್ನು ಆರಿಸಿ. ಮುಂಬರುವ ತಿಂಗಳುಗಳಲ್ಲಿ, ಅದೇ ವೈಶಿಷ್ಟ್ಯವನ್ನು ಪ್ರವೇಶಿಸಲು ನೀವು ವಿಳಾಸ ಪಟ್ಟಿಯಲ್ಲಿ ಹೊಸ ಲೆನ್ಸ್ ಐಕಾನ್ ಅನ್ನು ಸಹ ನೋಡುತ್ತೀರಿ. ಇದು iOS ಗಾಗಿ Google ಅಪ್ಲಿಕೇಶನ್‌ನಲ್ಲಿ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೂರು ಡಾಟ್ ಮೆನುವನ್ನು ಟ್ಯಾಪ್ ಮಾಡಿ ಈ Search Screen ಆಯ್ಕೆಮಾಡಿ ಮತ್ತು ನಂತರ ನೀವು ಸರ್ಚ್ ಮಾಡಲು ಬಯಸುವದನ್ನು ಆಯ್ಕೆಮಾಡಿ. ಈ ಅಪ್ಡೇಟ್ ಈ ವಾರ ಬಿಡುಗಡೆಯಾಗುತ್ತಿದೆ ಮತ್ತು ಜಾಗತಿಕವಾಗಿ Chrome ಮತ್ತು iOS ಗಾಗಿ Google ಅಪ್ಲಿಕೇಶನ್ ಎರಡರಲ್ಲೂ ಲಭ್ಯವಿರುತ್ತದೆ.