ಆಧಾರ್ ಪ್ಯಾನ್ ಲಿಂಕ್ ಮಾಡಲು ನಾಳೆ ಕೊನೆ ದಿನ! ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯ

Updated on 30-Dec-2019
HIGHLIGHTS

ನೀವು ನಾಳೆ ಅಂದ್ರೆ ಡಿಸೆಂಬರ್ 31 ರೊಳಗೆ ಈ ಲಿಂಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್ ಇನ್ನು ಲಿಂಕ್ ಮಾಡಿಲ್ಲವಾದರೆ ಕೂಡಲೇ ಈ ಕೆಳಗಿನ ಮಾಹಿತಿಯನ್ನು ಅನುಸರಿಸಿ.

ನಿಮ್ಮ ಪ್ಯಾನ್-ಆಧಾರ್ ಲಿಂಕ್‌ನ ಸ್ಟೇಟಸ್ ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಈ ಕೆಳಗೆ ನೋಡಿ.

ಹೌದು ಭಾರತ ಸರ್ಕಾರ ಈ ಎಚ್ಚರಿಕೆಯನ್ನು ಪುನಃ ಇಂದು ನೀಡಿದೆ ಏನಪ್ಪಾ ಅಂದ್ರೆ ಇನ್ನೂ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೊತೆಗೆ ಇನ್ನು ಲಿಂಕ್ ಮಾಡಿಲ್ವಾ? ಹಾಗಾದರೆ ನಾಳೆ ಕೊನೆಯ ದಿನಾಂಕವಂತೆ ನಿವೇನಾದರೂ 31ನೇ ಡಿಸೆಂಬರ್ 2019 ಒಳಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಹೋದರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದೆ. ಇದನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ಅಡಿಯಲ್ಲಿ ಆಧಾರ್​​​ ನೊಂದಿಗೆ ಜೋಡಣೆಯಾಗದ ಪ್ಯಾನ್ ಸಂಖ್ಯೆಯನ್ನು ಅಮಾನ್ಯ ಎಂದು ಅಧಿಕೃತವಾಗಿ ಪರಿಗಣಿಸಲಾಗುತ್ತದೆಂದು ಕೇಂದ್ರ ನೇರ ತೆರಿಗೆ ಮಂಡಳಿ (The Central Board of Direct Taxes) ತಿಳಿಸಿದೆ. 

ಈ ಮೊದಲು ಭಾರತ ಸರ್ಕಾರ ಗ್ರಾಹಕರಿಗೆ ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಜೋಡನೆ ಮಾಡಲು 30ನೇ ಜೂನ್ 2019 ರವರೆಗೆ ಸಮಯ ನೀಡಲಾಗಿತ್ತು. ಆದರೆ ಮಾಹಿತಿ ಕೊರತೆಯಿಂದಾಗಿ ಹೆಚ್ಚಿನವರು ಲಿಂಕ್ ಮಾಡಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಅಧಾರ್ ಮತ್ತು ಪ್ಯಾನ್ ಸಂಖ್ಯೆ ಜೋಡನೆಗೆ ಮಾರ್ಚ್ 31 ವರೆಗೆ ಗಡುವು ನೀಡಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಗಡುವು ವಿಸ್ತರಿಸಿದ ಸರ್ಕಾರ ಹೊಸ ವರ್ಷದೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡುವಂತೆ ಸೂಚಿಸಿದೆ. ಅಂದ್ರೆ 31ನೇ ಡಿಸೆಂಬರ್ 2019 ರೊಳಗೆ ಕಡೆಯ ದಿನವೆಂದು ತಿಳಿಸಿದೆ. ಪ್ಯಾನ್ ಕಾರ್ಡ್ ಆಧಾರ್​​​ ನೊಂದಿಗೆ ಲಿಂಕ್ ಆಗದಿದ್ದರೆ ಆನ್​ಲೈನ್​ನಲ್ಲಿ ITR ಫೈಲ್ ಸಲ್ಲಿಸಲಾಗುವುದಿಲ್ಲ.

ಈ ಮೂಲಕ ಕಂದಾಯ ತೆರಿಗೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಿಂದ ತೆರಿಗೆ ಮರುಪಾವತಿ ಸಮಸ್ಯೆ ಉಂಟಾಗಲಿದೆ. ಹಾಗೆಯೇ ಪ್ಯಾನ್ ಕಾರ್ಡ್ ಇನ್ವಾಲಿಡ್ ಅಂದ್ರೆ ಅಮಾನ್ಯವಾಗಲಿದೆ ಎಂದು ತಿಳಿಸಲಾಗಿದೆ. ಆದ್ದರಿಂದ ನೀವಿನ್ನು ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಇನ್ನು ಲಿಂಕ್ ಮಾಡಿಲ್ಲವಾದರೆ ಕೂಡಲೇ ಈ ಕೆಳಗಿನ ಮಾಹಿತಿಯನ್ನು ಅನುಸರಿಸಿ ಲಿಂಕ್ ಮಾಡಿಕೊಳ್ಳಿ.

-ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ www.incometaxindiaefiling.gov.in ಲಾಗಿನ್ ಆಗಿ. ಆ ಬಳಿಕ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.

ಇದಾದ ಮೇಲೆ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ.

-ಆ ನಂತರ ನಿಮ್ಮ ಹೆಸರು, ಜನ್ಮ ದಿನಾಂಕ ಇತ್ಯಾದಿಗಳನ್ನು ತಪ್ಪಿಲ್ಲದೇ ನಮೂದಿಸಿ. ಇದಾದ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ಸಾಕು.

-ಇದಾದ ಮೇಲೆ UIDAI ನಿಂದ ವೆರಿಫಿಕೇಶನ್ ಆದ ಬಳಿಕ ಆಧಾರ್-ಪ್ಯಾನ್ ಲಿಂಕ್ ಆಗಲಿದೆ.

SMS ಮೂಲಕ ಲಿಂಕ್ ಮಾಡೋದೇಗೆ?

-ಇನ್ನು SMS ಕಳುಹಿಸುವ ಮೂಲಕ ಕೂಡ ಆಧಾರ್-ಪ್ಯಾನ್ ಲಿಂಕ್ ಮಾಡಬಹುದು.

-ನಿಮ್ಮ ಮೊಬೈಲ್ನಲ್ಲಿ UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ನಿಮ್ಮ 12 ಡಿಜಿಟ್ ಆಧಾರ್ ನಂಬರ್ ನಮೂದಿಸಿ. ಆ ಬಳಿಕ ಸ್ಪೇಸ್ ಕೊಟ್ಟು 10 ಸಂಖ್ಯೆ ಪ್ಯಾನ್ ನಂಬರ್ ನಮೂದಿಸಿ.

-ಈ SMS ಅನ್ನು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ನಿಂದ 567678 ಅಥವಾ 56161 ನಂಬರ್ಗೆ ಕಳುಹಿಸಿದರೆ ಆಧಾರ್-ಪ್ಯಾನ್ ಸಂಖ್ಯೆಗಳು ಲಿಂಕ್ ಆಗಲಿವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು Facebook ಮತ್ತು WhatsApp ಅಲ್ಲಿ ಶೇರ್, ಲೈಕ್ ಮಾಡಿ ಇದೆ ರೀತಿಯ ಇತ್ತೀಚಿನ ಟೆಕ್ನಾಲಜಿ ಸಂಭಧಿತ ನ್ಯೂಸ್ ಮತ್ತು ಅಪ್ಡೇಟ್ಗಾಗಿ ಡಿಜಿಟ್ ಕನ್ನಡವನ್ನ ಫಾಲೋ ಮಾಡುತ್ತೀರಿ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :