Digit.in
  • ಸುದ್ದಿಗಳು
  • ಫೀಚರ್‌ಗಳು
  • ಹೇಗೆ?
  • ವೆಬ್ ಸ್ಟೋರಿ
  • English
  • Hindi
  • Tamil
  • Kannada
  • Telugu
  • Malayalam
  • Bangla
  • Marathi
Login / Register is disabled Login
Home » News » General » Facebook, Instagram ಸೇವೆಯಲ್ಲಿ ಜಾಗತಿಕ ವ್ಯತ್ಯಯ! ವಿಶ್ವದಾದ್ಯಂತ ಬಳಕೆದಾರರಿಂದ ದೂರು

Facebook, Instagram ಸೇವೆಯಲ್ಲಿ ಜಾಗತಿಕ ವ್ಯತ್ಯಯ! ವಿಶ್ವದಾದ್ಯಂತ ಬಳಕೆದಾರರಿಂದ ದೂರು

By Manthesh B | Updated on 12-Jun-2026
Add DIGIT as a preferred source
Follow Us on Google News Follow Us
Facebook, Instagram ಸೇವೆಯಲ್ಲಿ ಜಾಗತಿಕ ವ್ಯತ್ಯಯ! ವಿಶ್ವದಾದ್ಯಂತ ಬಳಕೆದಾರರಿಂದ ದೂರು
Manthesh B Manthesh B
12-Jun-2026

ಟೆಕ್ ದಿಗ್ಗಜ Meta ಮಾಲೀಕತ್ವದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ Facebook, Instagram ಮತ್ತು Messenger ಸೇವೆಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವ ಬಗ್ಗೆ ವಿಶ್ವದಾದ್ಯಂತ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವು ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಮತ್ತೆ ಕೆಲವರಿಗೆ Facebook ಮತ್ತು Instagram ನಲ್ಲಿ Feed ವಿಭಾಗ ಲೋಡ್ ಆಗದೇ ಇರುವ ಸಮಸ್ಯೆ ಎದುರಾಗಿದೆ ಎಂದು ದೂರಲಾಗಿದೆ. ಅಲ್ಲದೇ ಪೋಸ್ಟ್‌ಗಳನ್ನು ವೀಕ್ಷಿಸಲು ಹಾಗೂ ಹೊಸ ವಿಷಯಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಇನ್ನೂ ಕೆಲವರು ಆಪ್‌ ತೆರೆಯುವಾಗ ಸಾಮಾನ್ಯವಾಗಿ ಕಾಣುವ ಸ್ಕ್ರೀನ್‌ ಬದಲಾಗಿ ಬೇರೆ ಸ್ಕ್ರೀನ್‌ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ.

Digit.in Survey
✅ Thank you for completing the survey!

Also Read : Vi ಟೆಲಿಕಾಂನ ಈ ಬಜೆಟ್‌ ಬೆಲೆಯ ಪ್ಲಾನಿನಲ್ಲಿ ಡೇಟಾ ಜೊತೆಗೆ ಜನಪ್ರಿಯ ಓಟಿಟಿ ಪ್ರಯೋಜನ

Facebook ಹಾಗೂ Instagram ಸೇವೆಯಲ್ಲಿ ವ್ಯತ್ಯಯ

ಭಾರತೀಯ ಕಾಲಮಾನ ಸಂಜೆ ಸುಮಾರು 7 ಗಂಟೆಯ ವೇಳೆಗೆ ಈ ಸಮಸ್ಯೆ ಆರಂಭವಾಗಿರುವ ಸಾಧ್ಯತೆ ಇದೆ. ಡೌನ್‌ಡೆಕ್ಟರ್ (Downdetector) ವೆಬ್‌ಸೈಟ್‌ನಲ್ಲಿ ಹಠಾತ್‌ವಾಗಿ ದೂರುಗಳ ಸಂಖ್ಯೆ ಹೆಚ್ಚಳವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬಳಕೆದಾರರಿಂದ ಬಂದಿರುವ ವರದಿಗಳ ಪ್ರಕಾರ, ಈ ತಾಂತ್ರಿಕ ಸಮಸ್ಯೆ ಯಾವುದೇ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ವಿವಿಧ ದೇಶಗಳ ಬಳಕೆದಾರರು ಸುಮಾರು ಒಂದೇ ಸಮಯದಲ್ಲಿ ಇದೇ ರೀತಿಯ ತೊಂದರೆಗಳನ್ನು ಅನುಭವಿಸಿರುವುದಾಗಿ ವರದಿ ಮಾಡಿದ್ದಾರೆ.

Facebook

ಭಾರತದಲ್ಲಿಯೂ ಹಲವು ನಗರಗಳ Facebook, Instagram ಮತ್ತು Messenger ಬಳಕೆದಾರರು ಸೇವೆಗಳನ್ನು ಬಳಸುವ ವೇಳೆ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ವಿಶೇಷವಾಗಿ ಲಾಗಿನ್ ಆಗಲು ಸಾಧ್ಯವಾಗದಿರುವುದು ಫೀಡ್ ಲೋಡ್ ಆಗದಿರುವುದು ಹಾಗೂ ಖಾತೆಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ.

ಈ ಸಮಸ್ಯೆ ಕೇವಲ Facebook ಮಾತ್ರವಲ್ಲದೆ Facebook Messenger ಮತ್ತು Instagram ಸೇವೆಗಳ ಮೇಲೂ ಪರಿಣಾಮ ಬೀರಿರುವುದಾಗಿ ಬಳಕೆದಾರರು X (ಹಿಂದಿನ Twitter) ವೇದಿಕೆಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ವಿಶೇಷವಾಗಿ ಫೀಡ್ ಲೋಡ್ ಆಗದಿರುವುದು, ಲಾಗಿನ್ ಸಮಸ್ಯೆ ಹಾಗೂ ಖಾತೆಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ.

ಗಮನಾರ್ಹ ಸಂಗತಿಯೆಂದರೆ ಈ ತಾಂತ್ರಿಕ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ ಫಿಲಿಪ್ಪೀನ್ಸ್ ಸೇರಿದಂತೆ ಹಲವು ದೇಶಗಳ ಬಳಕೆದಾರರು ಸಹ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ಈ ಕುರಿತು Meta ಕಂಪನಿಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. ಆದರೆ ಸಮಸ್ಯೆ ಜಾಗತಿಕ ಮಟ್ಟದಲ್ಲಿ ವರದಿಯಾಗುತ್ತಿರುವುದರಿಂದ ಕಂಪನಿ ಶೀಘ್ರದಲ್ಲೇ ಈ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

INSTAGRAM IS DOWN
FACEBOOK IS DOWN
we’re cooked pic.twitter.com/6CQD2IqNdq

— SrtDenys (@DenysAlfaro) June 12, 2026

People coming to X to check Instagram is down #instagram pic.twitter.com/EonmfDpbhS

— Aditya Singh (@Aditya_Singh_45) June 12, 2026

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Latest Article
Lava Bold N2 5G ಮೊಬೈಲ್‌ಗೆ ಭರ್ಜರಿ ಆಫರ್‌! 6,000mAh ಬ್ಯಾಟರಿ ಬ್ಯಾಕ್‌ಅಪ್‌ Lava Bold N2 5G ಮೊಬೈಲ್‌ಗೆ ಭರ್ಜರಿ ಆಫರ್‌! 6,000mAh ಬ್ಯಾಟರಿ ಬ್ಯಾಕ್‌ಅಪ್‌
256GB ಸ್ಟೋರೇಜ್‌ ಇರುವ Motorola Edge 70 Fusion ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ! 256GB ಸ್ಟೋರೇಜ್‌ ಇರುವ Motorola Edge 70 Fusion ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ!
BSNL ಟೆಲಿಕಾಂನ ಈ ಬಜೆಟ್‌ ಪ್ಲಾನ್‌ನಲ್ಲಿ 300 ದಿನಗಳ ವ್ಯಾಲಿಡಿಟಿ ಜೊತೆಗೆ ಆಕರ್ಷಕ ಡೇಟಾ BSNL ಟೆಲಿಕಾಂನ ಈ ಬಜೆಟ್‌ ಪ್ಲಾನ್‌ನಲ್ಲಿ 300 ದಿನಗಳ ವ್ಯಾಲಿಡಿಟಿ ಜೊತೆಗೆ ಆಕರ್ಷಕ ಡೇಟಾ
ಅಗ್ಗದ ಬೆಲೆಯ Samsung Galaxy F70e 5G ಮೊಬೈಲ್‌ ಈಗ ಇನ್ನಷ್ಟು ಕಡಿಮೆ ಬೆಲೆಗೆ ಲಭ್ಯ! ಅಗ್ಗದ ಬೆಲೆಯ Samsung Galaxy F70e 5G ಮೊಬೈಲ್‌ ಈಗ ಇನ್ನಷ್ಟು ಕಡಿಮೆ ಬೆಲೆಗೆ ಲಭ್ಯ!
Jio ಗ್ರಾಹಕರೇ 1049 ರೂ.ಗಳ ಈ ರೀಚಾರ್ಜ್‌ನಲ್ಲಿ 168GB ಡೇಟಾ ಜೊತೆಗೆ ಓಟಿಟಿ ಸೌಲಭ್ಯ! Jio ಗ್ರಾಹಕರೇ 1049 ರೂ.ಗಳ ಈ ರೀಚಾರ್ಜ್‌ನಲ್ಲಿ 168GB ಡೇಟಾ ಜೊತೆಗೆ ಓಟಿಟಿ ಸೌಲಭ್ಯ!
Most Searched Mobile Phones
  • Best Phones Under 10000
  • Best Phones Under 20000
  • Best Phones Under 30000
  • Upcoming Phones in 2026
  • Latest Mobile Phones
Latest Phones
  • Oppo Reno 16c
  • Oppo Reno 16
  • OnePlus N6
  • Redmi Turbo 5
  • Motorola Razr Fold
Mobile Recharge Plans
  • Airtel Recharge Plans
  • BSNL Recharge Plans
  • Reliance JIO Recharge Plans
  • VI Recharge Plans
Kannada Tech News
  • Telecom: ಈ ರಿಚಾರ್ಜ್ ಮಾಡ್ಕೊಳ್ಳಿ JioHotstar, Netflix ಮತ್ತು ZEE5 ಎಲ್ಲ ಉಚಿತ!
  • How To: ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?
  • icon
  • icon
  • icon
  • icon
SUBSCRIBE Subscribe for the industry's biggest tech news
Enter your email to get notified about our new solutions
By submitting your email, you agree to our
Terms and Privacy Notice.
CONNECT WITH US
  • icon Times Center, FC-6, 1st Floor, Sector 16A, Film City, Noida - 201301
  • icon (+91-120-6776999)
    (1800 121 0005)
  • icon Suggestion: editor@digit.in
    Business: business@digit.in
    Website: sales@digit.in
© 2026 Digit.in, All rights reserved
  • icon
  • icon
  • icon
  • icon
icon
  • About Us
  • Contact Us
  • Advertise with us
  • Regulatory
  • Terms & Conditions
  • Privacy Policy
  • Disclaimer
© 2026 Digit.in, All rights reserved
Digit.in
Logo
Digit.in
Logo