Amazon Prime Day Sale 2025 India: ಭಾರತದಲ್ಲಿ ಅಮೆಜಾನ್ ಪ್ರೈಮ್ ಸದಸ್ಯರಿಗೆ ಬಹುನಿರೀಕ್ಷಿತ ಶಾಪಿಂಗ್ ಕಾರ್ಯಕ್ರಮ ಸಮೀಪಿಸುತ್ತಿದೆ! ಅಮೆಜಾನ್ ಪ್ರೈಮ್ ಡೇ 12ನೇ ಜುಲೈ 2025 ಮಧ್ಯರಾತ್ರಿಯಿಂದ ಪ್ರಾರಂಭವಾಗಿ 14ನೇ ಜುಲೈ 2025 ಮಧ್ಯರಾತ್ರಿ 11:59 ರವರೆಗೆ ನಡೆಯಲಿದೆ. ಅಂದ್ರೆ ಬರೋಬ್ಬರಿ 72 ಗಂಟೆಗಳ ಅದ್ಭುತ ರಿಯಾಯಿತಿಗಳು, ವಿಶೇಷ ಬಿಡುಗಡೆಗಳು ಮತ್ತು ಬ್ಲಾಕ್ಬಸ್ಟರ್ ಮನರಂಜನೆಯನ್ನು ನೀಡುತ್ತದೆ.
ಈ ವರ್ಷದ ಪ್ರೈಮ್ ಡೇ (Prime Day 2025 Sale) ಸಿಕ್ಕಾಪಟ್ಟೆ ದೊಡ್ಡದಾಗಿರುತ್ತದೆ. ಗಮನದಲ್ಲಿರಲಿ ಇದು ಅಮೆಜಾನ್ ಪ್ರೈಮ್ ಚಂದಾದಾರರಿಗೆ ಮಾತ್ರ ವ್ಯಾಪಕ ಶ್ರೇಣಿಯ ಉತ್ಪನ್ನಗಳಲ್ಲಿ ಜಬರದಸ್ತ್ ಉಳಿತಾಯ ಮಾಡುವ ಅವಕಾಶವಾಗಿದೆ.
ನಿಮ್ಮ ಕ್ಯಾಲೆಂಡರ್‌ಗಳನ್ನು 12 ಜುಲೈನಿಂದ 14ನೇ ಜುಲೈ 2025 ಅಂದರೆ ಈ ಶನಿವಾರದಿಂದ ಸೋಮವಾರದವರೆಗೆ ಗುರುತಿಸಿಟ್ಟುಕೊಳ್ಳಿ ಭಾರತದಲ್ಲಿ ಅಮೆಜಾನ್ ಪ್ರೈಮ್ ಸದಸ್ಯರು ಸಾವಿರಾರು ಡೀಲ್‌ಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ. ನೀವು ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಫ್ಯಾಷನ್ ಅಥವಾ ದೈನಂದಿನ ಅಗತ್ಯ ವಸ್ತುಗಳನ್ನು ಹುಡುಕುತ್ತಿರಲಿ ಈ ಮೂರು ದಿನಗಳ ಶಾಪಿಂಗ್ ಸಂಭ್ರಮವು ವರ್ಷದ ಅತ್ಯುತ್ತಮ ಬೆಲೆಗಳನ್ನು ನಿಮಗೆ ತರಲು ವಿನ್ಯಾಸಗೊಳಿಸಲಾಗಿದೆ. ಇದು ಸೀಮಿತ ಸಮಯದ (Limited Time) ಅವಕಾಶಗಳನ್ನು ಕೈ ಜಾರಲು ಬಿಡಬೇಡಿ.
ನಿಮ್ಮ ಉಳಿತಾಯವನ್ನು ಗರಿಷ್ಠಗೊಳಿಸಲು ಅಮೆಜಾನ್ ಪ್ರಮುಖ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮತ್ತು SBI ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಮಾಡಿದ ವಹಿವಾಟುಗಳ ಮೇಲೆ EMI ಆಯ್ಕೆಗಳು ಸೇರಿದಂತೆ 10% ತ್ವರಿತ ರಿಯಾಯಿತಿಯನ್ನು ನಿರೀಕ್ಷಿಸಬಹುದು.
ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 5% ಕ್ಯಾಶ್‌ಬ್ಯಾಕ್ ಮತ್ತು ಹೆಚ್ಚುವರಿ 5% ತ್ವರಿತ ರಿಯಾಯಿತಿಯೊಂದಿಗೆ ಇನ್ನೂ ಹೆಚ್ಚಿನದನ್ನು ಪಡೆಯಬಹುದು. ಅಲ್ಲದೆ ಇದರ ಜೊತೆಗೆ ಅರ್ಹ ಉತ್ಪನ್ನಗಳ ಮೇಲೆ ₹60,000 ವರೆಗಿನ ವಿನಿಮಯ ಕೊಡುಗೆಗಳು ಹೆಚ್ಚಿನ ಉಳಿತಾಯವನ್ನು ಒದಗಿಸುತ್ತವೆ.
ಈ ಪ್ರೈಮ್ ಡೇಯಲ್ಲಿ ನಿಮಗೆ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ದಾಖಲೆಯ ಕಡಿಮೆ ಬೆಲೆಗೆ ಸಿದ್ಧರಾಗಬಹುದು. ಅಮೆಜಾನ್ iPhone 15, Samsung S24 Ultra ಮತ್ತು OnePlus 13, OnePlus 13s, OnePlus Nord CE5 ನಂತಹ ವಿವಿಧ ಒನ್‌ಪ್ಲಸ್ ಮಾದರಿಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನಿರೀಕ್ಷಿಸಬಹುದು.
ಅಲ್ಲದೆ ಹೊಸ ಸ್ಮಾರ್ಟ್ ಟಿವಿಗಳಿಗಾಗಿ ಸೋನಿ, ಸ್ಯಾಮ್‌ಸಂಗ್, ಎಲ್‌ಜಿ, ಶಿಯೋಮಿ ಮತ್ತು ಟಿಸಿಎಲ್‌ನಂತಹ ಬ್ರಾಂಡ್‌ಗಳಿಂದ ಅತ್ಯುತ್ತಮ ಮಾದರಿಗಳಲ್ಲಿ ಆಕರ್ಷಕ ಡೀಲ್‌ಗಳನ್ನು ನೋಡಬಹುದು. ಇದರಲ್ಲಿ ಸುಮಾರು 65% ವರೆಗಿನ ರಿಯಾಯಿತಿಗಳು ಮತ್ತು ಹೆಚ್ಚುವರಿ ಬ್ಯಾಂಕ್ ಕೊಡುಗೆಗಳನ್ನು ಪಡೆಯಬಹುದು.