Cloudflare Outage: ಕ್ಲೌಡ್‌ಫ್ಲೇರ್ ಸ್ಥಗಿತದಿಂದಾಗಿ ChatGPT, Spotify ಮತ್ತು Canva ವೆಬ್‌ಸೈಟ್‌ಗಳು ಡೌನ್!

Updated on 18-Nov-2025
HIGHLIGHTS

ಕ್ಲೌಡ್‌ಫ್ಲೇರ್ (Cloudflare) ಇಂಟರ್‌ನೆಟ್‌ಗೆ ಬೇಕಾದ ಮುಖ್ಯ ಸೇವೆಗಳನ್ನು ನೀಡುವ ದೊಡ್ಡ ಕಂಪನಿ.

ಇಂದು ಕ್ಲೌಡ್‌ಫ್ಲೇರ್ ಆಕಸ್ಮಿಕವಾಗಿ ಸ್ಥಗಿತವಾಗಿದ್ದು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ನಿಷ್ಕ್ರಿಯಗೊಳಿಸಿತು.

ಮುಖ್ಯವಾಗಿ Twitter, ChatGPT, Spotify ಮತ್ತು Canva ದಂತಹ ಪ್ರಮುಖ ವೆಬ್‌ಸೈಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು.

Cloudflare Outage: ಇಂದು ಕ್ಲೌಡ್‌ಫ್ಲೇರ್ ಆಕಸ್ಮಿಕವಾಗಿ ಸ್ಥಗಿತವಾಗಿದ್ದು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ನಿಷ್ಕ್ರಿಯಗೊಳಿಸಿತು. ಕ್ಲೌಡ್‌ಫ್ಲೇರ್ ಇಂಟರ್‌ನೆಟ್‌ಗೆ ಬೇಕಾದ ಮುಖ್ಯ ಸೇವೆಗಳನ್ನು ನೀಡುವ ದೊಡ್ಡ ಕಂಪನಿ. ಅದು ಸ್ಥಗಿತಗೊಂಡ ಕಾರಣ ಇಂದು ಅಂದ್ರೆ 18ನೇ ನವೆಂಬರ್ 2025 ರಂದು ಹಲವು ಗಂಟೆಗಳ ಕಾಲ ಇಂಟರ್‌ನೆಟ್‌ನ ಬಹುಪಾಲು ಸೇವೆಗಳು ಸ್ಥಗಿತಗೊಂಡವು ಇದು ಮುಖ್ಯವಾಗಿ Twitter, ChatGPT, Spotify ಮತ್ತು Canva ದಂತಹ ಪ್ರಮುಖ ವೆಬ್‌ಸೈಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ಇದಕ್ಕೆ ಕಾರಣ ಈ ಎಲ್ಲಾ ವೇದಿಕೆಗಳು ತಮ್ಮ ಕಾರ್ಯಗಳಿಗೆ Cloudflare ಅನ್ನು ಅವಲಂಬಿಸಿವೆ.

Also Read: ಭಾರತದಲ್ಲಿ Moto G57 Power ಸ್ಮಾರ್ಟ್ಫೋನ್ 7000mAh ಬ್ಯಾಟರಿಯೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್!

Cloudflare Outage ಯಾವೆಲ್ಲಾ ವೆಬ್‌ಸೈಟ್‌ಗಳಿಗೆ ಸಮಸ್ಯೆ?

ಒಂದು ಸಣ್ಣ ಕಂಪನಿ ಹಾಳಾದರೂ ಇಡೀ ಇಂಟರ್‌ನೆಟ್‌ನಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂದು ಈ ಘಟನೆ ತೋರಿಸಿದೆ. ಕ್ಲೌಡ್‌ಫ್ಲೇರ್ ನೆಟ್‌ವರ್ಕ್ ಅನ್ನು ನಂಬಲಾಗಿದೆ ಅದರ ಸಮಸ್ಯೆ ಇತರ ಎಲ್ಲ ದೊಡ್ಡ ವೆಬ್‌ಸೈಟ್‌ಗಳಿಗೆ ಹರಡಿತು. ಜನಪ್ರಿಯ ChatGPT ಮತ್ತು Spotify ಬಳಕೆದಾರರಿಗೆ ಸಿಗಲಿಲ್ಲ. X ಮತ್ತು Canva ಕೂಡ ಸ್ಥಗಿತಗೊಂಡವು. ಬಳಕೆದಾರರು ತಮ್ಮ ದೈನಂದಿನ ಕೆಲಸ ಮತ್ತು ಮನರಂಜನೆಗೆ ಸಾಕಷ್ಟು ಬೇಸರಗೊಂಡರು.

ಈ ಘಟನೆಯು ಆನ್‌ಲೈನ್ ಸೇವೆಗಳು ಕೆಲವು ಪ್ರಮುಖ ಮೂಲಸೌಕರ್ಯ ಕಂಪನಿಗಳ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಕಾರಣ ಈ ಅಡಚಣೆಯು ಕ್ಲೌಡ್‌ಫ್ಲೇರ್‌ನ ನೆಟ್‌ವರ್ಕ್‌ನಲ್ಲಿನ ಆಂತರಿಕ ತಾಂತ್ರಿಕ ಸಮಸ್ಯೆಯಿಂದ ಉಂಟಾಗಿದೆ ನಿರ್ದಿಷ್ಟವಾಗಿ ಅದರ ವರ್ಕರ್ಸ್ ಕೆವಿ ಸ್ಟೋರೇಜ್ ಸಿಸ್ಟಮ್‌ನಲ್ಲಿನ ಸಮಸ್ಯೆ ಅಥವಾ ಬಾಟ್ ಚೆಕ್‌ಗಳಿಗೆ ಸಂಬಂಧಿಸಿದ ಗುಪ್ತ ಸಾಫ್ಟ್‌ವೇರ್ ದೋಷದಿಂದ ಉಂಟಾಗಿದೆ ಆದರೆ ಇದು ಸೈಬರ್ ದಾಳಿಯಿಂದಲ್ಲ.

ಈ Cloudflare ಸಮಸ್ಯೆಗೆ ಮೂಲ ಕಾರಣ ಏನು?

Cloudflare ಕಂಪನಿಯು ಆರಂಭದಲ್ಲಿ ಇದು “ಆಂತರಿಕ ಸೇವಾ ದೋಷ” ಎಂದು ಹೇಳಿತ್ತು. ನಂತರ ಒಂದು ಅಧಿಕೃತ ಹೇಳಿಕೆಯಲ್ಲಿ ಅವರ ಮುಖ್ಯ ಸಿಸ್ಟಂನಲ್ಲಿರುವ ದೋಷದಿಂದ ಸಾಫ್ಟ್ವೇರ್ ಬಗ್ ಈ ಸಮಸ್ಯೆ ಉಂಟಾಗಿದೆ ಸ್ಪಷ್ಟಪಡಿಸಿದರು. ಒಂದು ನಿಗದಿತ ನಿರ್ವಹಣಾ ಕೆಲಸದ ಸಮಯದಲ್ಲಿ ಈ ದೋಷ ಕಾಣಿಸಿಕೊಂಡಿತು ನೆಟ್‌ವರ್ಕ್‌ನಾದ್ಯಂತ ಸಮಸ್ಯೆ ಉಂಟಾಯಿತು. ಕಂಪನಿಯು ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಿತು ಮತ್ತು ಸ್ವಲ್ಪ ಸಮಯದ ನಂತರ ಸೇವೆಗಳು ನಿಧಾನವಾಗಿ ಮತ್ತೆ ಪ್ರಾರಂಭವಾಯಿತು. ಪೂರ್ಣ ನೆರವಿಗೆ ಇನ್ನೂ ಹೆಚ್ಚಿನ ಸಮಯ ಬೇಕು ಎಂದು ತಿಳಿಸಿತು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :