Gold Price Today: ಮದುವೆಯ ಸೀಸನ್ ಪ್ರಾರಂಭವಾಗುವ ಮೊದಲು ನೀವು ಚಿನ್ನ ಅಥವಾ ಚಿನ್ನಾಭರಣಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಈ ವಾರದ ವಹಿವಾಟಿನ ಮೂರನೇ ದಿನ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು ನಂತರ ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ವಾರ ಭಾರೀ ಹೆಚ್ಚಳವಾಗಿದ್ದ ಚಿನ್ನದ ಬೆಲೆ ಇದೀಗ ಒಂದೇ ರೀತಿಯಲ್ಲಿದೆ. ಆದರೆ ಬೆಳ್ಳಿಯ ಬೆಲೆ (Silver Price) ಇಂದು 100 ರೂ. ಇಳಿಕೆ ಕಂಡಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ.
ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ. ಭಾರತದಲ್ಲಿ 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇದ್ದುದು 47,800 ರೂ. ಆಗಿದೆ. ಹಾಗೇ 24 ಕ್ಯಾರೆಟ್ ಚಿನ್ನದ ಬೆಲೆ 52,460 ರೂ. ಇದ್ದುದು 52,140 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. 2 ದಿನಗಳ ಹಿಂದೆ ಚೆನ್ನೈ- 48,420 ರೂ. ಮುಂಬೈ- 47,800 ರೂ, ದೆಹಲಿ- 47,800 ರೂ, ಕೊಲ್ಕತ್ತಾ- 47,800 ರೂ, ಬೆಂಗಳೂರು- 47,800 ರೂ, ಹೈದರಾಬಾದ್- 47,800 ರೂ, ಕೇರಳ- 47,800 ರೂ, ಪುಣೆ- 47,850 ರೂ, ಮಂಗಳೂರು- 47,800 ರೂ, ಮೈಸೂರು- 47,800 ರೂ. ಇದೆ.
ಚೆನ್ನೈ- 52,820 ರೂ, ಮುಂಬೈ- 52,140 ರೂ, ದೆಹಲಿ- 52,140 ರೂ, ಕೊಲ್ಕತ್ತಾ- 52,140 ರೂ, ಬೆಂಗಳೂರು- 52,140 ರೂ, ಹೈದರಾಬಾದ್- 52,140 ರೂ, ಕೇರಳ- 52,140 ರೂ, ಪುಣೆ- 52,190 ರೂ, ಮಂಗಳೂರು- 52,140 ರೂ, ಮೈಸೂರು- 52,140 ರೂ. ಆಗಿದೆ. ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. ಬೆಳ್ಳಿ ಬೆಲೆ (Silver Price) ಮಾತ್ರ ಕುಸಿತವಾಗುತ್ತಲೇ ಇದೆ.
ಇದೀಗ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ಬಯಸಿದರೆ ಇದಕ್ಕಾಗಿ ಸರ್ಕಾರದಿಂದ ಆ್ಯಪ್ ತಯಾರಿಸಲಾಗಿದೆ. ಬಿಐಎಸ್ ಕೇರ್ ಅಪ್ಲಿಕೇಶನ್‌ನೊಂದಿಗೆ ಗ್ರಾಹಕರು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ಈ ಆ್ಯಪ್ ಮೂಲಕ ನೀವು ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವುದು ಮಾತ್ರವಲ್ಲ ಅದಕ್ಕೆ ಸಂಬಂಧಿಸಿದ ಯಾವುದೇ ದೂರುಗಳನ್ನೂ ನೀಡಬಹುದು.
ಚಿನ್ನವನ್ನು ಖರೀದಿಸುವಾಗ ಅದರ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಿ. ಹಾಲ್ ಮಾರ್ಕ್ ನೋಡಿಯೇ ಚಿನ್ನಾಭರಣ ಖರೀದಿಸಬೇಕು. ಹಾಲ್‌ಮಾರ್ಕ್ ಚಿನ್ನದ ಸರ್ಕಾರದ ಖಾತರಿಯಾಗಿದೆ ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್‌ಮಾರ್ಕ್ ಅನ್ನು ನಿರ್ಧರಿಸುವ ಭಾರತದ ಏಕೈಕ ಏಜೆನ್ಸಿಯಾಗಿದೆ. ಹಾಲ್‌ಮಾರ್ಕಿಂಗ್ ಯೋಜನೆಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆಕ್ಟ್ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.