ChatGPT ನನ್ನ ಕೆಲಸಕ್ಕೆ ಕುತ್ತಾಗುತ್ತ? ಸುರಕ್ಷತೆ ಮತ್ತು ಸುರಕ್ಷತೆಯಿಲ್ಲದ ಉದ್ಯೋಗಗಳ ಪಟ್ಟಿ ನೋಡಿ!

Updated on 23-Mar-2023
HIGHLIGHTS

AI ಕೆಲವಷ್ಟು ಉದ್ಯೋಗಗಳನ್ನು (Jobs) ಕಸಿದುಕೊಳ್ಳಬಹುದು ಎಂದು ಪ್ರತಿನಿತ್ಯದ ಸುದ್ದಿಗಳಲ್ಲಿ ಹೇಳಲಾಗುತ್ತಿದೆ.

ಹೆಚ್ಚು ಅತ್ಯಾಧುನಿಕ, ಸೃಜನಾತ್ಮಕ ಮತ್ತು ಸಂಕೀರ್ಣ ಪ್ರಾಂಪ್ಟ್‌ಗಳನ್ನು ನಿಭಾಯಿಸಲು ಸಮರ್ಥವಾಗಿರುವ 'GPT-4' ಎಂಬ ಜನರೇಟಿವ್ AI ಯ ಹೊಸ ಆವೃತ್ತಿಯ ಬಿಡುಗಡೆ

ಪ್ರಪಂಚದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆಂಟ್ ಮತ್ತು ರೋಬೋಟ್‌ಗಳ ಸುತ್ತಲೂ ನಡೆಯುತ್ತಿರುವ ಕೆಲವು ಮಹತ್ವದ ಬೆಳವಣಿಗೆಗಳಾಗಿವೆ.

ChatGPT: ಜಗತ್ತಿನಲ್ಲಿ ಇಂದಿನ ತಂತ್ರಜ್ಞಾನದ ಯುಗದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆಂಟ್ (Artificial Intelligence) ಹಾಗೂ ರೋಬೋಟ್‌ಗಳು ಬೆಳೆಯುತ್ತಿರುವ ವೇಗದಲ್ಲಿ ಜನ ಜೀವನದಲ್ಲಿ ಭಾರಿ ಬದಲಾವಣೆಗಳೊಂದಿಗೆ ಕೆಲವಷ್ಟು ಉದ್ಯೋಗಗಳನ್ನು (Jobs)  ಕಸಿದುಕೊಳ್ಳಬಹುದು ಎಂದು ಪ್ರತಿನಿತ್ಯದ ಸುದ್ದಿಗಳಲ್ಲಿ ಹೇಳಲಾಗುತ್ತಿದೆ. ಚಾಟ್‌ ಜಿಪಿಟಿಯಂತಹ AI ಅಪ್ಲಿಕೇಶನ್‌ಗಳು ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿವೆ. ಪ್ರಾಂಪ್ಟ್‌ಗಳಲ್ಲಿ ಉತ್ತರಗಳನ್ನು ನೀಡಲು ಮಾನವರಂತೆ ಸಂಭಾಷಣೆ ನಡೆಸಲು, ಅಸ್ಪಷ್ಟ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೃಜನಾತ್ಮಕ ವಿಷಯವನ್ನು ರಚಿಸುವ ಸಾಮರ್ಥ್ಯಗಳೊಂದಿಗೆ ಈ ತಂತ್ರಜ್ಞಾನಗಳು ಜನರನ್ನು ಆಕರ್ಷಿಸಿವೆ.

AI ಕೆಲವು ಮಹತ್ವದ ಬೆಳವಣಿಗೆಗಳು

ಹೆಚ್ಚು ಅತ್ಯಾಧುನಿಕ, ಸೃಜನಾತ್ಮಕ ಮತ್ತು ಸಂಕೀರ್ಣ ಪ್ರಾಂಪ್ಟ್‌ಗಳನ್ನು ನಿಭಾಯಿಸಲು ಸಮರ್ಥವಾಗಿರುವ 'GPT-4' ಎಂಬ ಜನರೇಟಿವ್ AI ಯ ಹೊಸ ಆವೃತ್ತಿಯ ಬಿಡುಗಡೆಯು ಬಹಳಷ್ಟು ಪ್ರಯೋಜನಕಾರಿ ನಿಜ. ಆದರೆ ಇವು ಜನರಲ್ಲಿ ಸ್ವಲ್ಪ ಮಟ್ಟಿಗೆ ಭಯವನ್ನು ಹುಟ್ಟು ಹಾಕಿದೆ. ಇದು AI ನ ಪ್ರಾರಂಭವಾಗಿದೆ. ಟೆಕ್ ದಿಗ್ಗಜಗಳು ಮಾರುಕಟ್ಟೆಯ ಪ್ರಾಬಲ್ಯವನ್ನು ಪಡೆದುಕೊಳ್ಳುವ ಸಲುವಾಗಿ ಹೆಚ್ಚು ಸುಧಾರಿತ ಮತ್ತು ಅಭಿವೃದ್ಧಿಪಡಿಸಿದ AI ಬೋಟ್ ಅನ್ನು ಉತ್ಪಾದಿಸಲು ತೊಡಗಿವೆ. ಮೈಕ್ರೋಸಾಫ್ಟ್ ತನ್ನ ಸರ್ಚ್ ಇಂಜಿನ್ 'ಬಿಂಗ್' ನಲ್ಲಿ ChatGPT ಅನ್ನು ಸಂಯೋಜಿಸಿದೆ. ಮುಂಬರುವ ತಿಂಗಳುಗಳಲ್ಲಿ ತನ್ನ AI 'Bard' ಅನ್ನು ತರಲು ಗೂಗಲ್ ಘೋಷಿಸಿದೆ. ಪ್ರಪಂಚದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆಂಟ್ ಮತ್ತು ರೋಬೋಟ್‌ಗಳ ಸುತ್ತಲೂ ನಡೆಯುತ್ತಿರುವ ಕೆಲವು ಮಹತ್ವದ ಬೆಳವಣಿಗೆಗಳಾಗಿವೆ.

ಅಪಾಯ ಹೊಂದಿರುವ ಉದ್ಯೋಗಗಳ ಪಟ್ಟಿ

GPT-4 ಗೆ ಭವಿಷ್ಯದಲ್ಲಿ ಬೇಡಿಕೆ ಕಡಿಮೆಯಾಗಬಹುದಾದ ಕೆಲವು ಉದ್ಯೋಗಗಳನ್ನು ಪಟ್ಟಿ ಮಾಡಲು ಕೇಳಿದಾಗ ಅದು ಈ 20 ಉದ್ಯೋಗಗಳನ್ನು ಪಟ್ಟಿ ಮಾಡಿದೆ. ಡೇಟಾ ಎಂಟ್ರಿ ಕ್ಲರ್ಕ್, ಗ್ರಾಹಕ ಸೇವಾ ಪ್ರತಿನಿಧಿ, ಪ್ರೂಫ್ ರೀಡರ್, ಪ್ಯಾರಾಲೀಗಲ್, ಬುಕ್‌ಕೀಪರ್, ಅನುವಾದಕ, ಕಾಪಿರೈಟರ್, ಮಾರುಕಟ್ಟೆ ಸಂಶೋಧನಾ ವಿಶ್ಲೇಷಕ, ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ, ನೇಮಕಾತಿ ವೇಳಾಪಟ್ಟಿ ನಿರ್ವಾಹಕ, ಟೆಲಿಮಾರ್ಕೆಟರ್, ವರ್ಚುವಲ್ ಅಸಿಸ್ಟೆಂಟ್, ಟ್ರಾನ್ಸ್‌ಕ್ರಿಪ್ಷನಿಸ್ಟ್, ನ್ಯೂಸ್ ರಿಪೋರ್ಟರ್, ಟ್ರಾವೆಲ್ ಎಜೆಂಟ್, ತಾಂತ್ರಿಕ ಬೆಂಬಲ ವಿಶ್ಲೇಷಕ, ಇಮೇಲ್ ಮಾರ್ಕೆಟರ್, ಕಂಟೆಂಟ್‌ ಮಾಡರೇಟರ್ ಮತ್ತು ರಿಕ್ರುಟರ್‌ ಸೇರಿದಂತೆ 20 ಉದ್ಯೋಗಗಳನ್ನು ಇದು ಪಟ್ಟಿಮಾಡಿದೆ. 

ಸುರಕ್ಷತೆಯನ್ನು ಹೊಂದಿರುವ ಉದ್ಯೋಗಗಳ ಪಟ್ಟಿ

1 ನರ್ಸ್‌ 30 ಕ್ಲಿನಿಕಲ್ ನರ್ಸ್
2 ಕೋರಿಯೋಗ್ರಾಫರ್ಸ್‌ 31 ಕ್ರಿಟಿಕಲ್ ಕೇರ್ ನರ್ಸ್
3 ಫಿಸಿಶಿಯನ್‌ ಅಸಿಸ್ಟಂಟ್ಸ್‌ 32 ಮನೋವೈದ್ಯಕೀಯ ದಾದಿಯರು
4 ಮಾನಸಿಕ ಆರೋಗ್ಯ ಸಲಹೆಗಾರರು 33 ದಂತವೈದ್ಯ
5 ನರ್ಸಿಂಗ್‌ ಟೀಚರ್ಸ್‌ 34 ವಿನ್ಯಾಸಕಾರರು
6 ತರಬೇತುದಾರರು ಮತ್ತು ಸ್ಕೌಟ್ಸ್ 35 ಪ್ರೋಸ್ಟೊಡಾಂಟಿಸ್ಟ್‌ಗಳು
7 ಅಥ್ಲೆಟಿಕ್ ತರಬೇತುದಾರರು 36 ಶಿಕ್ಷಣ ನಿರ್ವಾಹಕರು
8 ದೈಹಿಕ ಚಿಕಿತ್ಸಕರು 37 ಓರಲ್‌ ಮತ್ತು ಮೆಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕರು
9 ಆರ್ಥೋಟಿಸ್ಟ್‌ಗಳು ಮತ್ತು ಪ್ರಾಸ್ಟೆಟಿಸ್ಟ್‌ಗಳು 38 ಅಗ್ನಿಶಾಮಕ ಮೊದಲ ಸಾಲಿನ ಮೇಲ್ವಿಚಾರಕರು
10 ಔದ್ಯೋಗಿಕ ಚಿಕಿತ್ಸಕರು 39 ನಗರ ಮತ್ತು ಪ್ರಾದೇಶಿಕ ಯೋಜಕರು
11 ಕಲಾ ಚಿಕಿತ್ಸಕರು 40 ಮನರಂಜನಾ ಚಿಕಿತ್ಸಕರು
12 ಸಂಗೀತ ಚಿಕಿತ್ಸಕ 41 ನಿರ್ದೇಶಕರು
13 ಆರೋಗ್ಯ ಸಾಮಾಜಿಕ ಕಾರ್ಯಕರ್ತ 42 ಚರ್ಮರೋಗ ತಜ್ಞರು
14 ಮಾನಸಿಕ ಮತ್ತು ಮಾದಕ ವ್ಯಸನದ ಸಾಮಾಜಿಕ ಕಾರ್ಯಕರ್ತರು 43 ನರವಿಜ್ಞಾನಿಗಳು
15 ಬಯೋ ಇಂಜಿನಿಯರ್ ಮತ್ತು ಬಯೋಮೆಡಿಕಲ್ ಇಂಜಿನಿಯರ್‌ 44 ಪೊಲೀಸ್ ಮತ್ತು ಡಿಟೆಕ್ಟಿವ್‌ಗಳ ಮೇಲ್ವಿಚಾರಕರು
16 ಭೌತಶಾಸ್ತ್ರದ ಶಿಕ್ಷಕರು 45 ನ್ಯೂರೋಸೈಕಾಲಜಿಸ್ಟ್
17 ಫಿಟ್ನೆಸ್ ಮತ್ತು ವೆಲ್ನೆಸ್ ಕೋಆರ್ಡಿನೇಟರ್ಗಳು 46 ನಿಕಲ್ ನ್ಯೂರೋಸೈಕಾಲಜಿಸ್ಟ್
18 ಮಣ್ಣು ಮತ್ತು ಸಸ್ಯ ವಿಜ್ಞಾನಿಗಳು 47 ಮೂಳೆ ಶಸ್ತ್ರಚಿಕಿತ್ಸಕ
19 ಸಮಾಜಕಾರ್ಯ ಶಿಕ್ಷಕರು 48 ವಾಸ್ತುಶಿಲ್ಪಿಗಳು
20 ಕಲೆ, ನಾಟಕ ಮತ್ತು ಸಂಗೀತ ಶಿಕ್ಷಕರು 49 ಶಸ್ತ್ರಚಿಕಿತ್ಸಕರು
21 ಮಾನವಶಾಸ್ತ್ರದ ಶಿಕ್ಷಕರು 50 ತುರ್ತು ನಿರ್ವಹಣಾ ನಿರ್ದೇಶಕರು
22 ಭೌತಶಾಸ್ತ್ರಜ್ಞ 51 ತಡೆಗಟ್ಟುವ ವೈದ್ಯಕೀಯ ವೈದ್ಯ
23 ಆರ್ಕಿಟೆಕ್ಚರ್ ಶಿಕ್ಷಕರು 52 ಔಷಧ ಮತ್ತು ಪುನರ್ವಸತಿ ವೈದ್ಯರು
24 ನರ್ಸ್ ಶುಶ್ರೂಷಕಿಯರು 53 ಕ್ರೀಡಾ ಔಷಧ ವೈದ್ಯ
25 ತುರ್ತು ವೈದ್ಯಕೀಯ ತಂತ್ರಜ್ಞರು 54 ಮಕ್ಕಳ ಶಸ್ತ್ರಚಿಕಿತ್ಸಕ
26 ಭದ್ರತಾ ವ್ಯವಸ್ಥಾಪಕರು 55 ಸ್ತ್ರೀರೋಗತಜ್ಞ
27 ಸಿವಿಲ್ ಎಂಜಿನಿಯರ್‌ಗಳು 56 ಇಂಟೀರಿಯರ್‌ ಡಿಸೈನರ್‌
28 ಅಳವಡಿಸಿಕೊಂಡ ದೈಹಿಕ ಶಿಕ್ಷಣ ತಜ್ಞರು 57 ಭೂದೃಶ್ಯ ವಾಸ್ತುಶಿಲ್ಪಿ
29 ಅರೆವೈದ್ಯರು 58 ತಾಂತ್ರಿಕ ಸಂಯೋಜಕರು
Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :