ಟೆಕ್ ದಿಗ್ಗಜ ಆಪಲ್ ತನ್ನ ಮುಂದಿನ ಪೀಳಿಗೆಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾದ iPhone 18 Pro ಮತ್ತು iPhone 18 Pro Max ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿಯು ಈ ಫೋನ್‌ಗಳ ಕುರಿತು ಅಧಿಕೃತವಾಗಿ ಯಾವುದೇ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈಗಾಗಲೇ ಹಲವು ಸೋರಿಕೆಗಳು ಮತ್ತು ವದಂತಿಗಳು ಮುಂಬರುವ ಐಫೋನ್‌ಗಳ ವಿನ್ಯಾಸ ಹಾಗೂ ಫೀಚರ್‌ಗಳ ಬಗ್ಗೆ ಸುಳಿವು ನೀಡಿವೆ. ಇದೀಗ ಅಧಿಕೃತ ಬಿಡುಗಡೆಗೂ ಮುನ್ನ ಐಫೋನ್ 18 ಪ್ರೊ ಸರಣಿಯ ಎರಡು ಮಾದರಿಗಳನ್ನು ತೋರಿಸುವ ವೀಡಿಯೊವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇತ್ತೀಚಿನ ಲೀಕ್ ಮಾಹಿತಿ ಪ್ರಕಾರ, ಐಫೋನ್ 18 ಪ್ರೊ ಮ್ಯಾಕ್ಸ್ ಡಾರ್ಕ್ ಚೆರ್ರಿ ಕಲರ್‌ನಲ್ಲಿ ಹಾಗೂ ಐಫೋನ್ 18 ಪ್ರೊ ಬ್ಲೂ ಕಲರ್ ಆಯ್ಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : OnePlus ಕಂಪನಿಯ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಭಾರೀ ರಿಯಾಯಿತಿ!
ಆಪಲ್ ತನ್ನ ಮುಂದಿನ ವಿಶೇಷ ಕಾರ್ಯಕ್ರಮವನ್ನು ಸೆಪ್ಟೆಂಬರ್ 9 ರಂದು ಆಯೋಜಿಸಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯು ಐಫೋನ್ 18 ಪ್ರೊ ಸರಣಿಯನ್ನು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಿಗೆ ಪರಿಚಯಿಸುವ ಸಾಧ್ಯತೆಯಿದೆ. ಇನ್ನು ಐಫೋನ್ 18 ಪ್ರೊ ಮ್ಯಾಕ್ಸ್ ಡಾರ್ಕ್ ಚೆರ್ರಿ ಕಲರ್‌ನಲ್ಲಿ ಹಾಗೂ ಐಫೋನ್ 18 ಪ್ರೊ ಬ್ಲೂ ಕಲರ್ ಆಯ್ಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಐಫೋನ್ 18 ಪ್ರೊ ಬೆಲೆ ಭಾರತದಲ್ಲಿ ಸುಮಾರು 1,39,900 ರೂ.ಗಳಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ 1,59,900 ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ಲೀಕ್ ಮಾಹಿತಿ ಪ್ರಕಾರ ಐಫೋನ್ 18 ಪ್ರೊ ಫೋನ್ 6.3 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಹಾಗೆಯೇ ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್ 6.9ವಇಂಚಿನ ಡಿಸ್ಪ್ಲೇಯೊಂದಿಗೆ ಎಂಟ್ರಿ ಕೊಡಬಹುದು. ಈ ಎರಡೂ ಮಾದರಿಗಳಲ್ಲಿ LTPO Super Retina XDR OLED ಪ್ಯಾನೆಲ್ ಇರುವ ನಿರೀಕ್ಷೆಯಿದ್ದು, 120Hz ರಿಫ್ರೆಶ್ ರೇಟ್‌ಗೆ ಸಪೋರ್ಟ್ ನೀಡಬಹುದು ಎನ್ನಲಾಗಿದೆ. ಹಾಗೆಯೇ ಇವುಗಳಲ್ಲಿ ಆಪಲ್‌ನ ಹೊಸ A20 Pro ಚಿಪ್‌ಸೆಟ್ ಬಳಕೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಆಪಲ್‌ನ ಕಸ್ಟಮ್ C2 ಮಾದರಿಯೂ ಇರಬಹುದು ಎನ್ನಲಾಗಿದೆ.
ಇನ್ನು ಕ್ಯಾಮೆರಾ ವಿಭಾಗದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಎರಡೂ ಹಿಂಭಾಗದಲ್ಲಿ ಟ್ರಿಪಲ್ 48MP ಕ್ಯಾಮೆರಾ ರಚನೆ ಪಡೆದಿರುವ ಸಾಧ್ಯತೆಯಿದೆ. ಕ್ಯಾಮೆರಾ ಹಾರ್ಡ್‌ವೇರ್ ಮತ್ತು ಇಮೇಜ್ ಪ್ರೊಸೆಸಿಂಗ್‌ನಲ್ಲಿ ಆಪಲ್ ಮತ್ತಷ್ಟು ಸುಧಾರಣೆಗಳನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಬ್ಯಾಟರಿ ಸಾಮರ್ಥ್ಯದಲ್ಲೂ ಈ ಬಾರಿ ಹೆಚ್ಚಳವಾಗಬಹುದು ಎನ್ನಲಾಗಿದೆ. ಐಫೋನ್ 18 ಪ್ರೊ ಮಾದರಿಯು 4,288mAh ಬ್ಯಾಟರಿ ಹೊಂದುವ ನಿರೀಕ್ಷೆಯಿದೆ. ಮತ್ತೊಂದೆಡೆ, ಐಫೋನ್ 18 ಪ್ರೊ ಮ್ಯಾಕ್ಸ್ ಮಾದರಿಯ ಬ್ಯಾಟರಿ ಸಾಮರ್ಥ್ಯ 5,425mAh ನಿಂದ 5,567mAh ನಡುವೆ ಇರಬಹುದು ಎಂದು ಸೋರಿಕೆಗಳು ಸೂಚಿಸಿವೆ.