ChatGPT Down: ಈ AI ಟೂಲ್‌ನಲ್ಲಿ ವ್ಯತ್ಯಯ; ಲಾಗಿನ್ ಮಾಡಲಾಗುತ್ತಿಲ್ಲ!
ChatGPT down: OpenAI ಸಂಸ್ಥೆಯ ಜನಪ್ರಿಯ ChatGPT ಕಾರ್ಯವೈಖರಿಯಲ್ಲಿ ವ್ಯತ್ಯಯ ಎದುರಿಸುತ್ತಿದೆ. ಹೀಗಾಗಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಹಲವು ಬಳಕೆದಾರರು ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಡೌನ್‌ಡೆಕ್ಟರ್‌ನಲ್ಲಿ ಈ ಎರಡು ದೇಶಗಳಾದ್ಯಂತ ಸುಮಾರು 2,373 ಕ್ಕೂ ಹೆಚ್ಚಿನ ಬಳಕೆದಾರರಿಂದ ಸಮಸ್ಯೆ ಕುರಿತು ವರದಿಗಳು ಆಗಿವೆ. ಬಳಕೆದಾರರು ಚಾಟ್‌ಜಿಪಿಟಿ ಅಪ್ಲಿಕೇಶನ್ ಮತ್ತು ಲಾಗಿನ್ ಮಾಡಲಾಗುತ್ತಿಲ್ಲ ಎಂದು ಸಮಸ್ಯೆಗಳನ್ನು ಹೆಚ್ಚಾಗಿ ವರದಿ ಮಾಡಿದ್ದಾರೆ. ವೆಬ್ ಮತ್ತು ಮೊಬೈಲ್ ಆವೃತ್ತಿಯಲ್ಲಿಯೂ ಬಳಕೆದಾರರು ವ್ಯತ್ಯಯ ಅನುಭವಿಸಿದ್ದಾರೆ ಎಂದು ವರದಿಗಳು ಆಗಿವೆ.
SurveyAlso Read : ಡಿಸ್ಕೌಂಟ್‌ನಲ್ಲಿ OnePlus 13R ಖರೀದಿಸುವ ಪ್ಲಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
ChatGPT Down ಅಪ್ಲಿಕೇಶನ್‌ನಲ್ಲಿ ವ್ಯತ್ಯಯ
ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್ ನಲ್ಲಿ ಅನೇಕ ಬಳಕೆದಾರರು ದೋಷಗಳು ಮತ್ತು ವಿಫಲ ಪ್ರತಿಕ್ರಿಯೆಗಳನ್ನು ವರದಿ ಮಾಡಿದರು. ಬರವಣಿಗೆ, ಡೀಬಗ್ ಮಾಡುವುದು ಮತ್ತು ಸಾಮಾನ್ಯ ಪ್ರಶ್ನೆಗಳಂತಹ ದೈನಂದಿನ ಕೆಲಸಗಳು ಸರಾಗವಾಗಿ ಮಾಡಲಾಗುತ್ತಿಲ್ಲ ಎಂದು ದೂರಿದ್ದಾರೆ. ಈ ಕುರಿತು OpenAI ಸಮಸ್ಯೆ ತನಿಖೆಯಲ್ಲಿದೆ ಎಂದು ದೃಢಪಡಿಸಿತು. ಓಪನ್‌ಎಐ ಅವರು ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದೆ. ಆದರೆ ವ್ಯತ್ಯಯ ಏಕೆ ಸಂಭವಿಸಿತು ಎಂಬುದನ್ನು ಅವರು ಇನ್ನೂ ವಿವರಿಸಿಲ್ಲ.

ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್ ವ್ಯತ್ಯಯ ಮೇಲ್ವಿಚಾರಣೆ ಮಾಡುವ ಇಂಟರ್ನೆಟ್ ಆಧಾರಿತ ವೇದಿಕೆಯಾದ ಡೌನ್‌ಡೆಕ್ಟರ್ ಪ್ರಕಾರ, ಅಮೆರಿಕದ 1,617 ಬಳಕೆದಾರರು ಸಮಸ್ಯೆಯ ಬಗ್ಗೆ ವರದಿಗಳನ್ನು ದಾಖಲಿಸಿದ್ದಾರೆ. ಇನ್ನು ಭಾರತದ 756 ಬಳಕೆದಾರರು ಆಗಿರುವ ವ್ಯತ್ಯಯದ ಕುರಿತು ದೂರುಗಳನ್ನು ದಾಖಲಿಸಿದ್ದಾರೆ. ಚಾಟ್‌ಜಿಪಿಟಿ ಮೊಬೈಲ್ ಅಪ್ಲಿಕೇಶನ್ ಮತ್ತು ಲಾಗಿನ್ ಆಕ್ಸಸ್ ಸೇರಿದಂತೆ ಹಲವಾರು ಕೆಲಸಗಳಲ್ಲಿ ಸಮಸ್ಯೆಗಳನ್ನು ಅನುಭವಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಓಪೆನ್ ಎಐ ಸಂಸ್ಥೆಯ ಚಾಟ್‌ಜಿಪಿಟಿ ಒಂದೇ ಪ್ಲಾಟ್‌ಫಾರ್ಮ್ ಡೌನ್ ಆಗಿಲ್ಲ. ಸಂಸ್ಥೆಯ Codex ಸಹ ತಾತ್ಕಾಲಿಕ ಸ್ಥಗಿತ ಆಗಿದೆ. ಈ ಬಗ್ಗೆಯೂ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾದೆ.
ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್‌ಗೆ ಪರ್ಯಾಯ ಟೂಲ್ಸ್
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್ ಡೌನ್ ಸುದ್ದಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್ ಡೌನ್ ಆಗಿರುವ ಕುರಿತು ಹಲವು ಬಳಕೆದಾರರು ಎಕ್ಸ್ ಖಾತೆಯಲ್ಲಿ ಮಿಮ್ಸ್ ಮೂಲಕ ತಿಳಿಸುತ್ತಿದ್ದಾರೆ. ಅಲ್ಲದೇ ಇನ್ನು ಹಲವು ಬಳಕೆದಾರರು ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್ ಗೆ ಪರ್ಯಾಯ ಆಗಿರುವ AI ಟೂಲ್‌ಗಳತ್ತ ಹೊರಳುತ್ತಿದ್ದಾರೆ. ಅಂದಹಾಗೆ ಚಾಟ್‌ಜಿಪಿಟಿ ಪ್ಲಾಟ್‌ಫಾರ್ಮ್‌ಗೆ ಪರ್ಯಾಯ ಎಐ ಟೂಲ್‌ಗಳನ್ನು ನೋಡುವುದಾದರೆ, Google Gemini, Claude AI, Microsoft Copilot ಟೂಲ್‌ಗಳು ಜನಪ್ರಿಯತೆಯಲ್ಲಿ ಇವೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile