Apple Launch Event 2026: ಈ ಕಾರ್ಯಕ್ರಮದ ಲೈವ್ ವೀಕ್ಷಣೆ ಹೇಗೆ? ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ

ಜನಪ್ರಿಯ Apple ಕಂಪನಿಯು ನಾಳೆ (ಸೆಪ್ಟೆಂಬರ್ 9 ರಂದು) ತನ್ನ ಪ್ರಮುಖ ವಾರ್ಷಿಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. Surprise and Shine ಹೆಸರಿನ ಈ ಕಾರ್ಯಕ್ರಮದಲ್ಲಿ ಹೊಸ iPhone 18 Pro ಮತ್ತು iPhone 18 Pro Max ಮಾದರಿಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಆಪಲ್ ತನ್ನ ಮೊದಲ ಮಡಿಸಬಹುದಾದ ಐಫೋನ್‌ ಅನ್ನು ಕೂಡ ಈ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಬಹುದು ಎಂಬ ಸೂಚನೆ ಇದೆ. ಅಲ್ಲದೇ ಹೊಸ ಆಪಲ್‌ ವಾಚ್‌ ಮತ್ತು AirPods ಮಾದರಿಗಳೂ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನುಳಿದಂತೆ ಆಪಲ್‌ ಕಾರ್ಯಕ್ರಮ ಲೈವ್‌ ವೀಕ್ಷಣೆ ಹಾಗೂ ಇನ್ನಿತರ ಮಾಹಿತಿ ಮುಂದೆ ನೋಡೋಣ.

Also Read : OnePlus ಕಂಪನಿಯ ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ ಭಾರೀ ರಿಯಾಯಿತಿ!

Apple Event: Live ವೀಕ್ಷಣೆ ಹೇಗೆ

ಆಪಲ್‌ ಕಂಪನಿಯ Surprise and Shine ಕಾರ್ಯಕ್ರಮವು ನಾಳೆ (ಸೆಪ್ಟೆಂಬರ್ 9 ರಂದು) ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಕಂಪನಿಯ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಭಾರತದಲ್ಲಿರುವವರು ಆಪಲ್‌ನ ಅಧಿಕೃತ YouTube ಚಾನೆಲ್, Apple TV ಆಪ್‌ ಹಾಗೂ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಬಹುದು.

Apple surprise and shine event

ಐಫೋನ್‌ 18 ಪ್ರೊ ಮತ್ತು ಐಫೋನ್‌ 18 ಪ್ರೊ ಮ್ಯಾಕ್ಸ್‌

ಈ ವರ್ಷದ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಐಫೋನ್‌ 18 ಪ್ರೊ ಮತ್ತು ಐಫೋನ್‌ 18 ಪ್ರೊ ಮ್ಯಾಕ್ಸ್‌ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಫೋನ್‌ಗಳು ಪ್ರಸ್ತುತ ಪ್ರೊ ಮಾದರಿಗಳ ವಿನ್ಯಾಸ ಮತ್ತು ಡಿಸ್ಪ್ಲೇ ಗಾತ್ರವನ್ನು ಬಹುತೇಕ ಉಳಿಸಿಕೊಂಡು, ಹಲವು ಹೊಸ ಅಪ್‌ಗ್ರೇಡ್‌ಗಳೊಂದಿಗೆ ಬರಬಹುದು ಎನ್ನಲಾಗಿದೆ. ಕಾರ್ಯಕ್ಷಮತೆಯ ವಿಚಾರದಲ್ಲಿ ಆಪಲ್ ತನ್ನ ಪ್ರೊ ಮಾದರಿಗಳಿಗೆ 2nm ಪ್ರೊಸೆಸ್ ಆಧಾರಿತ A20 Pro ಚಿಪ್ ಬಳಸಬಹುದು ಎಂಬ ವರದಿಗಳಿವೆ.

ಹಾಗೆಯೇ Dynamic Island ನ ಗಾತ್ರವನ್ನು ಮತ್ತಷ್ಟು ಕಡಿಮೆ ಮಾಡುವುದು, ವೇರಿಯಬಲ್-ಅಪರ್ಚರ್ ಕ್ಯಾಮೆರಾ ಮತ್ತು ಕ್ಯಾಮೆರಾ ಕಂಟ್ರೋಲ್‌ ಬಟನ್‌ನಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.

ಆಪಲ್‌ ವಾಚ್‌ ಸರಣಿ 12 ಮತ್ತು ವಾಚ್‌ ಅಲ್ಟ್ರಾ 4

ಕಂಪನಿಯು ನೂತನ ಐಫೋನ್‌ ಸರಣಿಯ ಜೊತೆಗೆ ಹೊಸ ಆಪಲ್‌ ವಾಚ್‌ ಸರಣಿ 12 ಮತ್ತು ಆಪಲ್‌ ವಾಚ್‌ ಅಲ್ಟ್ರಾ 4 ಮಾದರಿಗಳನ್ನೂ ಆಪಲ್ ಪರಿಚಯಿಸಬಹುದು ಎನ್ನಲಾಗಿದೆ. ಆಪಲ್‌ ವಾಚ್‌ ಸರಣಿ 12 ನಲ್ಲಿ ಸೆರಾಮಿಕ್ ಕೇಸ್, ಹೊಸ ಬಣ್ಣಗಳ ಆಯ್ಕೆ ಮತ್ತು ಹೆಚ್ಚುವರಿ ಆರೋಗ್ಯ ಸಂಬಂಧಿತ ಫೀಚರ್‌ಗಳು ಸಿಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಆಪಲ್‌ ವಾಚ್‌ ಅಲ್ಟ್ರಾ 4 ನಲ್ಲಿ ವಿನ್ಯಾಸ ಹಾಗೂ ಸೆನ್ಸರ್‌ಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :