Happy New Year Scam 2026: ಎಚ್ಚರ! ಹೊಸ ವರ್ಷದಲ್ಲಿ ಹಳೆ QR ಕೋಡ್ ಮತ್ತು WhatsApp ಮೆಸೇಜ್ ವಂಚನೆಗಳು ಹೆಚ್ಚುತ್ತಿವೆ!

Updated on 31-Dec-2025
HIGHLIGHTS

ಹೊಸ ವರ್ಷದ ಆಚರಣೆಯ ಖುಷಿಯ ನಡುವೆ ದುರದೃಷ್ಟವಶಾತ್ ಡಿಜಿಟಲ್ ವಂಚನೆಗಳ ಹಾವಳಿಯೂ ಹೆಚ್ಚುತ್ತಿದೆ.

ಇಂದು QR ಕೋಡ್‌ಗಳು ಮತ್ತು WhatsApp ಸಂದೇಶಗಳು ಸೈಬರ್ ಅಪರಾಧಿಗಳಿಗೆ ಜನರನ್ನು ಲೂಟಿ ಮಾಡಲು ಪ್ರಮುಖ ಅಸ್ತ್ರಗಳಾಗಿವೆ.

ನಾವು ಡಿಜಿಟಲ್ ವ್ಯವಹಾರಗಳನ್ನು ಸುಲಭ ಎಂದು ನಂಬುತ್ತೇವೆ ಆದರೆ ಅದೇ ನಂಬಿಕೆಗಳು ನಮ್ಮನ್ನು ಮೋಸದ ಜಾಲಕ್ಕೆ ಬೀಳಿಸುತ್ತಾರೆ.

Happy New Year Scam 2026: ಹೊಸ ವರ್ಷದ ಆಚರಣೆಯ ಖುಷಿಯ ನಡುವೆ ದುರದೃಷ್ಟವಶಾತ್ ಡಿಜಿಟಲ್ ವಂಚನೆಗಳ ಹಾವಳಿಯೂ ಹೆಚ್ಚುತ್ತಿದೆ. ಇಂದು QR ಕೋಡ್‌ಗಳು ಮತ್ತು WhatsApp ಸಂದೇಶಗಳು ಸೈಬರ್ ಅಪರಾಧಿಗಳಿಗೆ ಜನರನ್ನು ಲೂಟಿ ಮಾಡಲು ಪ್ರಮುಖ ಅಸ್ತ್ರಗಳಾಗಿವೆ. ಹಬ್ಬದ ಹೆಸರಲ್ಲಿ ನಡೆಯುವ ಮೋಸ ಹೇಗೆ? ಜನರು ಹೊಸ ವರ್ಷದ ಶುಭಾಶಯಗಳು ಮತ್ತು ಆಕರ್ಷಕ ಕೊಡುಗೆಗಳನ್ನು ಪರಸ್ಪರ ಹಂಚಿಕೊಳ್ಳುವಾಗ ವಂಚಕರು ಜನರ ಇದೇ ಸಂಭ್ರಮದ ಮನಸ್ಥಿತಿಯನ್ನು ಬಳಸಿಕೊಳ್ಳುತ್ತಾರೆ. ನಾವು ಡಿಜಿಟಲ್ ವ್ಯವಹಾರಗಳನ್ನು ಸುಲಭ ಎಂದು ನಂಬುತ್ತೇವೆ ಆದರೆ ಅದೇ ನಂಬಿಕೆಯನ್ನು ಇಟ್ಟುಕೊಂಡು ಅಪರಿಚಿತ ವ್ಯಕ್ತಿಗಳು ನಮ್ಮನ್ನು ಮೋಸದ ಜಾಲಕ್ಕೆ ಬೀಳಿಸುತ್ತಾರೆ.

Happy New Year Scam 2026 ಅಡಿಯಲ್ಲಿ QR ಕೋಡ್ ವಂಚನೆ ಈ ರೀತಿಯಲ್ಲೂ ಸಾಧ್ಯ!

ನಮ್ಮ ದೈನಂದಿನ ಜೀವನದಲ್ಲಿ ಪಾವತಿ ಮಾಡಲು ಅಥವಾ ಮಾಹಿತಿ ಪಡೆಯಲು QR ಕೋಡ್ ಅತ್ಯಂತ ಸುಲಭವಾದ ಮಾರ್ಗವಾಗಿದೆ. ಆದರೆ ಹೊಸ ವರ್ಷದ ಸಂಭ್ರಮದ ಸಮಯದಲ್ಲಿ ಇದೇ QR ಕೋಡ್ ವಂಚಕರ ಕೈಯಲ್ಲಿ ಒಂದು ಅಪಾಯಕಾರಿ ಆಯುಧವಾಗುತ್ತದೆ. ವಂಚಕರು ಅಸಲಿ ಪಾವತಿ ಕೇಂದ್ರಗಳಂತೆಯೇ ಕಾಣುವ ನಕಲಿ QR ಕೋಡ್‌ಗಳನ್ನು ಸೃಷ್ಟಿಸುತ್ತಾರೆ. ಇವುಗಳನ್ನು ಸೋಶಿಯಲ್ ಮೀಡಿಯಾ, ಇಮೇಲ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಉದಾಹರಣೆಗೆ ರಸ್ತೆ ಬದಿಯ ಅಂಗಡಿಗಳು ಅಥವಾ ದೇಣಿಗೆ ಸಂಗ್ರಹಿಸುವ ಜಾಗಗಳಲ್ಲಿಅಸಲಿ ಕೋಡ್‌ಗಳ ಮೇಲೆ ಅಂಟಿಸಿರುತ್ತಾರೆ. ಹೊಸ ವರ್ಷದ ಭರ್ಜರಿ ರಿಯಾಯಿತಿ ಅಥವಾ ನಿಮಗೆ ಲಾಟರಿ ಹೊಡೆದಿದೆ ಎಂಬ ಸಂದೇಶಗಳನ್ನು ಕಳಿಸಿ ಆ ಬಹುಮಾನ ಪಡೆಯಲು QR ಕೋಡ್ ಸ್ಕ್ಯಾನ್ ಮಾಡಿ ಎಂದು ನಿಮ್ಮನ್ನು ನಂಬಿಸುತ್ತಾರೆ.

ನೀವು ಆ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಅದು ನಿಮ್ಮನ್ನು ಬ್ಯಾಂಕ್ ಪೇಜ್ ತರಹವೇ ಕಾಣುವ ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಅಲ್ಲಿ ನೀವು ನಿಮ್ಮ UPI PIN, ಬ್ಯಾಂಕ್ ವಿವರ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ದಾಖಲಿಸಿದರೆ ನಿಮ್ಮ ಖಾತೆ ಖಾಲಿಯಾಗುತ್ತದೆ. ಕೆಲವೊಮ್ಮೆ ಸ್ಕ್ಯಾನ್ ಮಾಡಿದಾಗ ನಿಮ್ಮ ಹಣದ ಆ್ಯಪ್‌ನಲ್ಲಿ “Money Request” ಎಂಬ ಸಂದೇಶ ಬರುತ್ತದೆ. ನೀವು ಹಣ ಬರುತ್ತದೆ ಎಂದು ತಿಳಿದು ಅದಕ್ಕೆ ಅನುಮೋದನೆ ನೀಡಿದರೆ ನಿಮ್ಮ ಖಾತೆಗೆ ಹಣ ಬರುವ ಬದಲು ನಿಮ್ಮ ಖಾತೆಯಿಂದಲೇ ಹಣ ಕಡಿತವಾಗುತ್ತದೆ. ಹಬ್ಬದ ಉತ್ಸಾಹದಲ್ಲಿ ನಾವು ಇಂತಹ ಸಣ್ಣ ತಪ್ಪುಗಳನ್ನು ಗಮನಿಸದೆ ಹಣ ಕಳೆದುಕೊಳ್ಳುತ್ತೇವೆ.

Also Read: ಹೊಸ ವರ್ಷದ ಆರಂಭದಲ್ಲೆ Blinkit, Zomato, Zepto ಮತ್ತು Swiggy ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರ! ಇದಕ್ಕೆ ಕಾರಣವೇನು?

ಹೊಸ ವರ್ಷದಲ್ಲಿ WhatsApp ವಂಚನೆಗಳು:

ವಾಟ್ಸಾಪ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು “ಹ್ಯಾಪಿ ನ್ಯೂ ಇಯರ್ 2026” ಹೆಸರಿನಲ್ಲಿ ಸುಳ್ಳು ಸಂದೇಶಗಳನ್ನು ಹರಡುತ್ತಾರೆ. ಇದರಲ್ಲಿ ಅಪರಿಚಿತ ನಂಬರ್‌ನಿಂದ ನಿಮ್ಮ ಸ್ನೇಹಿತ ಅಥವಾ ಸಂಬಂಧಿಕರಂತೆ ಮಾತನಾಡಿ “ನಾನು ಸಂಕಷ್ಟದಲ್ಲಿದ್ದೇನೆ ತಕ್ಷಣ ಹಣ ಕಳಿಸಿ” ಎಂದು ನಂಬಿಸಿ ಹಣ ಪಡೆಯುತ್ತಾರೆ. ಮತ್ತೊಂದು ನಿಮಗೆ ಕೋಟಿ ರೂಪಾಯಿ ಲಾಟರಿ ಬಂದಿದೆ ಅದನ್ನು ಪಡೆಯಲು ಸಣ್ಣ ಮೊತ್ತದ ‘ಸರ್ವಿಸ್ ಚಾರ್ಜ್’ ಪಾವತಿಸಿ ಎಂದು ಲಿಂಕ್ ಕಳಿಸುತ್ತಾರೆ.

ಈ ಹೊಸ ವರ್ಷದ ಶುಭಾಶಯ ಪತ್ರ (Greeting Card) ಪಾರ್ಟಿ ಆಮಂತ್ರಣ ಅಥವಾ ಶಾಪಿಂಗ್ ಆಫರ್‌ಗಳ ಹೆಸರಿನಲ್ಲಿ ಕೆಲವು ಲಿಂಕ್‌ಗಳನ್ನು ಕಳಿಸುತ್ತಾರೆ. ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫೋನ್‌ಗೆ ವೈರಸ್ (Malware) ನುಗ್ಗಬಹುದು. ಇದರಿಂದ ನಿಮ್ಮ ಪರ್ಸನಲ್ ಫೋಟೋಗಳು, ಬ್ಯಾಂಕ್ ಪಾಸ್‌ವರ್ಡ್ ಮತ್ತು ಇಮೇಲ್ ವಿವರಗಳು ವಂಚಕರ ಪಾಲಾಗುತ್ತವೆ. ಹಬ್ಬದ ಗದ್ದಲದಲ್ಲಿ ನಾವು ಬರುವ ಪ್ರತಿಯೊಂದು ಮೆಸೇಜ್ ಅನ್ನು ನಿಜವೆಂದು ನಂಬಿ ಕ್ಲಿಕ್ ಮಾಡುತ್ತೇವೆ. ಆದರೆ ಸರಿಯಾಗಿ ಪರಿಶೀಲಿಸದೆ ಯಾವುದೇ ಲಿಂಕ್ ಒತ್ತಬಾರದು ಮತ್ತು ಅಪರಿಚಿತರಿಗೆ ಹಣ ಕಳಿಸಬಾರದು ಎಂಬುದು ನೆನಪಿರಲಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :