Amazon Great Summer Sale 2025
Amazon Great Summer Sale 2025: ಭಾರತದಲ್ಲಿ ಬೇಸಿಗೆ ಕಾಲಕ್ಕೆ ಈ ಮುಂಬರುವ ಅಮೆಜಾನ್ ಸಮ್ಮರ್ ಸೇಲ್ 1ನೇ ಮೇ 2025 ರಂದು ಮಧಾಹ್ನದಿಂದ ಶುರುವಾಗಲಿದೆ. ಇದರಲ್ಲಿ ಆಕರ್ಷಕ ಡೀಲ್, ಆಫರ್ ಮತ್ತು ಡಿಸ್ಕೌಂಟ್‌ಗಳನ್ನು ನೀಡಲು ಸಜ್ಜಾಗಿದ್ದು ಗ್ರಾಹಕರು ತಮ್ಮ ನೆಚ್ಚಿನ ಗ್ಯಾಜೆಟ್‌ಗಳನ್ನು ಸಾರ್ವಕಾಲಿಕ ಕಡಿಮೆ ಬೆಲೆಯಲ್ಲಿ ಖರೀದಿಸಲು ಅನುವು ಮಾಡಿಕೊಡುತ್ತದೆ. ಅಮೆಜಾನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಹಲವಾರು ವಿಶೇಷ ಮಾರಾಟಗಳನ್ನು ಆಯೋಜಿಸುವುದಕ್ಕೆ ಹೆಸರುವಾಸಿಯಾಗಿದೆ. ಇದು ತಮ್ಮ ಉತ್ಪನ್ನಗಳನ್ನು ಅಪ್‌ಗ್ರೇಡ್ ಮಾಡಲು ಆಸಕ್ತಿ ಹೊಂದಿರುವ ಖರೀದಿದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ ಈ ಅಮೆಜಾನ್ ಮಾರಾಟದ ವಿವರಗಳನ್ನು ನೋಡುವುದಾದರೆ ನೀವು ನಿಮ್ಮ ನೆಚ್ಚಿನ ಗ್ಯಾಜೆಟ್‌ಗಳು, ಪರಿಕರಗಳು ಮತ್ತು ಇತರ ವಸ್ತುಗಳನ್ನು ಅತ್ಯುತ್ತಮ ರಿಯಾಯಿತಿಯಲ್ಲಿ ಕಾಣಬಹುದು. ಈ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಆಕರ್ಷಕ ಡೀಲ್, ಆಫರ್ ಮತ್ತು ಡಿಸ್ಕೌಂಟ್‌ಗಳೇನು ಎಲ್ಲವನ್ನು ತಿಳಿಯಬಹುದು. ಮುಂಬರುವ ಅಮೆಜಾನ್ ಮಾರಾಟಗಳ ಪಟ್ಟಿಯನ್ನು ನಾವು ಇಲ್ಲಿ ಸಂಗ್ರಹಿಸಿದ್ದೇವೆ, ಅವುಗಳ ನಿರೀಕ್ಷಿತ ದಿನಾಂಕಗಳು, ಕೊಡುಗೆಗಳು ಮತ್ತು ರಿಯಾಯಿತಿಗಳು ಸೇರಿದಂತೆ. ಕೆಲವು ಮಾರಾಟ ದಿನಾಂಕಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಬಹುದು.
ಇದನ್ನೂ ಓದಿ: Best Mini Air Conditioners: ಈ ಬೇಸಿಗೆಯಲ್ಲಿ ಕೈಗೆಟುಕುವ ಬೆಲೆಗೆ ಜಬರ್ದಸ್ತ್ ಮತ್ತು ಬೆಸ್ಟ್ ಮಿನಿ ಏರ್ ಕಂಡಿಷನರ್ ಮಾರಾಟ!
ಅಮೆಜಾನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಅಮೆಜಾನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಸೇಲ್ ಅನ್ನು ಘೋಷಿಸಿದ್ದು, ವಿವಿಧ ಉತ್ಪನ್ನ ವಿಭಾಗಗಳಲ್ಲಿ ಗಮನಾರ್ಹ ರಿಯಾಯಿತಿಗಳನ್ನು ನೀಡುತ್ತದೆ. ಈ ಈವೆಂಟ್ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಅಥವಾ ಇತರ ಗ್ಯಾಜೆಟ್‌ಗಳನ್ನು ಖರೀದಿಸಲು ಬಯಸುವವರಿಗೆ ಒಂದು ಅತ್ಯುತ್ತಮ ಅವಕಾಶವಾಗಿದೆ.
ಈ ಸೇಲ್‌ನಲ್ಲಿ ಉನ್ನತ ಬ್ರಾಂಡ್‌ಗಳ ವ್ಯಾಪಕ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಸೇಲ್‌ನಲ್ಲಿ ವಿವಿಧ ಗ್ಯಾಜೆಟ್‌ಗಳ ಮೇಲಿನ ಡೀಲ್‌ಗಳು ಸೇರಿವೆ. ಸ್ಮಾರ್ಟ್‌ವಾಚ್‌ಗಳಿಂದ ಹೆಡ್‌ಫೋನ್‌ಗಳವರೆಗೆ ಖರೀದಿದಾರರು ಜನಪ್ರಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಗಣನೀಯ ಉಳಿತಾಯವನ್ನು ಆನಂದಿಸಬಹುದು. ನೀವು ನೋಡುತ್ತಿರುವ ತಾಂತ್ರಿಕ ಪರಿಕರಗಳನ್ನು ಖರೀದಿಸಲು ಇದು ಉತ್ತಮ ಅವಕಾಶವಿದೆ.
ಅಮೆಜಾನ್ ಪ್ರೈಮ್ ಸದಸ್ಯರಿಗೆ (Amazon Prime Member) ವಿಶೇಷವಾಗಿ ಒಂದು ದಿನದ ಡೆಲಿವರಿ, ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಪ್ರೈಮ್ ರೀಡಿಂಗ್ ಮಾಡುವುದರೊಂದಿಗೆ ವಿಶೇಷ ಡೀಲ್ ಮತ್ತು ಡಿಸ್ಕೌಂಟ್‌ಗಳ ಬಗ್ಗೆ ಮೊದಲು ಅಪ್ಡೇಟ್ ನೀಡಲಾಗುತ್ತದೆ. ಅಲ್ಲದೆ ವಿಶೇಷ ಮಾರಾಟದಲ್ಲಿ ಪ್ರೈಮ್ ಸದಸ್ಯರಿಗೆ ಮೊದಲು ಪ್ರವೇಶಸುವ (Early Access) ಪ್ರಯೋಜನಗಳನ್ನು ಸಹ ನೀಡುತ್ತದೆ.
ಅಷ್ಟೇಯಲ್ಲದೆ ಅಮೆಜಾನ್ ಪ್ರೈಮ್ ಸದಸ್ಯರಿಗೆ (Amazon Prime Member) ವಿಶೇಷ ಬ್ಯಾಂಕ್ ಆಫರ್, ಕೂಪನ್, ವೋಚರ್ ಆಫರ್ಗಳೊಂದಿಗೆ ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲೆ ಉಚಿತ ಸ್ಕ್ರೀನ್ ರಿಪ್ಲೇಸೆಮೆಂಟ್ನಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಪ್ರೈಮ್ ಸದಸ್ಯರಿಗೆ ಈ ರೀತಿ ಹತ್ತಾರು ಅನುಕೂಲಗಳೊಂದಿಗೆ ಸಾಮಾನ್ಯ ಬಳಕೆದಾರರಿಗಿಂತ ಹೆಚ್ಚು ಮತ್ತು ಮೊದಲು ನಿಮ್ಮ ಒಂದಿಷ್ಟು ಹಣವನ್ನು ಉಳಿಸಿಕೊಳ್ಳಲು ಒಂದೊಳ್ಳೆ ಅವಕಾಶವನ್ನು ಅಮೆಜಾನ್ ನೀಡುತ್ತಿದೆ.