New UPI Rules From August 1
No UPI, Only Cash: ಪ್ರಪಂಚದಾದ್ಯಂತದ ದೇಶಗಳು ಭಾರತದ ಈ ಡಿಜಿಟಲ್ ಪೇಮೆಂಟ್ (UPI) ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿರುವ ಸಮಯದಲ್ಲಿ ನಮ್ಮ ಬೆಂಗಳೂರಿನಲ್ಲಿ ಇದಕ್ಕೆ ವಿರುದ್ಧವಾಗಿ ನಡೆಯುತ್ತಿರುವುದು ಘಟನೆಗಳು ಬೆಳಕಿಗೆ ಬರುತ್ತಿವೆ. ವಾಸ್ತವವಾಗಿ UPI QR ಕೋಡ್ ಬದಲಿಗೆ ಇಲ್ಲಿನ ಅನೇಕ ಅಂಗಡಿಗಳಲ್ಲಿ “No UPI, Only Cash” ಎಂಬ ಹೊಸ ಪೋಸ್ಟರ್ ಅನ್ನು ತಮ್ಮ ಅಂಗಡಿಗಳಲ್ಲಿ ಇಡಲಾಗುತ್ತಿದೆ. ಅಲ್ಲದೆ ನಗದು ಪಡೆಯದೆ ಅಂಗಡಿಯವರು ತಮ್ಮ ಸರಕುಗಳನ್ನು ಮಾರಾಟ ಮಾಡಲು ಸಹ ನಿರಾಕರಿಸುತ್ತಾರೆ. ಇದು ವಿರುದ್ಧ ದಿಕ್ಕಿನಲ್ಲಿ ಏಕೆ ನಡೆಯುತ್ತಿದೆ? ಇದಕ್ಕೆ ಕಾರಣವೇನು ಎಲ್ಲವನ್ನು ತಿಳಿಯಿರಿ.
ಬೆಂಗಳೂರಿನಲ್ಲಿ ಸಣ್ಣ ಅಂಗಡಿಕಾರರು ಮತ್ತು ವ್ಯಾಪಾರಿಗಳು UPI ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಕಂಡುಬಂದಿದೆ. ನಗದು ಪಾವತಿಗೆ ಬದಲಾಗಿ ಮಾತ್ರ ಸರಕುಗಳನ್ನು ಮಾರಾಟ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದಿಂದ ಸಣ್ಣ ಅಂಗಡಿಕಾರರಿಗೆ ಹೇಳ್ದೆ ಕೇಳ್ದೆ ಬಂದಿರುವ ಮತ್ತು ಬರುತ್ತಿರುವ GST ನೋಟಿಸ್‌ಗಳಾಗಲಿವೆ.
ಇದರ ನಂತರ ವ್ಯಾಪಾರಿಗಳು ಮತ್ತು ವ್ಯಾಪಾರಿಗಳ UPI ಪೇಮೆಂಟ್ ಕೈಬಿಟ್ಟಿ ನಗದನ್ನು ಪಡೆಯಲು ಆರಂಭಿಸಸಿದ್ದಾರೆ. ಗಾಬರಿ ಆಗುವ ಸಂಗತಿ ಅಂದರೆ ಸಣ್ಣ ಪುಟ್ಟ ಅಂಗಡಿಗಳಿಗೂ ಲಕ್ಷ ಲಕ್ಷಗಳ GST ನೋಟಿಸ್ ಬಂದಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸಣ್ಣ ಅಂಗಡಿಕಾರರು ಅದನ್ನು ಭರಿಸಲು ಸಾಧ್ಯವಿಲ್ಲ ಅನ್ನೋದನ್ನು ಸರ್ಕಾರವೇ ಅರ್ಥ ಮಾಡಿಕೊಂಡು ಪರಿಹಾರ ಮಾಡಿ ಕೊಡಲಿ ಅನ್ನೋದು ವ್ಯಾಪಾರಿಗಳ ಕೂಗು.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಶಂಕರ್ ಎಂಬ ಅಂಗಡಿಯವರು, “ನಾನು ದಿನಕ್ಕೆ ಸುಮಾರು 3000 ರೂಪಾಯಿಗಳನ್ನು ಗಳಿಸುತ್ತೇನೆ ಮತ್ತು ನನ್ನ ಲಾಭ ತುಂಬಾ ಕಡಿಮೆ. ಈಗ ಸರ್ಕಾರ ನನ್ನಿಂದ ಜಿಎಸ್ಟಿ ತೆಗೆದುಕೊಂಡರೆ, ಕೊನೆಯಲ್ಲಿ ನಾನು ಏನು ತಿನ್ನುತ್ತೇನೆ?” ಶಂಕರ್, ಚಹಾ ಮತ್ತು ತಿಂಡಿ ಮಾರಾಟಗಾರರು ಮತ್ತು ಬೀದಿ ವ್ಯಾಪಾರಿಗಳಂತಹ ಅನೇಕ ಸಣ್ಣ ಅಂಗಡಿಯವರು ಜಿಎಸ್ಟಿ ಇಲಾಖೆಯಿಂದ ನೋಟಿಸ್ ಪಡೆದಿದ್ದಾರೆ.
ಯಾರೊಬ್ಬರ ವಾರ್ಷಿಕ ಆದಾಯವು 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಅವರು ಜಿಎಸ್ಟಿ ನೋಂದಣಿ ಪಡೆದು ತೆರಿಗೆ ಪಾವತಿಸುವುದು ಅವಶ್ಯಕ ಎಂಬುದು ಗಮನಿಸಬೇಕಾದ ಸಂಗತಿ. ಮತ್ತೊಂದೆಡೆ, ಸೇವಾ ಪೂರೈಕೆದಾರರು ವಾರ್ಷಿಕ 20 ಲಕ್ಷ ರೂಪಾಯಿಗಳ ಆದಾಯದ ಮೇಲೆ ಹಾಗೆ ಮಾಡಬೇಕು.