ಬಹುನಿರೀಕ್ಷಿತ Amazon Great Summer Sale ಇನ್ನೇನು ಶೀಘ್ರದಲ್ಲೇ ಪ್ರಾರಂಭ ಆಗಲಿದೆ. ಈ ಸಂದರ್ಭದಲ್ಲಿ ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉತ್ಪನ್ನಗಳು, ಹೊಸ ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅಮೆಜಾನ್ ಸೇಲ್ ಸೂಕ್ತ ಸಮಯವಾಗಿದೆ. ಈ ಮಾರಾಟದಲ್ಲಿ ಗ್ರಾಹಕರು ಹೆಚ್ಚಿನ ಡಿಸ್ಕೌಂಟ್‌ನಲ್ಲಿ ಹೊಸ ಉತ್ಪನ್ನ ಖರೀದಿಸಬಹುದು. ಹಾಗೆಯೇ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರು ಮತ್ತಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಅಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯವಿದೆ. ಹಾಗಾದರೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ದಿನಾಂಕ, ಡೀಲ್‌ಗಳು, ಬ್ಯಾಂಕ್ ಕೊಡುಗೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಇದೇ ಮೇ 8 ರಿಂದ ಪ್ರಾರಂಭ ಆಗಲಿದೆ. ಆದರೆ ಅಮೆಜಾನ್ ಪ್ರೈಮ್ ಸದಸ್ಯರು early access ಪಡೆಯುತ್ತಾರೆ. ಅಮೆಜಾನ್ ಎಲ್ಲಾ ಕೊಡುಗೆಗಳನ್ನು ಘೋಷಿಸಿಲ್ಲವಾದರೂ, ಬಳಕೆದಾರರು ಆರಂಭಿಕ ಡೀಲ್‌ಗಳನ್ನು ಟ್ರ್ಯಾಕ್ ಮಾಡಬಹುದು ಎಂದು ಟೀಸರ್ ಬ್ಯಾನರ್‌ಗಳು ಹೇಳುತ್ತವೆ. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ 10% ವರೆಗೆ ಇನ್‌ಸ್ಟಂಟ್ ರಿಯಾಯಿತಿ ಪಡೆಯಬಹುದು. ಅಲ್ಲದೇ EASY EMI ಮತ್ತು ಯಾವುದೇ ವೆಚ್ಚವಿಲ್ಲದ EMI ಯೋಜನೆಗಳು ಲಭ್ಯವಿದೆ. 10% ರಿಯಾಯಿತಿಯು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಅಥವಾ EASY EMI ವಹಿವಾಟುಗಳ ಮೂಲಕ ಮಾಡಿದ ಅರ್ಹ ಖರೀದಿಗಳಿಗೆ ನೇರವಾಗಿ ಅನ್ವಯಿಸುತ್ತದೆ.
ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ ಅಥವಾ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಗ್ರಾಹಕರು ಅನಿಯಮಿತ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದರ ಜೊತೆಗೆ ಆಯ್ದ ಖರೀದಿಗಳ ಮೇಲೆ ಫ್ಲಾಟ್ ರಿಯಾಯಿತಿಗಳು ಅಥವಾ 2,500 ರೂ.ಗಳ ವರೆಗಿನ ಕ್ಯಾಶ್‌ಬ್ಯಾಕ್‌ನಂತಹ ಇತರ ಸೀಮಿತ ಸಮಯದ ಕೊಡುಗೆಗಳನ್ನು ಪಡೆಯಬಹುದು.
ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ ಅಮೆಜಾನ್ ರಿಯಾಯಿತಿಗಳನ್ನು ನೀಡುತ್ತಿದೆ. ಶಿಯೋಮಿ ಪ್ಯಾಡ್ 8 ಡಿವೈಸ್ 30,999 ರೂ.ಗಳು (37,999 ರೂ.ಗಿಂತ ರಿಂದ ಕಡಿಮೆ), ಐಕ್ಯೂ 15R ಬೆಲೆ 42,999 ರೂ.ಗಳು (53,999 ರೂ.ಗಿಂತ ಕಡಿಮೆ) ಮತ್ತು ಜೆಬಿಎಲ್ 800 ಪ್ರೊ ಸೌಂಡ್‌ಬಾರ್ 49,999 ರೂ.ಗಳು (69,999ರೂ.ಗಳ) ಕ್ಕೆ ಲಭ್ಯವಿರುತ್ತದೆ.
ಹಾಗೆಯೇ ಈ ಮಾರಾಟದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಬೆಲೆ 94,999 ರೂ.ಗಳಿಗೆ ಇಳಿಯುವ ಸಾಧ್ಯತೆಗಳಿವೆ. ಅಲ್ಲದೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M17 5G ಫೋನ್ 13,999ರೂ.ಗಳು ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M56 ಮೊಬೈಲ್ 21,999 ರೂ.ಗಳಿಗೆ ಲಭ್ಯವಿರುತ್ತದೆ. ಇನ್ನು iQOO ನಿಯೋ 10 ಮೊಬೈಲ್ 34,999 ರೂ.ಗಳಲ್ಲಿ ಸಿಗಲಿದೆ.