Dance of the Hillary - APK
Dance of the Hillary: ಪ್ರಸ್ತುತ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಭಯೋತ್ಪಾದಕರ ಸಂಘರ್ಷದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಡ್ರೋನ್ ಮತ್ತು ಮಿಸೈಲ್ ನಂತರ ಈಗ ಡಿಜಿಟಲ್ ವೈರಸ್ ಮೂಲಕ ದಾಳಿ ಮಾಡಲು ಸಜ್ಜಾಗಿದೆ. ಆದ್ದರಿಂದ ಪ್ರಸ್ತುತ ವೈರಲ್ ಆಗುತ್ತಿರುವ Dance of the Hillary ಇದು ಡ್ಯಾನ್ಸ್ ಅಲ್ಲ ಭಯಾನಕ ವೈರಸ್! ಅಪ್ಪಿತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಲೇಬೇಡಿ. ಪ್ರಸ್ತುತ ಪಾಕಿಸ್ತಾನದ ದುಷ್ಟ ಚಟುವಟಿಕೆಗಳು ನಿಲ್ಲಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನಿಮಗೆ ಹಾನಿ ಮಾಡಲು ಪಾಕಿಸ್ತಾನವು ಸಾಮಾಜಿಕ ಮಾಧ್ಯಮಗಳ ಮೂಲಕ ಅಪಾಯಕಾರಿ ವೈರಸ್ ಅನ್ನು ಪ್ರಸಾರ ಮಾಡುತ್ತಿದೆ.
ಇದು ವೀಡಿಯೊ ಫೈಲ್‌ಗಳು ಮತ್ತು ದಾಖಲೆಗಳ ರೂಪದಲ್ಲಿ ಪ್ರಸಾರವಾಗುತ್ತಿರುವ ಅಪಾಯಕಾರಿ ಮಾಲ್‌ವೇರ್ ಆಗಿದೆ. ಈ ಮಾಲ್‌ವೇರ್ ನಿಮ್ಮ ಸಾಧನವನ್ನು ಪ್ರವೇಶಿಸಿದ ನಂತರ ಅದು ಸಕ್ರಿಯಗೊಳ್ಳುತ್ತದೆ ಮತ್ತು ನಿಮ್ಮ ಬ್ಯಾಂಕಿಂಗ್ ವಿವರಗಳು ಕದಿಯಲ್ಪಡುವ ಅಪಾಯ ಹೆಚ್ಚಾಗಬಹುದು. ಈ ವೈರಸ್ ನಿಮ್ಮನ್ನು ಅಪರಿಚಿತ ಲಿಂಕ್ ಅಥವಾ ಲಗತ್ತಿನ ರೂಪದಲ್ಲಿ ತಲುಪಬಹುದು.
ನಿಮ್ಮ ಫೋನಲ್ಲಿ ಯಾವುದೇ ಅಪರಿಚಿತ ನಂಬರ್ ಅಥವಾ ಇಮೇಲ್ ಮೂಲಕ ಈ ‘tasksche.exe‘ ಲಿಂಕ್ ಹೊಂದಿರುವ ಯಾವುದೇ ಫೈಲ್ ಅಥವಾ ‘Dance of the Hillary‘ ವಿಡಿಯೋ, ಫೋಟೋ ಅಥವಾ ಲಿಂಕ್ ಕಂಡುಕೊಂಡರೆ ಆ ಫೈಲ್ – ಲಿಂಕ್ ಅನ್ನು ಅಪ್ಪಿತಪ್ಪಿಯೂ ಕ್ಲಿಕ್ ಮಾಡಬೇಡಿ. ಇದು ನಿಮ್ಮ ಫೋನ್ ಔರ್ತಿ ಕಂಟ್ರೋಲ್ ಅನ್ನು ಪಡೆದುಕೊಳ್ಳುತ್ತದೆ.
ನೀವು WhatsApp, Facebook, Telegram, ಮೆಸೇಜ್ ಅಥವಾ ಇಮೇಲ್ ಮೂಲಕ ಯಾವುದೇ ಅಪರಿಚಿತ ಫೈಲ್ ಅನ್ನು ಸ್ವೀಕರಿಸಿದರೆ ತಪ್ಪಾಗಿ ಸಹ ಫೈಲ್ ಮೇಲೆ ಕ್ಲಿಕ್ ಮಾಡುವ ತಪ್ಪನ್ನು ಮಾಡಬೇಡಿ ಇಲ್ಲದಿದ್ದರೆ ನಿಮ್ಮ ಈ ಸಣ್ಣ ನಿರ್ಲಕ್ಷ್ಯವು ನಿಮಗೆ ತುಂಬಾ ದುಬಾರಿಯಾಗಬಹುದು. ಈ ಫೈಲ್ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಮತ್ತು ನಿಮಗೆ ಆರ್ಥಿಕ ನಷ್ಟವನ್ನುಂಟುಮಾಡುವ ಮಾಲ್‌ವೇರ್ ಅನ್ನು ಒಳಗೊಂಡಿದೆ.
ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ ನೀವು ಆಕಸ್ಮಿಕವಾಗಿ ಅಪರಿಚಿತ ಫೈಲ್ ಅನ್ನು ಕ್ಲಿಕ್ ಮಾಡಿದರೆ ಮತ್ತು ಆಕಸ್ಮಿಕವಾಗಿ ನಿಮಗೆ ನಷ್ಟವಾದರೆ ತಕ್ಷಣ 1930 (ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ) ಕರೆ ಮಾಡಿ ಮತ್ತು ನಿಮಗೆ ಸಂಭವಿಸಿದ ಘಟನೆಯ ಬಗ್ಗೆ ವಿವರಗಳನ್ನು ನೀಡುವ ದೂರು ದಾಖಲಿಸಬಹುದು.