Best Air Fryers
Best Air Fryers: ಪ್ರಸ್ತುತ ಇಂದಿನ ದಿನಗಳ್ಲಲಿ ನಿಮಗೆ ಏರ್ ಫ್ರೈಯರ್‌ಗಳ ಖರೀದಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಕಾಣಬಹುದು. ಇದಕ್ಕೆ ಕರಣ ಮನೆಯಲ್ಲೇ ಕಡಿಮೆ ಬೆಲೆಗೆ ಹೆಚ್ಚು ಆರೋಗ್ಯಕರ ಮತ್ತು ರುಚಿಕರ ಆಹಾರವನ್ನು ತಯಾರಿಸುವ ರೂಢಿಗೆ ಜನ ತಿರುಗುತ್ತಿದ್ದರೆ. ಯಾಕೆಂದರೆ ಈ ಉಪಕರಣಗಳು ತ್ವರಿತ ಬಿಸಿ ಗಾಳಿಯ ಪ್ರಸರಣವನ್ನು ಬಳಸಿಕೊಂಡು ಆಹಾರವನ್ನು ಕಡಿಮೆ ಅಥವಾ ಎಣ್ಣೆ ಇಲ್ಲದೆ ರುಚಿಕರವಾದ ಗರಿಗರಿ ಆಹಾರವನ್ನು ತಯಾರಿಸುತ್ತವೆ. ಇದರಿಂದ ತ್ವರಿತ ತಿಂಡಿಗಳಿಂದ ಹಿಡಿದು ಪೂರ್ಣ ಊಟದವರೆಗೆ ಈ ಏರ್ ಫ್ರೈಯರ್ (Best Air Fryers) ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸುವುದರೊಂದಿಗೆ ನಿಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿವಹಿಸುತ್ತದೆ.
ನಿಮಗೊಂದು ಸಣ್ಣ ಅಡುಗೆಮನೆಗಳಿಗೆ ಕಾಂಪ್ಯಾಕ್ಟ್ ವಿನ್ಯಾಸಗಳಿಂದ ಹಿಡಿದು ಕುಟುಂಬ ಅಡುಗೆಗಾಗಿ ಪವರ್ಫುಲ್ ಘಟಕಗಳವರೆಗೆ ನೀವು ಅತ್ಯುತ್ತಮ ಏರ್ ಫ್ರೈಯರ್‌ಗಾಗಿ ಹುಡುಕಾಟದಲ್ಲಿದ್ದರೆ ಈ ಆಯ್ಕೆಯು ನಿಮಗೆ ಆತ್ಮವಿಶ್ವಾಸದಿಂದ ನಿರ್ಧರಿಸಲು ಸಹಾಯ ಮಾಡುತ್ತದೆ. ಸುಮಾರು ₹5000 ರೂಗಳೊಳಗೆ ಬರುವ ಅತ್ಯುತ್ತಮ ಏರ್ ಫ್ರೈಯರ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದ್ದು ಇವು ನಿಮ್ಮ ಅಡುಗೆ ದಿನಚರಿಯನ್ನು ಸುಲಭ ಮತ್ತು ಆರೋಗ್ಯಕರವಾಗಿಸಲು ಈ ಆಯ್ಕೆಗಳನ್ನು ಅನ್ವೇಷಿಸಬಹುದು.
Also Read: Samsung Galaxy Event: ಸ್ಯಾಮ್‌ಸಂಗ್ ಈವೆಂಟ್ ಡೇಟ್ ಕಂಫಾರ್ಮ್! Galaxy S25 FE ಮತ್ತು Galaxy Tab S11 ನಿರೀಕ್ಷೆ!
ಏರ್ ಫ್ರೈಯರ್‌ಗಳು ಸಾಮಾನ್ಯವಾಗಿ ಕನ್ವೆಕ್ಷನ್ ಹೀಟಿಂಗ್ ಟೆಕ್ನಾಲಜಿ ಬಳಸಿಕೊಂಡು ಆಹಾರದ ಸುತ್ತಲೂ ಹೆಚ್ಚಿನ ವೇಗದಲ್ಲಿ ಬಿಸಿ ಗಾಳಿಯನ್ನು ಪ್ರಸಾರ ಮಾಡಲು ಶಕ್ತಿಯುತವಾದ ಫ್ಯಾನ್ ನಡೆಸುತ್ತದೆ. ಇದರಿಂದ ಕೆಲವೇ ಹನಿಗಳ ಎಣ್ಣೆ ಅಥವಾ ಎಣ್ಣೆ ಇಲ್ಲದೆ ಗರಿಗರಿಯಾದ ಆಹಾರವನ್ನು ತಯಾರಿಸುವ ಮೂಲಕ ಡೀಪ್-ಫ್ರೈಯಿಂಗ್ ಅನ್ನು ಅನುಕರಿಸುತ್ತದೆ. ನಂತರ ಇವುಗಳಲ್ಲಿರುವ ರಾಪಿಡ್ ಏರ್ ಟೆಕ್ನಾಲಜಿ (Rapid Air Technology) ಆಹಾರವನ್ನು ಸಮವಾಗಿ ಮತ್ತು ತ್ವರಿತವಾಗಿ ಬಿಸಿ ಮಾಡುತ್ತದೆ. ಇದು ಸಾಂಪ್ರದಾಯಿಕ ಡೀಪ್-ಫ್ರೈಯಿಂಗ್‌ಗೆ ಹೋಲುವ ಸ್ಥಿತಿಯಲ್ಲಿ ಸಿದ್ದವಾಗುತ್ತದೆ. ಇದರ ರುಚಿ ಸಾಮಾನ್ಯ ಆಹಾರದಂತೆ ಇರುವುದರೊಂದಿಗೆ ಹೆಚ್ಚು ಆರೋಗ್ಯಕರವಾಗಿರುತ್ತದೆ.
ಈ USHA ಏರ್‌ಫ್ರೈಯರ್ ತುಂಬಾ ಉಪಯುಕ್ತವಾಗಿದೆ. ಇದರಲ್ಲಿ 10 ರೀತಿಯ ಅಡುಗೆ ವಿಧಾನಗಳಿವೆ. ಇದರಿಂದ ನೀವು ಬೇರೆ ಬೇರೆ ಖಾದ್ಯಗಳನ್ನು ಸುಲಭವಾಗಿ ಮಾಡಬಹುದು. ಇದರ ದೊಡ್ಡ 4. 5 ಲೀಟರ್ ಗಾತ್ರ ಮತ್ತು ಪಾರದರ್ಶಕ ಗ್ಲಾಸ್ ವಿಂಡೋದಿಂದ ನಿಮ್ಮ ಆಹಾರ ಎಷ್ಟು ಸರಿಯಾಗಿ ಬೇಯುತ್ತಿದೆ ಎಂದು ನೋಡಬಹುದು. ಇದು ಡಿಜಿಟಲ್ ಟಚ್ ಪರದೆಯನ್ನು ಹೊಂದಿದ್ದು ಬಳಸಲು ಸುಲಭ ಮತ್ತು ಆಕರ್ಷಕವಾಗಿ ಕಾಣುತ್ತದೆ. ಇದು ಕಡಿಮೆ ಎಣ್ಣೆಯಲ್ಲಿ ಅಡುಗೆ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಈ ಏರ್‌ಫ್ರೈಯರ್ ಪ್ರಸ್ತುತ ಅಮೆಜಾನ್ ಮೂಲಕ ₹4,499 ರೂಗಳಿಗೆ ಲಭ್ಯವಿದೆ.
ಈ ಫಿಲಿಪ್ಸ್ ಫರ್ ಫ್ರೈ ‘Rapid Air Technology’ ಬಳಸಿಕೊಂಡು 90% ಕಡಿಮೆ ಎಣ್ಣೆಯಲ್ಲಿ ಅಡುಗೆ ಮಾಡುತ್ತದೆ. ಆದರೂ ಆಹಾರ ತುಂಬಾ ರುಚಿಯಾಗಿ ಮತ್ತು ಗರಿಗರಿಯಾದ ಅಡುಗೆ. ಇದರ 42 ಲೀಟರ್ ಗಾತ್ರ ಚಿಕ್ಕ ಕುಟುಂಬಕ್ಕೆ ಇದರಲ್ಲಿ 12 ಅಡುಗೆ ಮೆನುಗಳು ಇವೆ. ಉದಾಹರಣೆಗೆ ಫ್ರೈ, ಬೇಕಿಂಗ್, ರೋಸ್ಟಿಂಗ್ ಮತ್ತು ಗ್ರಿಲಿಂಗ್. ಈ ಎಲ್ಲಾ ಆಯ್ಕೆಗಳಿಂದ ನೀವು ಒಂದೇ ಉಪಕರಣದಲ್ಲಿ ಬೇರೆ ಬೇರೆ ಅಡುಗೆಗಳನ್ನು ಮಾಡಬಹುದು. ಈ ಏರ್‌ಫ್ರೈಯರ್ ಪ್ರಸ್ತುತ ಅಮೆಜಾನ್ ಮೂಲಕ ₹4,399 ರೂಗಳಿಗೆ ಲಭ್ಯವಿದೆ.
ಪಿಜನ್ ಹೆಲ್ತಿಫ್ರೈ ಏರ್ ಫ್ರೈಯರ್ ಆರೋಗ್ಯಕರ ಅಡುಗೆಗೆ ಹೆಸರುವಾಸಿಯಾಗಿದೆ. ಇದರ 360° ಹೆಚ್ಚಿನ ವೇಗದ ಗಾಳಿ ಸುತ್ತುವ ತಂತ್ರಜ್ಞಾನದಿಂದ ಆಹಾರಕ್ಕೆ ಕಡಿಮೆ ಎಣ್ಣೆ ಸಾಕು. ಇದು ಡಿಜಿಟಲ್ ಡಿಸ್ಪ್ಲೇ ಮತ್ತು 8 ಪ್ರೀಸೆಟ್ ಮೆನುಗಳನ್ನು ಹೊಂದಿದ್ದು, ನೀವು ಸುಲಭವಾಗಿ ಸಮಯವನ್ನು ಮತ್ತು ಉಷ್ಣಾಂಶವನ್ನು ಹೊಂದಿಸಬಹುದು. ಇದರ 1200W ಪವರ್ ವೇಗವಾಗಿ ಅಡುಗೆ ಮಾಡಲು ಸಹಾಯ ಮಾಡುತ್ತದೆ, ನ್ಯಾನ್-ಸ್ಟಿಕ್ ಬಾಸ್ಕೆಟ್ ಮತ್ತು ಸುಲಭವಾಗಿದೆ. ಈ ಏರ್‌ಫ್ರೈಯರ್ ಪ್ರಸ್ತುತ ಅಮೆಜಾನ್ ಮೂಲಕ ₹3,099 ರೂಗಳಿಗೆ ಲಭ್ಯವಿದೆ.
ಈ ಕುಕ್ವೆಲ್ ಏರ್ ಫ್ರೈಯರ್ ದೊಡ್ಡ 5 ಲೀಟರ್ ಸಾಮರ್ಥ್ಯ ಹೊಂದಿದೆ, ಇಡೀ ಕುಟುಂಬಕ್ಕೆ ಒಟ್ಟಿಗೆ ಅಡುಗೆ ಮಾಡಬಹುದು. ಇದರ ವಿಶೇಷತೆ ಎಂದರೆ ಪಾರದರ್ಶಕ ವಿಂಡೋ, ಇದರಿಂದ ನೀವು ಆಹಾರ ತಯಾರಾಗುವುದನ್ನು ನೇರವಾಗಿ ನೋಡಬಹುದು. ಇದರ 1400W ಪವರ್ ಮತ್ತು ವೇಗದ ಬಿಸಿ ಗಾಳಿಯ ಸಂಚಾರದಿಂದ ಆಹಾರ ಬೇಗ ಮತ್ತು ಚೆನ್ನಾಗಿ ಬೇಯುತ್ತದೆ. ಇದು ಡಿಜಿಟಲ್ ನಿಯಂತ್ರಣಗಳನ್ನು ಹೊಂದಿದ್ದು, ಸುಲಭವಾಗಿ ಬಳಸಬಹುದು. ಈ ಏರ್‌ಫ್ರೈಯರ್ ಪ್ರಸ್ತುತ ಅಮೆಜಾನ್ ಮೂಲಕ ₹3,499 ರೂಗಳಿಗೆ ಲಭ್ಯವಿದೆ.
Also Read: Google Pixel 10 ಸುಮಾರು 10,000 ರೂಗಳವರೆಗಿನ ಡಿಸ್ಕೌಂಟ್ಗಳೊಂದಿಗೆ ಮೊದಲ ಮಾರಾಟ ಶುರು