Aarogya Setu: ಕರೋನಾ ವೈರಸ್ ವಿರುದ್ಧ ಹೇಗೆ ಕಾರ್ಯನಿರ್ವಯಿಸುತ್ತದೆ, ಇದು ಸುರಕ್ಷಿತವೇ!

Updated on 09-Apr-2020
HIGHLIGHTS

ಈ ಕರೋನಾ ವೈರಸ್ (COVID-19) ತಡೆಗಟ್ಟುವಿಕೆಗಾಗಿ ಭಾರತ ಸರ್ಕಾರ ಇತ್ತೀಚೆಗೆ ಆರೋಗ್ಯಾ ಸೇತು (Aarogya Setu) ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಪ್ರಾರಂಭವಾದಾಗಿನಿಂದ ಈ ಅಪ್ಲಿಕೇಶನ್ ಮೂಲಕ ಸರ್ಕಾರವು ನಿಮ್ಮನ್ನು ಮೇಲ್ವಿಚಾರಣೆ ಮಾಡಬಹುದು ಎಂಬ ಸುದ್ದಿ ಬರಲಾರಂಭಿಸಿತು. ಆದರೆ ಅಂತಹ ವರದಿಗಳಲ್ಲಿ ಯಾವುದೇ ಸತ್ಯತೆಯಿಲ್ಲ. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಅಂತಹ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಆದ್ದರಿಂದ ಈ ಆರೋಗ್ಯಾ ಸೇತು ಆಪ್ ಅನ್ನು ಬೇಹುಗಾರಿಕೆಗಾಗಿ ಬಳಸದಿರಲು ನಾವು ಈ ಐದು ಕಾರಣಗಳನ್ನು ನೀಡುತ್ತಿದ್ದೇವೆ.

https://twitter.com/PIBFactCheck/status/1247210137888022533?ref_src=twsrc%5Etfw

1. ಈ ಆರೋಗ್ಯಾ ಸೇತು ಅಪ್ಲಿಕೇಶನ್‌ನ ಹೊಸ ಆವೃತ್ತಿಯು ಹೆಸರು, ವಯಸ್ಸು, ವಿಳಾಸ ಮುಂತಾದ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲವಾದರೂ ಈ ಅಪ್ಲಿಕೇಶನ್‌ನ ಹಳೆಯ ಆವೃತ್ತಿಯಲ್ಲಿ ವೈಯಕ್ತಿಕ ವಿವರಗಳನ್ನು ಇಡುವುದು ನಿಮ್ಮ ಆಶಯವನ್ನು ಅವಲಂಬಿಸಿರುತ್ತದೆ.

2. ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸಂಖ್ಯೆಯನ್ನು ಒಟಿಪಿ ಮೂಲಕ ಮಾತ್ರ ಪರಿಶೀಲಿಸುತ್ತದೆ. ಇದಲ್ಲದೆ ಯಾವುದೇ ವೈಯಕ್ತಿಕ ವಿವರಗಳನ್ನು ಪಡೆಯಲಾಗುವುದಿಲ್ಲ.

3. ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸಂಖ್ಯೆ, ಬ್ಲೂಟೂತ್ ಮತ್ತು ಸ್ಥಳ ಡೇಟಾವನ್ನು ಬಳಸುತ್ತದೆ. ಇದರಿಂದ ನೀವು ಸುರಕ್ಷಿತವಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಫೋನ್‌ನ ಸ್ಟೋರೇಜ್, ಕ್ಯಾಮೆರಾ ಅಥವಾ ಕಾಂಟೆಕ್ಟ್ ಇತ್ಯಾದಿಗಳನ್ನು ಪ್ರವೇಶಿಸಲು ಇದು ನಿಮ್ಮನ್ನು ಅನುಮತಿ ಕೇಳುವುದಿಲ್ಲ.

4. ಇತರ ಯಾವುದೇ ಅಪ್ಲಿಕೇಶನ್‌ನಂತೆ ನೀವು ಯಾವುದೇ ಸಮಯದಲ್ಲಿ ಈ ಅಪ್ಲಿಕೇಶನ್ ಅನ್ನು (uninstall) ಅಸ್ಥಾಪಿಸಬಹುದು. ನೀವು ಅದನ್ನು ಮತ್ತೆ ಸ್ಥಾಪಿಸಿದರೆ ಅದು ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಹ ನೆನಪಿರುವುದಿಲ್ಲ ನೀವು ಪುನಃ ಮತ್ತೆ ಹೊಸದಾಗಿ ನೋಂದಾಯಿಸಿಕೊಳ್ಳಬೇಕು.

5. ಈ ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ನ ಬ್ಲೂಟೂತ್ ಅನ್ನು ಬಳಸಿ ಕರೋನಾ ವೈರಸ್ Covid-19 ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂದು ಅಪ್ಲಿಕೇಶನ್ ಬಳಕೆದಾರರಿಗೆ ತಿಳಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :